ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಉಪ ವಿಭಾಗಕ್ಕೆ ಡಿವೈಎಸ್’ಪಿ ಆಗಿ ಹಿರಿಯ ಅಧಿಕಾರಿ ಪ್ರಕಾಶ್ ರಾಥೋಡ್ #Prakash Rathod ಅವರನ್ನು ನಿಯೋಜಿಸಲಾಗಿದೆ.
ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಕಾಶ್ ರಾಥೋಡ್ ಅವರನ್ನು ನಿಯೋಜಿಸಲಾಗಿದೆ.

ಅಲ್ಲದೇ, ಕೆಜೆ ಹಳ್ಳಿಯ ಉಪವಿಭಾಗದ ಎಸಿಪಿಯಾಗಿದ್ದ ಪ್ರಕಾಶ ರಥೋಡ್ ಅವರಿಗೆ ಪ್ರಕರಣಗಳ ತನಿಖೆಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಇತ್ತೀಚೆಗೆ ಕೇಂದ್ರ ಗೃಹಮಂತ್ರಿಯವರ ದಕ್ಷತಾ ಪದಕ ಘೋಷಣೆ ಮಾಡಿದೆ.
ಭದ್ರಾವತಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿವೈಎಸ್ಪಿ ನಾಗರಾಜ್ ಕೆ.ಆರ್. ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಡಿವೈಎಸ್ಪಿ ಹುದ್ದೆ ಖಾಲಿ ಇತ್ತು. ಈಗ ಕಳೆದ ಮೂರು ದಿನಗಳ ಹಿಂದೆ ಪ್ರಕಾಶ್ ರಾಥೋಡ್ ಭದ್ರಾವತಿಯ ಡಿವೈಎಸ್’ಪಿ ಆಗಿ ನಿಯುಕ್ತಿಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 













Discussion about this post