ಕಲ್ಪ ಮೀಡಿಯಾ ಹೌಸ್ | ಉಡುಪಿ |
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಇವರ ವತಿಯಿಂದ ಗರ್ಭಾಶಯದ ಆಸಹಜ ರಕ್ತಸ್ರಾವ #AbnormalUterineBleeding #AUB ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಗರ್ಭಾಶಯದ ಆಸಹಜ ರಕ್ತಸ್ರಾವ (AUB) ಎಂದರೆ, ಋತುಚಕ್ರದ ನಿಯಮಿತ ಸಮಯದಲ್ಲಿ ಅಥವಾ ಎರಡು ಋತುಚಕ್ರಗಳ ಮಧ್ಯದಲ್ಲಿ ಗರ್ಭಾಶಯದಿಂದ ಅಧಿಕ ಪ್ರಮಾಣದ ಹಾಗೂ ದೀರ್ಘಕಾಲದ ರಕ್ತಸ್ರಾವವಾಗುವುದು. ಈ ಸಮಸ್ಯೆ ಮಹಿಳೆಯರ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಒತ್ತಡಕ್ಕೂ ಕಾರಣವಾಗುತ್ತದೆ.
ಎಯುಬಿ ಸಮಸ್ಯೆಯ ಸಾಮಾನ್ಯ ಲಕ್ಷಣಗಳು
- ಋತುಚಕ್ರದ ಸಮಯದಲ್ಲಿ ಅಧಿಕ ಪ್ರಮಾಣದ ರಕ್ತಸ್ರಾವ
- ಸಾಮಾನ್ಯಕ್ಕಿಂತ ಹೆಚ್ಚು ದಿನಗಳವರೆಗೆ ನಡೆಯುವ ಅಥವಾ ತೀವ್ರ ಹೊಟ್ಟೆನೋವಿನಿಂದ ಕೂಡಿದ ಋತುಸ್ರಾವ
- ಋತುಚಕ್ರದ ಮಧ್ಯದಲ್ಲೇ ಅನಿಯಮಿತ ರಕ್ತಸ್ರಾವ #Bleeding
- ಅಧಿಕ ರಕ್ತಸ್ರಾವದಿಂದ ಉಂಟಾಗುವ #Anemia ರಕ್ತಹೀನತೆ, ದೌರ್ಬಲ್ಯ ಮತ್ತು ದಣಿವು
ಈ ರೀತಿಯ ಲಕ್ಷಣಗಳನ್ನು ಅನುಭವಿಸುತ್ತಿರುವ ಮಹಿಳೆಯರು ತಜ್ಞರ ಸಲಹೆ ಪಡೆಯುವುದು ಅತ್ಯಂತ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶಿಬಿರದ ಪ್ರಮುಖ ಪ್ರಯೋಜನಗಳು
- ಅನುಭವಸಂಪನ್ನ ಸ್ತ್ರೀರೋಗ ತಜ್ಞರಿಂದ ಉಚಿತ ಆಯುರ್ವೇದ ಸಮಾಲೋಚನೆ
- ಅರ್ಹ ಮಹಿಳೆಯರಿಗೆ ಉಚಿತ ರಕ್ತ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ಸೌಲಭ್ಯ
- ಆಯ್ಕೆಯಾದ ಮಹಿಳೆಯರಿಗೆ 4 ತಿಂಗಳುಗಳ ಕಾಲ ಉಚಿತ ಆಯುರ್ವೇದ ಔಷಧ ವಿತರಣೆ
ಶಿಬಿರದ ವಿವರಗಳು
ಅರ್ಹ ವಯಸ್ಸು: 18 ರಿಂದ 40 ವರ್ಷಗಳು
ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 4.00 (ಸೋಮವಾರದಿಂದ ಶನಿವಾರದವರೆಗೆ)
ಸ್ಥಳ: ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ಹೊರರೋಗಿ ವಿಭಾಗ ಸಂಖ್ಯೆ–1, ಎಸ್’ಡಿಎಮ್ ಆಯುರ್ವೇದ ಆಸ್ಪತ್ರೆ, ಉಡುಪಿ
ಆರೋಗ್ಯದ ಬಗ್ಗೆ ಮೌನ ವಹಿಸುವ ಬದಲು ಸಮಯೋಚಿತ ಚಿಕಿತ್ಸೆ ಪಡೆಯಬೇಕು ಎಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಆಸಕ್ತ ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















