ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ರೈಲ್ವೆ ಇತಿಹಾಸದಲ್ಲಿ ಕ್ರಾಂತಿಯನ್ನೇ ಸೃಷ್ಠಿಸಿರುವ ವಂದೇ ಭಾರತ್ ರೈಲುಗಳಿಗೆ ವಿವಿಧ ರಾಜ್ಯಗಳಲ್ಲಿ ಜನರಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಇದಕ್ಕೆ ತಕ್ಕಂತೆ ರೈಲ್ವೆ ಇಲಾಖೆ ಹಲವು ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ.
ಪ್ರಮುಖವಾಗಿ 2030ರೊಳಗೆ 800 ರೈಲುಗಳು ಹಾಗೂ 2047ರೊಳಗೆ 4,500 ವಂದೇ ಭಾರತ್ ರೈಲುಗಳ #VandeBharatTrain ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ವರದಿಯಾಗಿದೆ.
ಮೂಲಸೌಕರ್ಯ ಯೋಜನೆಯ ಆಧುನೀಕರಣದ ಭಾಗವಾಗಿ ರೈಲ್ವೆಯು ತನ್ನ ಸೆಮಿ ಹೈ ಸ್ಪೀಡ್ ರೈಲಿನ #SemiHighSpeedTrain ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿದೆ.
ನವದೆಹಲಿ-ಕಾನ್ಸುರ-ಪ್ರಯಾಗರಾಜ್-ವಾರಾಣಸಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿನ ಮೊದಲ ಸಂಚಾರ 2019ರ ಫೆ.15ರಂದು ಆರಂಭಗೊಂಡಿತ್ತು.
ಪ್ರಸ್ತುತ 80ಕ್ಕೂ ಹೆಚ್ಚು ವಂದೇ ಭಾರತ್ ಎಕ್ಸ್’ಪ್ರೆಸ್ ರೈಲುಗಳು ದೇಶದ 280 ಜಿಲ್ಲೆಗಳ ಪ್ರಮುಖ ನಗರಗಳ ನಡುವೆ ಸಂಚರಿಸುತ್ತಿವೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಿಸಲಾದ ಪ್ರತಿ ರೈಲು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಚಾರ ನಡೆಸುತ್ತಿದ್ದು, ಗರಿಷ್ಠ 160 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ ಎಂದು ರೈಲ್ವೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















