ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಸರ್ಕಾರಿ ನೌಕರರು ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುವ ಜೊತೆಯಲ್ಲಿಯೇ ಭ್ರಷ್ಟಾಚಾರದ ದುಷ್ಪರಿಣಾಮಗಳ ಕುರಿತಾಗಿಯೂ ಸಹ ಜಾಗೃತಿ ಮೂಡಿಸಬೇಕು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಬೇಲಾ ಮೀನಾ ಕರೆ ನೀಡಿದರು.
ಅ.27ರಿಂದ ನ.2ರವರೆಗೂ ಆಯೋಜಿಸಲಾಗಿರುವ ವಿಚಕ್ಷಣಾ ಜಾಗೃತಿ ಸಪ್ತಾಹದಲ್ಲಿ ಅವರು ಮಾತನಾಡಿದರು.
ವಿಜಿಲೆನ್ಸ್ ಜಾಗೃತಿ ಸಪ್ತಾಹದ ಉದ್ದೇಶ ಭ್ರಷ್ಟಾಚಾರ ನಿವಾರಣೆ ಹಾಗೂ ನೈತಿಕ ಆಡಳಿತವನ್ನು ಉತ್ತೇಜಿಸುವುದಾಗಿದೆ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠತೆಯನ್ನು ಪ್ರೋತ್ಸಾಹಿಸಲು ಹಾಗೂ ಭ್ರಷ್ಟಾಚಾರದ ದುಷ್ಟಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಚಕ್ಷಣಾ ಜಾಗೃತಿ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.

ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಲ್ಲಿ ಅಕ್ಟೋಬರ್ 27ರಿಂದ ನವೆಂಬರ್ 2ರವರೆಗೆ ವಿಚಕ್ಷಣ ಸಪ್ತಾಹ ನಡೆಯಲಿದೆ. ಇದರ ಅಂಗವಾಗಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಬೇಲಾ ಮೀನಾ ಅವರು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಇಂಟಿಗ್ರಿಟಿ ಪ್ಲೆಡ್ಜ್ (ಪ್ರಾಮಾಣಿಕತೆ ಪ್ರತಿಜ್ಞೆ) ಬೋಧಿಸಿದರು.
ಕೇಂದ್ರ ವಿಜೆಲೆನ್ಸ್ ಆಯೋಗ ರಾಷ್ಟçವ್ಯಾಪಿ ವಿಜಿಲೆನ್ಸ್: ನಮ್ಮ ಹಂಚಿಕೊAಡ ಜವಾಬ್ದಾರಿ ಎಂಬ ಥೀಮ್ ಅಡಿ ಈ ವಿಜಿಲೆನ್ಸ್ ಜಾಗೃತಿ ಸಪ್ತಾಹ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಹುಬ್ಬಳ್ಳಿ ರೈಲ್ವೆ ವಿಭಾಗವು ಕಾರ್ಯಾಗಾರಗಳು, ವಾಕಥಾನ್, ಚರ್ಚಾ ಹಾಗೂ ಪ್ರಬಂಧ ಸ್ಪರ್ಧೆ, ಜಾಗೃತಿ ಅಭಿಯಾನ ಮತ್ತು ಮಾಹಿತಿ ಶಿಬಿರ ಆಯೋಜಿಸಸಿದೆ. ಇಂದು ನಡೆದ ಪ್ರಾಮಾಣಿಕತೆ ಪ್ರತಿಜ್ಞೆ ಸಂದರ್ಭದಲ್ಲಿ ಎಲ್ಲ ವಿಭಾಗೀಯ ರೈಲ್ವೆಯ ಹಿರಿಯ ರೈಲ್ವೆ ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post