ಕಲ್ಪ ಮೀಡಿಯಾ ಹೌಸ್ | ಹರಿಹರ |
ರೈಲ್ವೆ ನಿಲ್ದಾಣದ ಪ್ಲಾಟ್’ಫಾರಂನಲ್ಲಿ ಪ್ರಯಾಣಿಕರೊಬ್ಬರು ಅಚಾನಕ್ಕಾಗಿ ಮರೆತು ಹೋಗಿದ್ದ ಲ್ಯಾಪ್ ಟಾಪ್ ಇದ್ದ ಬ್ಯಾಗ್ ಒಂದನ್ನು ರೈಲ್ವೆ ಸಿಬ್ಬಂದಿ ಪತ್ತೆ ಮಾಡಿ, ಸುರಕ್ಷಿತವಾಗಿ ಪ್ರಯಾಣಿಕನ ಕೈಸೇರಿಸಿರುವ ಘಟನೆ ಹರಿಹರ ರೈಲು ನಿಲ್ದಾಣದಲ್ಲಿ ನಡೆದಿದೆ.
ಏನಾಯ್ತು?
ಪ್ರಯಾಣಿಕ ಎಸ್.ಎನ್. ನಂದಕಿಶೋರ್ ಎನ್ನುವವರು ಅ.25ರಂದು ಹರಿಹರ ದಿಂದ ರೈಲು ಸಂಖ್ಯೆ 22697ರಲ್ಲಿ ಪ್ರಯಾಣ ಆರಂಭಿಸುವ ಸಂದರ್ಭದಲ್ಲಿ ತಮ್ಮ ಲ್ಯಾಪ್ ಟಾಪ್ ಅನ್ನು ಹರಿಹರ ರೈಲು ನಿಲ್ದಾಣದ ಪ್ಲಾಟ್’ಫಾರಂ ಸಂಖ್ಯೆ 2/3 ರಲ್ಲಿ ಮರೆತು ಬಿಟ್ಟು ಹೋಗಿದ್ದರು.
ರೈಲ್ವೆ ಇಲಾಖೆಯ ನೌಕರರ ಈ ಸಮಯೋಚಿತ ಮತ್ತು ಪ್ರಾಮಾಣಿಕ ಕಾರ್ಯವು ನೈರುತ್ಯ ರೈಲ್ವೆ ನೌಕರರ ಪ್ರಾಮಾಣಿಕತೆ, ನಿಷ್ಠೆ ಹಾಗೂ ಪ್ರಯಾಣಿಕ ಸೇವೆಯತ್ತ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Discussion about this post