ಕಲ್ಪ ಮೀಡಿಯಾ ಹೌಸ್ | ಗರ್ತಿಕೆರೆ(ಶಿವಮೊಗ್ಗ) |
ಲಾರಿಯೊಂದು ಬೈಕ್ ಸವಾರನ ಮೈಮೇಲೆ ಹರಿದ #Lorry runs over biker ಪರಿಣಾಮ ಯುವಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗರ್ತಿಕೆರೆ ಬಳಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಗರ್ತಿಕೆರೆ ಸಮೀಪದ ಸುಣ್ಣದಬಸ್ತಿ ಗ್ರಾಮದ ಯುವಕ ನಯಾಜ್(38) ಎಂದು ಗುರುತಿಸಲಾಗಿದೆ.
ಸುಣ್ಣದಬಸ್ತಿ ಬಸ್ ನಿಲ್ದಾಣದ ಬಳಿಯಲ್ಲಿ ರಿಪ್ಪನ್’ಪೇಟೆಯಿಂದ ಕೋಣಂದೂರು ಕಡೆಗೆ ಜಂಬಿಟ್ಟಿಗೆಯ ಲಾರಿ ತೆರಳುತ್ತಿತ್ತು. ಈ ವೇಳೆ ಪಾರ್ಸಲ್ ಕೊಡಲು ರಸ್ತೆ ಬದಿಯಲ್ಲಿ ನಿಂತಿದ್ದ ನಯಾಜ್ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತ ನಯಾಜ್ ತೀರ್ಥಹಳ್ಳಿಯಿಂದ ರಿಪ್ಪನ್’ಪೇಟೆ ಕಡೆಗೆ ತೆರಳುತಿದ್ದ ಬಸ್ ಗೆ ಪಾರ್ಸಲ್ ಹಾಕಲು ನಿಂತಿದ್ದರು.
ಘಟನಾ ಸ್ಥಳಕ್ಕೆ ಪಿಎಸ್’ಐ ರಾಜು ರೆಡ್ಡಿ ಹಾಗೂ ಸಿಬ್ಬಂದಿಗಳು ತೆರಳಿ, ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















