ಕಲ್ಪ ಮೀಡಿಯಾ ಹೌಸ್ | ಸಿನಿಮಾ ಸುದ್ಧಿ |
ಸೂಪರ್ ಸ್ಟಾರ್ ರಜನಿಕಾಂತ್ #SuperStar Rajanikanth ಅವರಿಗೆ ಕೂಲಿ #Coolie ಚಿತ್ರ ನಿರ್ದೇಶನ ಮಾಡಿದ್ದ ಕಾಲಿವುಡ್‍ನ ಯಶಸ್ಸಿ ನಿರ್ದೇಶಕ ಲೋಕೇಶ್ ಕನಕರಾಜು #Director Lokesh Kanakaraju ಇದೀಗ ತೆಲುಗು ನಟ ಅಲ್ಲು ಅರ್ಜುನ್ ಅವರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ಧಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ, ನಿರೀಕ್ಷೆ ಹೆಚ್ಚು ಮಾಡಿದೆ
ಕಳೆದ ವರ್ಷ ಲೋಕೇಶ್ ಕನಕರಾಜ್ ರಜಿನಿಕಾಂತ್ ಅವರ ಜತೆ ‘ಕೂಲಿ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಹುತಾರಾಗಣದ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಾಣದಿದ್ದರೂ ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಗಳಿಕೆ ಮಾಡಿತ್ತು. ಇದರ ಬೆನ್ನಲ್ಲೇ ಲೋಕೇಶ್ ಕನಕರಾಜು ಅವರ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲಕ್ಕೆ ತೆರೆಬಿದ್ದಿ.
ಕಳೆದ ಕೆಲ ಸಮಯದ ಹಿಂದಷ್ಟೇ ಲೋಕೇಶ್ – ಅಲ್ಲು ಅರ್ಜುನ್ #Allu Arjun ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿತ್ತು. ಇದೀಗ ಸಿನಿಮಾದ ಸ್ಕ್ರಿಪ್ಟ್ ಅಂತಿಮವಾಗಿದ್ದು, ಚಿತ್ರ ಸೆಟ್ಟೇರೋದು ಪಕ್ಕಾ ಎಂದಿದ್ದಾರೆ.
‘ಪುಷ್ಪ’ ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ ಖ್ಯಾತ ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಜೊತೆಗೆ ಬನ್ನಿ ವಾಸ್ ನಟ್ಟಿ, ಸ್ಯಾಂಡಿ ಮತ್ತು ಸ್ವಾತಿ ನಿರ್ಮಾಣದಲ್ಲಿ ಕೈಜೋಡಿದ್ದಾರೆ.
ಪುಷ್ಪ #Pushpa ಸರಣಿಯ ಚಿತ್ರಗಳಿಂದ ದೇಶಾದ್ಯಂತ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವ ಅಲ್ಲು ಅರ್ಜುನ್ ನಟನೆಯ ಚಿತ್ರಕ್ಕೆ ತಮಿಳಿನ ಯಶಸ್ವಿ ಸಂಗೀತ ನಿರ್ದೇ± ರಾಕ್‍ಸ್ಟಾರ್ ಅನಿರುದ್ಧ್ ತಂಡ ಸೇರಿಕೊಂಡು ಹಿಟ್ ಹಾಡುಗಳು ಪಕ್ಕಾ ಎನ್ನುವಂತಾಗಿದೆ
ಆಗಸ್ಟ್ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು ಚಿತ್ರಕ್ಕೆ ತಾತ್ಕಾಲಿಕವಾಗಿ ಎಎ23 ಎಂದು ಹೆಸರಿಡಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್, ಯಶಸ್ವಿ ನಿರ್ದೇಶಕ ಲೋಕೇಶ್ ಕನಕ ರಾಜ್ ಮತ್ತು ರಾಕ್ ಸ್ಟಾರ್ ಅನಿರುದ್ದ ಜೊತೆಯಾಗಿರುವುದು ಭಾರತೀಯ ಚಿತ್ರರಂಗದಲ್ಲಿ ತೀವ್ರ ಕುತೂಹಲ ಹೆಚ್ಚು ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















