ಕಲ್ಪ ಮೀಡಿಯಾ ಹೌಸ್ | ಗೋವಾ |
ಇಂಡಿಯನ್ ರೇಸಿಂಗ್ ಫೆಸ್ಟಿವಲ್ #Indian Racing Festival ತನ್ನ ಬಹು ನಿರೀಕ್ಷಿತ ಗೋವಾ ಪ್ರವೇಶವನ್ನು ಫೆಬ್ರವರಿ 14–15 ರಂದು ನಡೆಯಲಿರುವ ಹೈ-ಆಕ್ಟೇನ್ ಫಾರ್ಮುಲಾ ಸ್ಟ್ರೀಟ್ ರೇಸ್ ವೀಕೆಂಡ್ ಮೂಲಕ ಮಾಡಲಿದೆ. ಚಾಂಪಿಯನ್‌ಶಿಪ್‌ನ ರೌಂಡ್ 4 ಆಗಿರುವ ಈ ಸ್ಪರ್ಧೆ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ #Manohar International Airport ನಡೆಯಲಿದೆ.
ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ #Chief Minister Dr. Pramod Sawant ಅವರು ಈ ಕಾರ್ಯಕ್ರಮವನ್ನು ಅಧಿಕೃತವಾಗಿ ಘೋಷಿಸಿದ್ದು, ಇದು ಗೋವಾವನ್ನು ಪ್ರಮುಖ ಮೋಟಾರ್‌ಸ್ಪೋರ್ಟ್ ತಾಣವಾಗಿ ಮತ್ತಷ್ಟು ಎತ್ತಿ ಹಿಡಿಯಲಿದೆ.
ಕೊಯಂಬತ್ತೂರಿನ ಕಾರಿ ಮೋಟಾರ್ ಸ್ಪೀಡ್ ವೇನಲ್ಲಿ ನಡೆದ ರೋಚಕ ರೌಂಡ್ 3 ನಂತರ, ಚಾಂಪಿಯನ್‌ಶಿಪ್ ಇದೀಗ ಪಶ್ಚಿಮ ಭಾರತದತ್ತ ಸಾಗುತ್ತಿದ್ದು, ಟೈಟಲ್ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಈ ಬಾರಿ ಗಮನದ ಕೇಂದ್ರವಾಗಿರುವ ಗೋವಾ, ಮೊದಲ ಬಾರಿಗೆ ಎಫ್‌ಐಎ ಮಾನ್ಯತೆ ಪಡೆದ ಸ್ಟ್ರೀಟ್ ಸರ್ಕ್ಯೂಟ್‌ಗೆ ಆತಿಥ್ಯ ವಹಿಸಲಿದೆ. 2.064 ಕಿಲೋಮೀಟರ್ ಉದ್ದದ ಈ ಸರ್ಕ್ಯೂಟ್ ದೃಶ್ಯ ವೈಭವದ ಜೊತೆಗೆ ತಾಂತ್ರಿಕ ಸವಾಲುಗಳನ್ನು ಒಡ್ಡುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. 12 ತಿರುವುಗಳನ್ನು ಹೊಂದಿರುವ ಈ ವಿಶಿಷ್ಟ ಲೇಔಟ್, ಮೊದಲ ಬಾರಿಗೆ ವಿಶ್ವಮಟ್ಟದ ರೇಸಿಂಗ್ ಅನ್ನು ಕಣ್ತುಂಬಿಕೊಳ್ಳುವ ಅಭಿಮಾನಿಗಳಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ಗೆ ಗೋವಾಕ್ಕೆ ಸ್ವಾಗತ ಕೋರಿದ ಗೌರವಾನ್ವಿತ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮಾತನಾಡಿ, “ಬಹು ನಿರೀಕ್ಷೆಯ ನಂತರ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಫೆಬ್ರವರಿ 14 ಮತ್ತು 15ರಂದು ಗೋವಾಕ್ಕೆ ಬರುತ್ತಿದೆ. ಈ ಮಟ್ಟದ ಮೋಟಾರ್‌ಸ್ಪೋರ್ಟ್ ಕಾರ್ಯಕ್ರಮವನ್ನು ಆಯೋಜಿಸುವುದು, ಗೋವಾಕ್ಕೆ ವಿಶ್ವಮಟ್ಟದ ಕ್ರೀಡೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವ ಸಾಮರ್ಥ್ಯವಿದೆ ಎಂಬುದನ್ನು ತೋರಿಸುತ್ತದೆ. ಫಾರ್ಮುಲಾ ರೇಸಿಂಗ್ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಸ್ಥಳೀಯ ವ್ಯಾಪಾರಗಳು ಮತ್ತು ಸೇವಾ ಕ್ಷೇತ್ರಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಜೊತೆಗೆ ಎಂಜಿನಿಯರಿಂಗ್, ತಂತ್ರಜ್ಞಾನ, ಈವೆಂಟ್ ಮ್ಯಾನೇಜ್‌ಮೆಂಟ್ ಹಾಗೂ ಮೋಟಾರ್‌ಸ್ಪೋರ್ಟ್ ಕಾರ್ಯಾಚರಣೆಗಳಲ್ಲಿ ಯುವಕರಿಗೆ ಹೊಸ ದಾರಿಗಳನ್ನು ತೆರೆದಿಡಲಿದೆ. ಜಗತ್ತಿನಾದ್ಯಂತದಿಂದ ಆಗಮಿಸುವ ತಂಡಗಳು, ಅಭಿಮಾನಿಗಳು ಮತ್ತು ಪ್ರವಾಸಿಗರನ್ನು ಗೋವಾಕ್ಕೆ ಸ್ವಾಗತಿಸಲು ನಾವು ಎದುರುನೋಡುತ್ತಿದ್ದೇವೆ” ಎಂದರು.
ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಕೇವಲ ಒಂದು ಅಂತಾರಾಷ್ಟ್ರೀಯ ವೇದಿಕೆಯಷ್ಟೇ ಅಲ್ಲದೆ, ಇಲ್ಲಿ ಅಂತಾರಾಷ್ಟ್ರೀಯ ಹಾಗೂ ಭಾರತೀಯ ಚಾಲಕರು ಒಟ್ಟಿಗೆ ಸ್ಪರ್ಧಿಸುತ್ತಾರೆ. ಪ್ರತಿಯೊಂದು ತಂಡವೂ ನಾಲ್ವರು ಚಾಲಕರನ್ನು ಒಳಗೊಂಡಿದ್ದು, ಒಬ್ಬ ಅನುಭವಸಂಪನ್ನ ಅಂತಾರಾಷ್ಟ್ರೀಯ ಚಾಲಕ, ಒಬ್ಬ ಉದಯೋನ್ಮುಖ ಅಂತಾರಾಷ್ಟ್ರೀಯ ಚಾಲಕ, ಒಬ್ಬ ಭಾರತೀಯ ಚಾಲಕ ಹಾಗೂ ಒಬ್ಬ ಮಹಿಳಾ ಚಾಲಕಿ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಸ್ಟ್ರೀಟ್ ರೇಸಿಂಗ್ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಮೂಲ ತತ್ವವಾಗಿದ್ದು, ಭಾರತದಲ್ಲಿ ಮೋಟಾರ್‌ಸ್ಪೋರ್ಟ್‌ಗೆ ಹೊಸ ಆಯಾಮ ನೀಡುವ ಗುರಿಯನ್ನು ಹೊಂದಿದೆ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ನಡೆದ ಹಿಂದಿನ ಸ್ಟ್ರೀಟ್ ರೇಸ್‌ಗಳ ಯಶಸ್ಸಿನ ನಂತರ, ರೇಸಿಂಗ್ ಪ್ರೊಮೊಶನ್ಸ್ ಪ್ರೈ. ಲಿ. (RPPL) ಮತ್ತೊಮ್ಮೆ ಗಡಿಗಳನ್ನು ಮೀರಿ, ಅಂತಾರಾಷ್ಟ್ರೀಯ ಮಟ್ಟದ ಸರ್ಕ್ಯೂಟ್‌ಗಳು, ವಿಶ್ವಮಟ್ಟದ ಎಂಜಿನಿಯರಿಂಗ್ ಮತ್ತು ಅಭಿಮಾನಿಗಳಿಗೆ ಸಮೀಪದ ಅನುಭವವನ್ನು ಒದಗಿಸುತ್ತಿದೆ.
