ಕಲ್ಪ ಮೀಡಿಯಾ ಹೌಸ್ | ತಿರುವನಂತಪುರಂ |
ರೀಲ್ಸ್ ಹಾಗೂ ವೀವ್ಸ್’ಗಾಗಿ #Views ವ್ಯಕ್ತಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಮಾಡಿ ವೀಡಿಯೋ ಹಂಚಿಕೊಂಡು, ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಕಾರಣವಾಗಿದ್ದ ಶಿಂಜಿತಾ ಮುಸ್ತಫಾಳನ್ನು ಕೇರಳ #Kerala ಪೊಲೀಸರು ಬಂಧಿಸಿದ್ದಾರೆ.
ಕೋಯಿಕ್ಕೋಡ್ ಬಡಗರದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿದ್ದ ಮುಸ್ತಫಾಳನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.
ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 4 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಏನಿದು ಪ್ರಕರಣ?
ಕೇರಳದ ಖಾಸಗಿ ಬಸ್’ನಲ್ಲಿ ವ್ಯಕ್ತಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವೀಡೀಯೊವೊಂದನ್ನು ಶಿಂಜಿತಾ ಸಾಮಾಜಿಕ ಜಾಲತಾಣದಲ್ಲಿ #SocialMedia ಹರಿಬಿಟ್ಟಿದ್ದಳು. ವೀಡಿಯೋ ವೈರಲ್ ಆದ ಬೆನ್ನಲ್ಲೇ ಮನನೊಂದ ದೀಪಕ್ ಅತ್ಮಹತ್ಯೆ ಮಾಡಿಕೊಂಡಿದ್ದರು. ವೀಡಿಯೋ ವೈರಲ್ ಆಗಿ 2.3 ಮಿಲಿಯನ್’ಗೂ ಅಧಿಕ ವೀಕ್ಷಣೆ ಪಡೆದಿತ್ತು.
ದೀಪಕ್ ಅವರದ್ದು ಯಾವುದೇ ತಪ್ಪಿಲ್ಲದೇ ಇದ್ದರೂ ಅವರ ಬಳಿಯೇ ಹೋಗಿ ಆಕೆ ವಿಡಿಯೋ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಪ್ರಚಾರಕ್ಕಾಗಿ ವಿಡಿಯೋ ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಕ್ಕೆ ಶಿಂಜಿತಾಳನ್ನು ಬಂಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.
Deepak, a 42 year old textile mill employee from Kozhikode, Kerala, committed suicide after content creator Shimjitha Mustafa posted footage, alleging he intentionally "grazed" her in a "sexual boundary violation" on a commuter bus. The video garnered 2 million views, with… pic.twitter.com/aYYcPrTRmw
— Rakesh Krishnan Simha (@ByRakeshSimha) January 19, 2026
ದೀಪಕ್ ಅವರ ಪೋಷಕರು ಸಲ್ಲಿಸಿದ ದೂರಿನ ನಂತರ ಪೊಲೀಸರು ಜಾಮೀನು ರಹಿತ ಸೆಕ್ಷನ್ ಅಡಿ ಕೇಸ್ ದಾಖಲಿಸಿದ್ದರು.
ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ನಂತರ ಕೋಝಿಕ್ಕೋಡ್ ನ್ಯಾಯಾಲಯದಲ್ಲಿ ಶಿಂಜಿತಾ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಶಿಂಜಿತಾ ಮುಸ್ತಫಾಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.
ವಿಡಿಯೋದಲ್ಲಿರುವ ದೃಶ್ಯದಲ್ಲಿ ಇಬ್ಬರ ಮಧ್ಯೆ ಯಾವುದೇ ವಾಗ್ವಾದ, ಗಲಾಟೆ ನಡೆದಿರಲಿಲ್ಲ. ಪೊಲೀಸರು ಚಾಲಕ, ಕಂಡಕ್ಟರ್ ಮತ್ತು ಇತರ ಬಸ್ ಪ್ರಯಾಣಿಕರಿಂದ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅವರೆಲ್ಲರೂ ಪ್ರಯಾಣದ ಸಮಯದಲ್ಲಿ ಯಾವುದೇ ದೂರು ಅಥವಾ ಅಸಾಮಾನ್ಯ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















