ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಎರೆಹುಳು ಆಧಾರಿತ “ಎರೆಜಲ” ತಯಾರಿಕೆ ಮತ್ತು ಬಳಕೆ ಕುರಿತು ಗುಂಪು ಚರ್ಚೆ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದರು..
ವಿದ್ಯಾರ್ಥಿಗಳು ರೈತರನ್ನು ಸ್ವಾಗತಿಸಿ,ಇಂದಿನ ಕೃಷಿಯಲ್ಲಿ ಜೈವಿಕದ ಅವಶ್ಯಕತೆ ಮತ್ತು ಎರೆಹುಳುವಿನಿಂದ ದೊರೆಯುವ ವರ್ಮಿವಾಶ್ ದ್ರಾವಣದ ಮಹತ್ವವನ್ನು ವಿವರಿಸಿದರು.
ಸಸ್ಯೌಷಧೀಯ ಗುಣಗಳಿಂದ ಕೂಡಿದ ವರ್ಮಿವಾಶ್ ಎರೆಜಲ ಕೃಷಿಯಲ್ಲಿ ನೀಡುವ ಪ್ರಯೋಜನಗಳು, ಬೆಳೆ ರೋಗ ನಿರ್ವಹಣೆ, ಮಣ್ಣಿನ ಪೋಷಕಾಂಶ ಸುಧಾರಣೆ ಕುರಿತು ಮಾಹಿತಿ ಹಂಚಿದರು.
ವಿದ್ಯಾರ್ಥಿಗಳು ಸ್ಥಳದಲ್ಲೇ ನಿರ್ಮಿಸಿದ ಎರೆಹುಳು ಬಳಸಿ ವರ್ಮಿವಾಶ್ ತಯಾರಿಕೆಯ ಸಂಪೂರ್ಣ ವಿಧಾನವನ್ನು ತೋರಿಸಿದರು ಎರೆಹುಳುವಿನ ಪ್ರಭೇದಗಳ ಪರಿಚಯ,ಯುನಿಟ್ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳ ವಿವರ,ಅಂದರೆ ಅತ್ಯಂತ ಸುಲಭವಾಗಿ ಸಿಗುವ ಇಟ್ಟಿಗೆ, ಜಲ್ಲಿಕಲ್ಲು, ಮರಳು,ಗೋಣಿಚೀಲ, ಕೊಟ್ಟಿಗೆ ಗೊಬ್ಬರ ಮತ್ತು ಎರೆಹುಳುಗಳನ್ನು ಉಪಯೋಗಿಸಿಕೊಂಡು ಮಾಡಿ ತೋರಿಸಿದರು,ನೀರಿನ ಪ್ರಮಾಣ, ಗಾಳಿಯ ಅವಕಾಶ ಮತ್ತು ತೇವಾಂಶದ ಸಮತೋಲನ, ವರ್ಮಿವಾಶ್ ಸಂಗ್ರಹಿಸುವ ತಂತ್ರ,1 ಲೀಟರ್‌ಗೆ ಬಳಸುವ ಮಿಶ್ರಣ ,ಸಸ್ಯಗಳಿಗೆ ಸ್ಪ್ರೆ ಮಾಡುವ ಸರಿಯಾದ ವಿಧಾನ ಎಲ್ಲವನ್ನೂ ವಿದ್ಯಾರ್ಥಿಗಳು ಹೇಳಿ ತೋರಿಸಿಕೊಟ್ಟರು.
“ಜಮೀನಿನಲ್ಲಿ ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಈ ರೀತಿಯ ಎರೆಹುಳು ವರ್ಮಿವಾಶ್ ತಂತ್ರಜ್ಞಾನ ನಮ್ಮಂತಹ ಸಣ್ಣ ರೈತರಿಗೆ ಆಶಾಕಿರಣ,” ಎಂದರು.
ಇನ್ನಷ್ಟು ರೈತರು ಕೂಡ ವಿದ್ಯಾರ್ಥಿಗಳ ಜ್ಞಾನ ಹಂಚಿಕೆ, ಸರಳ ಭಾಷೆಯ ವಿವರಣೆ, ಮತ್ತು ಪ್ರಾಯೋಗಿಕ ಪ್ರದರ್ಶನವನ್ನು ಶ್ಲಾಘಿಸಿದರು.
ಗ್ರಾಮದ ರೈತರಾದ ಕುಮಾರಸ್ವಾಮಿ,ದೇವೇಂದ್ರಪ್ಪ,ನಾಗರಾಜ್, ಕೊಟ್ರೇಶ್ ಮತ್ತು ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















