ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಉದ್ಯೋಗ ಮಾಹಿತಿ ಶಿಬಿರಗಳು ನಿರುದ್ಯೋಗಿ ಯುವಕ-ಯುವತಿಯರಿಗೆ, ಪದವೀಧರರಿಗೆ ಉದ್ಯೋಗಾವಕಾಶಗಳು, ಕೌಶಲ್ಯ ತರಬೇತಿ, ಸಂದರ್ಶನ ಎದುರಿಸುವ ವಿಧಾನ ಮತ್ತು ಉದ್ಯೋಗಗಳ ಕುರಿತು ಮಾರ್ಗದರ್ಶನ ನೀಡುವ ಪ್ರಮುಖ ವೇದಿಕೆಗಳಾಗಿವೆ. ಎಂದು ಶಿಕಾರಿಪುರ ಶಾಸಕರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ #BYVijayendra ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ #BSYediyurappa ಅವರ ಜನ್ಮದಿನದ ಅಂಗವಾಗಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಮೂಡಬಿದರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಸಹಯೋಗದಲ್ಲಿ ನಗರದ ಮಂಗಳ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕಾರಿಪುರ #Shikaripura ಉದ್ಯೋಗ ಮೇಳದ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಉದ್ಯೋಗ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿರುವ ಯುವಕರಿಗೆ ಹೊಸ ದಿಕ್ಕನ್ನು ತೋರಿಸುವ ಉದ್ದೇಶದಿಂದ ನಮ್ಮ ತಂದೆಯವರ ಜನ್ಮ ದಿನದಂದು ಈ #JobFair ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಭಾರತವು ಅಭಿವೃದ್ಧಿ ಆಗಬೇಕಾದರೆ ಅದು ಯುವಶಕ್ತಿಯ ಕೈಯಲ್ಲಿದೆ. ಪ್ರಧಾನಿಮಂತ್ರಿಗಳ ಕನಸು 2046ಕ್ಕೆ ಭಾರತ ವಿಕಸಿತ ಭಾರತ ಆಗಬೇಕು ಎನ್ನುವುದು. ಅದಕ್ಕಾಗಿ ಯುವ ಜನತೆಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಹಲವಾರು ಯೋಜನೆಗಳ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದರು.
ಯುವಜನತೆ ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕಾದರೆ ಇಂದು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಸಾಮರ್ಥ್ಯದ ಮೂಲಕ ಕೆಲಸವನ್ನು ನಿರ್ವಹಿಸಿಕೊಂಡು ಮುಂದೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ತಮ್ಮಲ್ಲಿರುವ ನ್ಯೂನತೆಗಳನ್ನು ತಲೆಯಿಂದ ಹೊರಹಾಕಬೇಕು, ಉತ್ತಮ ಆಲೋಚನೆಗಳನ್ನು ಯೋಚನೆ ಮಾಡುವುದರ ಮೂಲಕ ಮುಂದೆ ಸಾಗಬೇಕು ಎಂದರು.
ವಿವೇಕ ಆಳ್ವ #VivekAlva ಅವರ ಪ್ರಯತ್ನದಿಂದ 80ಕ್ಕೂ ಹೆಚ್ಚು ಕಂಪನಿಗಳು ಸಾವಿರಾರು ಉದ್ಯೋಗಗಳನ್ನು ಹೊತ್ತು ಶಿಕಾರಿಪುರ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ನೀವೆಲ್ಲರೂ ಆತ್ಮವಿಶ್ವಾಸದಿಂದ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ವೇತನದ ಬಗ್ಗೆ ಕೆಲಸದ ಬಗ್ಗೆ ಯೋಚನೆ ಬೇಡ ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡಬೇಕು ಮತ್ತು ಸ್ವಾಭಿಮಾನದ ಜೀವನ ಸಾಗಿಸಬೇಕು. ನಿಮ್ಮ ಪ್ರಗತಿಯನ್ನು ಕಂಡು ತಂದೆ -ತಾಯಿ ಮತ್ತು ಗುರುಗಳು ಮಾತ್ರ ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ ಅವರಿಗೆ ಗೌರವಿತವಾಗಿ ನೀವು ಮುನ್ನಡೆಯಬೇಕು ಎಂದು ತಿಳಿಸಿದರು.
