ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾರ್ತಿಕ ಶುದ್ಧ ದಶಮಿ ಅ.31ರ ಶುಕ್ರವಾರ ಸುಳಾದಿ ದಾಸರೆಂದೇ ಖ್ಯಾತರಾದ ಶ್ರೀವಿಜಯ ದಾಸರ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಮಾಧ್ವ ಮಹಾ ಮಂಡಳಿ ತಿಳಿಸಿದೆ.
ಅ.31ರ ಶುಕ್ರವಾರ ಬೆಳಗ್ಗೆ 9ಕ್ಕೆ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪ್ರಾಕಾರದಲ್ಲಿ ಯಾಯೀವಾರ (ನಗರ ಸಂಕೀರ್ತನೆ) ಜರುಗಲಿದೆ.
ನಂತರ ಜನ್ನಾಪುರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ 10.30ಕ್ಕೆ ಸರಿಯಾಗಿ ಮಠದ ಪ್ರಾಕಾರದಲ್ಲಿ ಯಾಯೀವಾರ (ನಗರ ಸಂಕೀರ್ತನೆ) ನಡೆಯಲಿದ್ದು, ನಂತರ ಶಿವಮೊಗ್ಗದ ಪಂಡಿತರಾದ ಶ್ರೀಜಯತೀರ್ಥಾರ್ಚಾ ಬಾಳಗಾರು, ಇವರಿಂದ ವಿಜಯದಾಸರ ಬಗ್ಗೆ ಜ್ಞಾನಸತ್ರ ನಡೆಯಲಿದೆ
ತದನಂತರ ಅಷ್ಟಾವಧಾನ, ವಿಶೇಷ ಮಂಗಳಾರತಿ, ತೀರ್ಥ ಪ್ರಸಾದ ಹೀಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಸರ್ವ ಆಸ್ತಿಕ ಮಹಾಶಯರು ದಾಸವರೇಣ್ಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಭಗವಂತನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿದ್ದಾರೆ.
ಸೇವಾ ವಿವರ: ಅನ್ನದಾನ ಸೇವಾ: ರೂ.2000, ಆರಾಧನಾ ಸೇವಾ: ರೂ.1000, ಜ್ಞಾನಸತ್ರ ಸೇವಾ: ರೂ.500, ಹಸ್ತೋದಕ ಸೇವಾ: ರೂ.300. ಹೆಚ್ಚಿನ ಮಾಹಿತಿಗಾಗಿ ಜಯತೀರ್ಥ: 9045956316, ವೆಂಕಟೇಶ್ ಕೆ ಆರ್: 7411576936, ಶ್ರೀನಿವಾಸಾರ್ಚಾ: 9980941580, ಡಾ. ಸುದರ್ಶನ: 9964278800ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















