ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ ಎಸ್ ಸಿ ಆನರ್ಸ್ ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ರಸಗೊಬ್ಬರ ಕಲಬೆರಕೆ ಕಂಡುಹಿಡಿಯುವ ಸರಳ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿತೆಯನ್ನು ಚಿಕ್ಕಜೋಗಿಹಳ್ಳಿಯ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಾತ್ಯಕ್ಷಿಕೆಯನ್ನು ಒಂದು ಕಿರು ನಾಟಕದ ಮೂಲಕ ರೈತ ಹೇಗೆ ಕಲಬೆರಕೆಯಾದ ರಸಗೊಬ್ಬರ ಬಳಸಿ ಮೋಸ ಹೋಗುತ್ತಿದ್ದಾನೆ ಎಂದು ತಿಳಿಸಲಾಯಿತು. ಹಸಿರು ಕ್ರಾಂತಿಯ ನಂತರ ರೈತನಿಗೆ ಅಧಿಕ ಇಳುವರಿಗಾಗಿ ರೈತನಿಗೆ ರಸಗೊಬ್ಬರದ ಅವಶ್ಯಕತೆ ಹೆಚ್ಚಾಗಿದೆ. ಇದಕ್ಕೆ ಮಣ್ಣಿನ ಫಲವತ್ತತೆ ಕಡಿಮೆ ಆಗಿರುವುದು ಒಂದು ಕಾರಣ. ಹೀಗೆ ರಸಗೊಬ್ಬರದ ಮೇಲೆ ಅವಲಂಬಿತವಾಗಿರುವ ರೈತ ಅದರ ಗುಣಮಟ್ಟವನ್ನು ಅರಿತು ಉಪಯೋಗಿಸುವುದು ಉತ್ತಮ.

ಕಾರ್ಯಕ್ರಮದ ಅಂತ್ಯದಲ್ಲಿ ರೈತರು ತಮಗೊದಗಿದ ಸಂದೇಹಗಳನ್ನು ಕೇಳಿ ಉತ್ತರ ಪಡೆದುಕೊಂಡರು ಪ್ರಾತ್ಯಕ್ಷಿತಯು ಉತ್ತಮವಾಗಿತ್ತೆಂದು ,ತಾವು ಕೂಡ ತಾವು ಉಪಯೋಗಿಸುವ ರಸಗೊಬ್ಬರವನ್ನು ಪರೀಕ್ಷೆ ಮಾಡುತ್ತೇವೆಂದು ರೈತರು ಪ್ರತಿಕ್ರಿಯೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post