ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಅರೆಬಿಳಚಿ ಗ್ರಾಮದಲ್ಲಿ ಭದ್ರಾ ನಾಲೆಯಲ್ಲಿ #BhadraCanal ತೇಲಿ ಹೋಗಿದ್ದ ಒಂದೇ ಕುಟುಂಬ ನಾಲ್ವರ ಶವವನ್ನು ಸತತ ಐದು ದಿನಗಳ ಕಾರ್ಯಾಚರಣೆ ನಂತರ ಪತ್ತೆ ಮಾಡಲಾಗಿದೆ.
ನಾಲೆಯಲ್ಲಿ ತೇಲಿ ಹೋದ ನಾಲ್ವರ ಶವಗಳಿಗಾಗಿ ಐದು ದಿನಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು.
ಮುಳುಗು ತಜ್ಞ ಈಶ್ವರ್ ಮಲ್ಪೆ #EshwarMalpe ತಂಡ ನಾಲ್ವರ ಶೋಧ ಕಾರ್ಯಾಚರಣೆ ನಡೆಸಿದ್ದು, ಅಂತಿಮವಾಗಿ ನಾಲ್ವರ ಶವವನ್ನು ಪತ್ತೆ ಮಾಡಿದೆ.
ಭದ್ರಾ ನಾಲೆ ಆಳಕ್ಕಿಳಿದು ಶವಗಳ ಶೋಧ ಕಾರ್ಯ ನಡೆಸಿದ್ದ ಈಶ್ವರ್ ಮಲ್ಪೆ ತಂಡ ನಿನ್ನೆ ಹಾಗೂ ಮೊನ್ನೆ ಎರಡು ಶವಗಳನ್ನು ಪತ್ತೆ ಮಾಡಿತ್ತು. ಸತತ ಕಾರ್ಯಾಚರಣೆ ನಂತರ ಇಂದು ಇನ್ನೆರಡು ಶವಗಳನ್ನು ಪತ್ತೆ ಮಾಡಿದೆ.
ದುಖಃದ ನಡುವೆಯೂ ಶವಗಳನ್ನು ಹುಡುಕಿ ಹೊರ ತೆಗೆದಿದ್ದಕ್ಕೆ ಗ್ರಾಮಸ್ಥರಿಂದ ಅಭಿನಂದನೆ ಸಲ್ಲಿಸಲಾಗಿದೆ.
ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ್ #SharadaPuryanaik ಪುತ್ರ ದೀಪಕ್, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ಗ್ರಾಮಾಂತರ ತಾಲೂಕು ಅಧ್ಯಕ್ಷ ಸತೀಶ್ ಅವರುಗಳು ಈಶ್ವರ್ ಮಲ್ಪೆ ಅವರ ತಂಡವನ್ನು ಅಭಿನಂದಿಸಿದರು.
ಈ ಕುರಿತಂತೆ ಮಾತನಾಡಿರುವ ಗ್ರಾಮಸ್ಥರು ಕಳೆದೈದು ದಿನಗಳಿಂದ ಹಗಲಿರುಳು ಶ್ರಮಿಸಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ಅಭಿನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















