ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನಿರೀಕ್ಷಿತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು #SWR ನವೆಂಬರ್ 13 ರಂದು (ಗುರುವಾರ) ಹುಬ್ಬಳ್ಳಿಯಿಂದ ಯಲಹಂಕಕ್ಕೆ ಏಕಮುಖ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಒಂದು ದಿನಕ್ಕೆ ಏಕಮುಖ ವಿಶೇಷ ರೈಲು ಸಂಚಾರ ನಡೆಸಲಿದೆ.
07319 ಸಂಖ್ಯೆಯ ಎಸ್’ಎಸ್’ಎಸ್ #Hubli ಹುಬ್ಬಳ್ಳಿ – ಯಲಹಂಕ ಏಕಮುಖ ವಿಶೇಷ ರೈಲು ನವೆಂಬರ್ 13ರಂದು (ಗುರುವಾರ) ರಾತ್ರಿ 08:00 ಗಂಟೆಗೆ ಎಸ್’ಎಸ್’ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 09:20 ಗಂಟೆಗೆ ಯಲಹಂಕ ತಲುಪಲಿದೆ.

ಈ ವಿಶೇಷ ರೈಲು ಒಟ್ಟು 14 ಬೋಗಿಗಳನ್ನು ಹೊಂದಿದ್ದು, ಅದರಲ್ಲಿ 2 ಎಸಿ 2-ಟೈರ್, 3 ಎಸಿ 3-ಟೈರ್, 7 ಸ್ಲೀಪರ್ ಕ್ಲಾಸ್ ಮತ್ತು 2 ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post