ರೇಸಿಂಗ್ ಪ್ರೊಮೊಶನ್ಸ್ ಪ್ರೈ. ಲಿ. (RPPL) ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ ಮಾತನಾಡಿ, “ಸ್ಟ್ರೀಟ್ ಸರ್ಕ್ಯೂಟ್‌ಗಳು ಭಾರತೀಯ ಮೋಟಾರ್‌ಸ್ಪೋರ್ಟ್‌ನ ಮುಂದಿನ ಅಧ್ಯಾಯ. ಇವು ಕ್ರೀಡೆಯೊಂದಿಗೆ ಜನರು ಸಂಪರ್ಕಿಸುವ ವಿಧಾನವನ್ನೇ ಬದಲಿಸುತ್ತವೆ. ಗೋವಾದಲ್ಲಿ ನಡೆಯಲಿರುವ ಈ ರೌಂಡ್ ನಮ್ಮ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ಸ್ಟ್ರೀಟ್ ರೇಸ್ ಹಂತದೊಂದಿಗೆ, ನಾವು ಕೇವಲ ಮೋಟಾರ್‌ಸ್ಪೋರ್ಟ್‌ನಲ್ಲಷ್ಟೇ ಅಲ್ಲ, ಅದು ಭಾರತದ ನಗರಗಳು, ಸಂಸ್ಕೃತಿ ಹಾಗೂ ಯುವಕರೊಂದಿಗೆ ಹೇಗೆ ಸಂಪರ್ಕ ಹೊಂದುತ್ತದೆ ಎಂಬುದರಲ್ಲಿಯೂ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದ್ದೇವೆ” ಎಂದರು.|
ಈ ರೇಸಿಂಗ್ ಫೆಸ್ಟಿವಲ್‌ಗೆ ಖ್ಯಾತ ನಟರು ಹಾಗೂ ಕ್ರೀಡಾ ತಾರೆಗಳ ತಂಡ ಮಾಲೀಕತ್ವವೂ ವಿಶೇಷ ಮೆರುಗು ನೀಡುತ್ತಿದೆ. ಜಾನ್ ಅಬ್ರಹಾಂ (ಗೋವಾ ಏಸಸ್ ಜೆಎ ರೇಸಿಂಗ್), ಅರ್ಜುನ್ ಕಪೂರ್ (ಸ್ಪೀಡ್ ಡೀಮನ್ಸ್ ದೆಹಲಿ), ಸೌರವ್ ಗಂಗೂಲಿ (ಕೋಲ್ಕತ್ತಾ ರಾಯಲ್ ಟೈಗರ್ಸ್), ನಾಗ ಚೈತನ್ಯ (ಹೈದರಾಬಾದ್ ಬ್ಲಾಕ್ ಬರ್ಡ್ಸ್), ಕಿಚ್ಚ ಸುದೀಪ್ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) ಹಾಗೂ ಡಾ. ಶ್ವೇತಾ ಸುಂದೀಪ್ ಆನಂದ್ (ಚೆನ್ನೈ ಟರ್ಬೋ ರೈಡರ್ಸ್) ಸೇರಿದಂತೆ ಹಲವರು ತಂಡ ಮಾಲೀಕರಾಗಿದ್ದಾರೆ.
ಗೋವಾದಲ್ಲಿ ಈ ರೇಸ್ ವೀಕ್ಷಿಸಲು ಬಯಸುವ ಅಭಿಮಾನಿಗಳಿಗಾಗಿ, ಟಿಕೆಟ್‌ಗಳು ಶೀಘ್ರದಲ್ಲೇ District by Zomato ಆ್ಯಪ್‌ನಲ್ಲಿ ಲಭ್ಯವಾಗಲಿವೆ. ರೌಂಡ್ 4 ಅನ್ನು Star Sports Select 2 ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುತ್ತಿದ್ದು, JioHotstar ನಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಮೂಲಕ ದೇಶಾದ್ಯಂತ ವೀಕ್ಷಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















