ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ ಯಾರ್ಡ್’ನಲ್ಲಿ ಸ್ವಿಚ್ ನವೀಕರಣ ಕಾಮಗಾರಿಗೆ ಸಂಬಂಧಿಸಿ, ಸಂಬಂಧಪಟ್ಟ ಅಧಿಕಾರಿಗಳು ಲೈನ್ ಬ್ಲಾಕ್ ಹಾಗೂ ಪರ್ವ ಬ್ಲಾಕ್’ಗೆ ಅನುಮೋದನೆ ನೀಡಿದ್ದು, ಈ ಅವಶ್ಯಕ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ, ಕೆಳಕಂಡ ರೈಲುಗಳನ್ನು ಜ.27ರಂದು ಪ್ರಯಾಣವನ್ನು ರದ್ದುಪಡಿಸಲಾಗಿದೆ:
- 07330 ರೈಲು ಸಂಖ್ಯೆ ವಿಜಯಪುರ – ಹುಬ್ಬಳ್ಳಿ ಇಂಟರ್ಸಿಟಿ ಎಕ್ಸ್’ಪ್ರೆಸ್ | ಈ ರೈಲು ಗದಗ ಮತ್ತು ಹುಬ್ಬಳ್ಳಿ ನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಿ, ಹುಬ್ಬಳ್ಳಿಯ ಬದಲು ಗದಗದಲ್ಲಿ ಅಂತ್ಯಗೊಳ್ಳಲಿದೆ.
- 07329 ರೈಲು ಸಂಖ್ಯೆಯ ಹುಬ್ಬಳ್ಳಿ – ವಿಜಯಪುರ ಇಂಟರ್ಸಿಟಿ ಎಕ್ಸ್’ಪ್ರೆಸ್ | ಈ ರೈಲು ಹುಬ್ಬಳ್ಳಿ ಮತ್ತು ಗದಗ ನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಿ, ಹುಬ್ಬಳ್ಳಿಯ ಬದಲು ಗದಗದಿಂದ ಪ್ರಯಾಣ ಆರಂಭಿಸಲಿದೆ.
2. ರೈಲುಗಳ ಪ್ರಯೋಗಾತ್ಮಕ ನಿಲುಗಡೆ
ಹುಬ್ಬಳ್ಳಿ ವಿಭಾಗದ ಗೋಕಾಕ್ ರೋಡ್ ನಿಲ್ದಾಣದಲ್ಲಿ 17317/17318 ಸಂಖ್ಯೆಯ ಹುಬ್ಬಳ್ಳಿ – ದಾದರ್ – ಹುಬ್ಬಳ್ಳಿ ಎಕ್ಸ್’ಪ್ರೆಸ್’ಗಳಿಗೆ ಪ್ರಯೋಗಾತ್ಮಕ ನಿಲುಗಡೆ ನೀಡಲು ರೈಲ್ವೆ ಬೋರ್ಡ್ ಅನುಮೋದನೆ ನೀಡಿದ್ದು. ಜನವರಿ 26 ರಿಂದ ಪ್ರಯಾಣ ಆರಂಭಿಸುವ ಸಂದರ್ಭದಲ್ಲಿ ಪ್ರಯೋಗಾತ್ಮಕವಾಗಿ ನಿಲುಗಡೆ ಜಾರಿಗೊಳ್ಳಲಿದೆ:
- ರೈಲು ಸಂಖ್ಯೆ 17317 ಹುಬ್ಬಳ್ಳಿ – ದಾದರ್ ಎಕ್ಸ್’ಪ್ರೆಸ್- ಗೋಕಾಕ್ ರೋಡ್ ನಿಲ್ದಾಣಕ್ಕೆ ಆಗಮನ / ನಿರ್ಗಮನ ಸಮಯ: 19:41 / 19:42 ಗಂಟೆ.
- ರೈಲು ಸಂಖ್ಯೆ 17318 ದಾರ್ದ – ಹುಬ್ಬಳ್ಳಿ ಎಕ್ಸ್’ಪ್ರೆಸ್ – ಗೋಕಾಕ್ ರೋಡ್ ನಿಲ್ದಾಣಕ್ಕೆ ಆಗಮನ / ನಿರ್ಗಮನ ಸಮಯ: 06:35 / 06:36 ಗಂಟೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















