ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ರಾಗಿ ಬಿಸ್ಕಿಟ್ ಮಾಡುವ ವಿಧಾನದ ಪ್ರಾತ್ಯಕ್ಷಿತೆಯನ್ನು ಚಿಕ್ಕಜೋಗಿಹಳ್ಳಿಯ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಗಿ ಕರ್ನಾಟಕದ ಅತ್ಯಂತ ಪುರಾತನ ಹಾಗೂ ಪೌಷ್ಟಿಕಾಂಶಯುಕ್ತ ಸಮೃದ್ಧ ಧಾನ್ಯವಾಗಿದೆ. ರಾಗಿಯಲ್ಲಿರುವ ಕ್ಯಾಲ್ಸಿಯಂ, ಕಬ್ಬಿನ, ಪ್ರೋಟೀನ್, ನಾರು ಹಾಗೂ ವಿವಿಧ ಖನಿಜಾಂಶಗಳನ್ನು ಮಾನವ ದೇಹಕ್ಕೆ ಅಗತ್ಯವಾದ ಪೌಷ್ಟಿಕತೆಯನ್ನು ಒದಗಿಸುತ್ತದೆ. ಮಕ್ಕಳಿಂದ ವಯೋ ವೃದ್ಧರ ತನಕ ಎಲ್ಲರ ಆರೋಗ್ಯಕ್ಕೂ ಸೂಕ್ತವಾದ ಈ ಧಾನ್ಯ ರಾಗಿಮುದ್ದೆ, ರಾಗಿ ರೊಟ್ಟಿ ,ಅಂಬಳಿ ಮುಂತಾದ ಅನೇಕ ರುಚಿಕರವಾದ ಆಹಾರಗಳ ಮೂಲಕ ನಮ್ಮ ನಿತ್ಯ ಆಹಾರದಲ್ಲಿ ಮಹತ್ವದ ಸ್ಥಾನ ಪಡೆದಿದೆ.

ಮೊದಲಿಗೆ ರಾಗಿಯ ಮಹತ್ವವನ್ನು ತಿಳಿಸಿ ನಂತರ ರಾಗಿ ಬಿಸ್ಕೆಟ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಅದನ್ನು ಹೇಗೆ ತಯಾರಿಸಬೇಕೆಂದು ಹಂತ ಹಂತವಾಗಿ ತಿಳಿಸಲಾಯಿತು. ಜೊತೆಗೆ ಮಹಿಳೆಯರು ಈ ರಾಗಿ ಬಿಸ್ಕೆಟ್ ಅನ್ನು ಮನೆಯಲ್ಲಿ ತಯಾರಿಸಿ ಸ್ವಂತ ಉದ್ಯೋಗ ಮಾಡಿ ಸ್ವಾವಲಂಬಿಗಳಾಗಬಹುದೆಂದು ಮನವರಿಕೆ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post