ಆಳ್ವಾಸ್ ವಿದ್ಯಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ವಿವೇಕ ಆಳ್ವ ಅವರು ಮಾತನಾಡಿ, ಕಳೆದ 18 ವರ್ಷದಿಂದ ಪ್ರಗತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು ಇಲ್ಲಿಯವರಗೆ ಸುಮಾರು 36 ಸಾವಿರ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮ ನಡೆಸಿಕೊಂಡಿದ್ದಾರೆ ಎಂದರು.
ಸ್ವಾಭಿಮಾನವಿದ್ದರೆ ಸಾಧನೆ ಮಾಡಲು ಸಾಧ್ಯ. ತಮ್ಮಲ್ಲಿ ವಿದ್ಯಾರ್ಹತೆ ಅನುಗುಣವಾಗಿ ಪರಿಕಲ್ಪನೆ ಇಟ್ಟುಕೊಳ್ಳಿ. ನಮ್ಮ ವಿದ್ಯಾರ್ಥಿಗಳು ಶಿಕಾರಿಪುರ ಉದ್ಯೋಗ ಮೇಳದ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಸಂಸದರ ಮತ್ತು ಶಾಸಕರ ಕನಸುಗಳನ್ನು ನನಸಾಗಿಸಲು ಶ್ರಮಿಸಬೇಕು. ಉದ್ಯೋಗ ಎಲ್ಲೇ ಸಿಕ್ಕರೂ ಕೆಲಸ ನಿರ್ವಹಿಸಲು ಸಿದ್ಧರಾಗಿರಬೇಕು. ಎಲ್ಲಾ ವೃತ್ತಿಗಳಿಗೂ ತನ್ನದೆ ಆದ ಗೌರವಿರುತ್ತದೆ ಹಾಗಾಗಿ ಯಾವುದೇ ವೃತ್ತಿಯನ್ನು ಕಡೆಯಾಗಿ ಕಾಯಬೇಡಿ ಉತ್ತಮ ತಯಾರಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಕೆ.ಎಸ್. ಗುರುಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಕ್ಷದ ವಿವಿಧ ವಿಭಾಗಗಳ ಪ್ರಮುಖರಾದ ಹನುಮಂತಪ್ಪ ಸಂಕ್ಲಾಪುರ, ಗಾಯಿತ್ರಿ ಮಲ್ಲಪ್ಪ, ರಾಮನಾಯ್ಕ್, ಸಿದ್ದಲಿಂಗಪ್ಪ, ರೇಖಾ ರಾಜಶೇಖರ್, ವಸಂತ ಗೌಡ, ನಿಂಬೆಗೊಂದಿ, ಡಿ.ಎಲ್. ಬಸವರಾಜ್, ಮಲ್ಲೇಶಪ್ಪ, ಉಮೇಶ್ ಕಲ್ಮನಿ, ಶಿವಪ್ಪ ಬಿಎಸ್’ಎನ್’ಎಲ್, ಶಿವಕುಮಾರ್ ವಕೀಲರು, ಈರಣ್ಣಗೌಡ, ಗಿರೀಶ್ ಹರಳಣ್ಣಿ, ಚನ್ನವೀರಪ್ಪ, ಮಹೇಶ್ ಹುಲ್ಮಾರ್, ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಶಿವಕುಮಾರ್, ಬೋಧಕ ಮತ್ತು ಬೋಧಕೇತರ ವರ್ಗದವರು, ಹೊಸೂರು ಮತ್ತು ಅಂಜನಾಪುರ ಹೋಬಳಿಯ ಶಕ್ತಿ ಕೇಂದ್ರದ ಪ್ರಮುಖರು, ಪದಾಧಿಕಾರಿಗಳು, ಜನ ಪ್ರತಿನಿದಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಆಳ್ವಾಸ್ ವಿದ್ಯಾ ಸಂಸ್ಥೆಯ ತಂಡದವರು, ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ತರಬೇತಿ ಶಿಬಿರದಲ್ಲಿ 250ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















