ಕಲ್ಪ ಮೀಡಿಯಾ ಹೌಸ್ | ಬೀದರ್ |
ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ #MLA Shylendra Beldale ಇಂದು ಚಿಟ್ಟಾ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಸುಮಾರು 1 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ರಸ್ತೆ, ಸೇತುವೆ, ನೀರಿನ ವ್ಯವಸ್ಥೆ, ವಿದ್ಯುತ್, ಸಾರಿಗೆ ವ್ಯವಸ್ಥೆ, ಶಿಕ್ಷಣ ಸೇರಿ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ, ನಿಮ್ಮೆಲ್ಲರ ಜೀವನ ಮಟ್ಟವನ್ನು ಸುಧಾರಿಸುವುದು ಮತ್ತು ನಮ್ಮ ಕ್ಷೇತ್ರವನ್ನು ಉದಾಹರಣಾತ್ಮಕವಾಗಿ ಅಭಿವೃದ್ಧಿಪಡಿಸುವುದು ನನ್ನ ಪ್ರಮುಖ ಕರ್ತವ್ಯ ಎಂದು ತಿಳಿಸಿದರು.
ಸೇತುವೆ ನಿರ್ಮಾಣದ ನಂತರ ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಸಂಚಾರ ಸುಗಮವಾಗಲಿದೆ ಮತ್ತು ಪ್ರದೇಶದ ಅಭಿವೃದ್ಧಿಗೆ ವೇಗ ಹೆಚ್ಚಾಗಲಿದೆ ಎಂದರು.
ಬೀದರ್ ದಕ್ಷಿಣ ಕ್ಷೇತ್ರವು ಸಂಪೂರ್ಣ ಹಳ್ಳಿಗಳಿಂದ ಕೂಡಿದ್ದು, ವಿವಿಧ ಯೋಜನೆಗಳ ಮೂಲಕ ಸಂಪರ್ಕ ವ್ಯವಸ್ಥೆ ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹದಗೆಟ್ಟ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಒತ್ತು ನೀಡಲಾಗಿದೆ. ಚಿಟ್ಟಾ ಕ್ರಾಸ್ ನಿಂದ ಚಿಟ್ಟಾವರೆಗಿನ 1 ಕಿಲೋಮೀರ್ಟ ರಸ್ತೆಯನ್ನು ದ್ವಿಪಥ ರಸ್ತೆಗೂ ಹೆಚ್ಚು ಅಭಿವೃದ್ಧಿಪಡಿಸುವ ಯೋಜನೆಗೆ 5 ಕೋಟಿ ರೂ. ಅನುದಾನ ಮಂಜೂರಾಗಿ ಇಗಾಗಲೇ ಕಾಮಗಾರಿ ಉತ್ತಮವಾಗಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.
ಉತ್ತಮ ದ್ವಿಪಥ ರಸ್ತೆ ಜೊತೆಗೆ ಮಧ್ಯೆ ಡಿವೈಡರ್ (ರಸ್ತೆ ವಿಭಜಕ), ಎರಡೂ ಕಡೆಗೆ ಬೆಳಗುವ ರಸ್ತೆ ವಿಭಜಕಗಳಲ್ಲಿ ಸಾಲು ವಿದ್ಯುತ್ ಬೀದಿ ದೀಪಗಳಿರಲಿವೆ. ಈ ರಸ್ತೆಯು ಈ ಮಾರ್ಗದ ಸುಂದರೀಕರಣ ಹೆಚ್ಚಿಸಲಿದೆ ಎಂದರು.
ಉಳಿದ ರಸ್ತೆ ಕಾಮಗಾರಿ ಇದೀಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಮಂಜೂರು ದೊರೆತ ಕೂಡಲೇ ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಇದೀಗ ಚಾಲನೆ ನೀಡಿದ ಸೇತುವೆ ನಿರ್ಮಾಣ ಕಾಮಗಾರಿಯಿಂದ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಪ್ರತಿ ಹಂತದಲ್ಲೂ ಸಂಬAಧಪಟ್ಟ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಉದಯಕುಮಾರ ತೋರಣ, ಆನಂದ ಪಾಟೀಲ, ವಿದ್ಯಾಸಾಗರ ಸ್ವಾಮಿ, ಶಿವಕುಮಾರ ಪಾಟೀಲ, ರಾಜಕುಮಾರ ಮಾಮಡಗಿ, ಮಲ್ಲಿಕಾರ್ಜುನ ವಾಡಿ, ಮಹೇಶ ತೋರಣ, ಶರಣಯ್ಯಾ ಸ್ವಾಮಿ, ಅಹ್ಮದ್, ಮಹೇಶ ವಾಡಿ, ಸಂಗಮೇಶ, ವೈಜಿನಾಥ ವಾಡಿ, ಕೃಷ್ಣ ರೆಡ್ಡಿ, ಮುಜಾಯಿದ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















