ಕಲ್ಪ ಮೀಡಿಯಾ ಹೌಸ್ | ತೆಲಂಗಾಣ |
ದೇಶದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು #Christmas ಸಂಭ್ರಮದಿಂದ ಆಚರಿಸುವಂತಾಗಿರುವ ಹಿಂದೆ ಸೋನಿಯಾ ಗಾಂಧಿಯವರ ತ್ಯಾಗವಿದೆ ಎಂಬ ಹೇಳಿಕೆಯನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ #CM Revantha Reddy ನೀಡಿದ್ದು, ಈ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿಕೊಂಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನಾವೆಲ್ಲಾ ಕ್ರಿಸ್ಮಸ್ ಆಚರಣೆ ಮಾಡುವ ಹಿಂದೆ ಸೋನಿಯಾ ಗಾಂಧೀಯ #Soniya Gandhi ಅತಿ ದೊಡ್ಡ ತ್ಯಾಗವಿದೆ. ಇದೇ ತಿಂಗಳು ಸೋನಿಯಾ ಗಾಂಧಿ ಹುಟ್ಟು ಹಬ್ಬವೂ ಇರುವುದು ಡಿಸೆಂಬರ್ ತಿಂಗಳು ಭಾರೀ ವಿಶೇಷವಾದುದು. ಇದಕ್ಕೆ ಪೂರಕಾಗಿ ಇದೇ ತಿಂಗಳು ಕ್ರಿಸ್ಮಸ್ ಹಬ್ಬದ ಆಚರಣೆಯೂ ಇದೆ. ಇದೇ ತಿಂಗಳು ತೆಲಂಗಾಣ ರಾಜ್ಯವಾಗಿ ಉದಯವಾಗಿತ್ತು ಎಂದಿದ್ದಾರೆ.
ಇನ್ನು, ರೇವಂತ್ ರೆಡ್ಡಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, ಮುಖ್ಯಮಂತ್ರಿಗಳು ರಾಜಕೀಯ ಜೊತೆಗೆ ಧರ್ಮಗಳನ್ನು ಬೆರೆಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಗಾಂಧಿ ಕುಟಂಬವನ್ನು ಓಲೈಸಲು ಕ್ರಿಶ್ಟಿಯನ್, ಮುಸ್ಲಿಮರ ಓಲೈಕೆಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದೆ.
ಈ ನಡುವೆಯೇ ತೆಲಂಗಾಣ ಸರ್ಕಾರ ಹೈದರಾಬಾದ್ ಲಾಲ್ ಬಹುದ್ದೂರ್ ಕ್ರೀಡಾಂಗಣದಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ ಆಯೋಜಿಸಿದೆ. ಈ ಆಚರಣೆಯಲ್ಲಿ ಭಾಗವಹಿಸುವುದಕ್ಕಾಗಿ ಕ್ರೈಸ್ತ ಬಾಂಧವರನ್ನು ತೆಲಂಗಾಣ ಸರ್ಕಾರ ಆಹ್ವಾನಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















