ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕ್ಯಾನ್ಸರ್ #Cancer ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಎಮ್.ಐ.ಓ. ಅಂಗ ಸಂಸ್ಥೆಯಾದ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಶಿಕಾರಿಪುರದಲ್ಲಿ ಕ್ಯಾನ್ಸರ್ ಮಾಹಿತಿ ಕೇಂದ್ರವನ್ನು ಶಿಕಾರಿಪುರದಲ್ಲಿ ಪ್ರಾರಂಬಿಸಿರುವುದು ಇದರ ನೇತಾರರಾದ ಡಾ. ಡಿ. ಸುರೇಶ್ ರಾವ್‍ರವರು ಸಾಮಾಜಿಕ ಕಳಕಳಿ ತೋರುತ್ತದೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ತಿಳಿಸಿದರು.
ಅವರು ಶಿಕಾರಿಪುರದಲ್ಲಿ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ವತಿಯಿಂದ ಕ್ಯಾನ್ಸರ್ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಇಡೀ ದೇಶವೇ ಕ್ಯಾನ್ಸರ್ ಎಂಬ ಭಯಂಕರ ಕಾಯಿಲೆಯಿಂದ ಹಲವಾರು ಜನರ ಪ್ರಾಣಹಾನಿಗೆ ಕಂಟಕ ಕಾರಣವಾಗಿದೆ. ಆದರೆ ನಾವು ಮುಂಜಾಗ್ರತೆ ವಹಿಸಿದರೆ ಇಂತಹ ಮಾರಕ ರೋಗವನ್ನು ದೂರವಿಡುವ ವಿಧಾನವನ್ನು ಈ ಮಾಹಿತಿ ಕೇಂದ್ರದಲ್ಲಿ ಸಿಗುವಂತೆ ಮಾಡಿರುವುದು ಅಪರೂಪದ ಕಾರ್ಯವಾಗಿದೆ ಎಂದರು.

ರೋಗ ಬರುವ ಮೊದಲು ಅದು ಏಕೆ, ಹೇಗೆ ಬರುತ್ತದೆ ಎಂಬ ಅರಿವು ನಮಗಿದ್ದರೆ ನಾವೆಲ್ಲ ಜಾಗೃತರಾಗುತ್ತೇವೆ. ಇಂತಹ ಒಳ್ಳೆಯ ಕಾರ್ಯ ಮಾಡುತ್ತಿರುವ ಸಂಜೀವಿನಿ ಕ್ಯಾನ್ಸರ್ ಟ್ರಸ್ಟ್ ಪ್ರತೀ ತಾಲೂಕಿನಲ್ಲಿಯೂ ಕೂಡ ಪ್ರಾರಂಬಿಸಲಿ ನಮ್ಮ ಕಡೆಯಿಂದ ಸಿಗುವ ಎಲ್ಲಾ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಒಂದು ಲಕ್ಷ ಜನರನ್ನು ಸಂಪರ್ಕಿಸಿ ಕ್ಯಾನ್ಸರ್ ಕುರಿತು 12 ಪ್ರಶ್ನೆಗಳ ಅಭಿಯಾನಕ್ಕೆ ಚಾಲನೆ ನೀಡಿದರು.

ಶೌರ್ಯ ಸಂಸ್ಥೆಯ ಅಧ್ಯಕ್ಷ ಗಿರೀಶ್ ಮಾತನಾಡಿ, ಎಮ್.ಐ.ಓ ಆಸ್ಪತ್ರೆಯ ಜೊತೆಗೆ ನಾವು ನಮ್ಮ ತಾಲೂಕಿನಲ್ಲಿ ಕ್ಯಾನ್ಸರ್ ಕುರಿತು ಜನಜಾಗೃತಿ ಅಭಿಯಾನ ಕೈಗೊಳ್ಳಲು ಸಿದ್ಧತೆ ನಡೆಸಿದ್ದೇವೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ತಾಲೂಕು ಯೋಜನಾಧಿಕಾರಿ ಆರ್. ನಂಜುಂಡಿ ಮಾತನಾಡಿ, ಕ್ಯಾನ್ಸರ್ ಅಭಿಯಾನಕ್ಕೆ ನಮ್ಮ ಸಂಸ್ಥೆಯು ಕೈ ಜೋಡಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಸಂಜೀವಿನಿ ಟ್ರಸ್ಟ್ ಅಧ್ಯಕ್ಷರಾದ ಡಾ.ಡಿ. ಸುರೇಶ್ ರವರು ಕ್ಯಾನ್ಸರ್ ಮಾಹಿತಿ ಕೇಂದ್ರದ ಕಾರ್ಯ ವಿಧಾನವನ್ನು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post