ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲ್ಲೂಕಿನ ಗೊಂದಿ ಗ್ರಾಮದಲ್ಲಿ ಮನೆ ಅಂಗಳದಲ್ಲಿ ಕಟ್ಟಿ ಹಾಕಿದ್ದ ಕುರಿಯನ್ನು ಎಳೆದೊಯ್ದ ಚಿರತೆ #Leopard ಕೊಂದು ಹಾಕಿದೆ ಘಟನೆ ನಡೆದಿದೆ.
ಚಿರತೆ ಕುರಿಯನ್ನು ಸಮೀಪದ ಕಾಡಿಗೆ ಎಳೆದೊಯ್ದು ಅರ್ಧಂಬರ್ಧ ತಿಂದು ಹಾಕಿದೆ. 3 ದಿನದ ಹಿಂದೆಯಷ್ಟೇ ರೈತ ನರಸಿಂಹೇಗೌಡ ಅವರ ಮನೆ ಬಳಿ ಕುರಿಗಳನ್ನು ಕಟ್ಟಿದ್ದ ಕೊಟ್ಟಿಗೆ ಬಳಿ ಚಿರತೆ ಬಂದು ಕುಳಿತಿತ್ತು. ರಾತ್ರಿ ಮೂತ್ರ ವಿಸರ್ಜನೆಗೆ ಮನೆ ಹೊರಗೆ ಬಂದಿದ್ದ ನರಸಿಂಹೇಗೌಡ ಚಿರತೆ ಕಂಡು ಕೂಗಿದಾಗ ಪರಾರಿಯಾಗಿತ್ತು ಎನ್ನಲಾಗಿದೆ.
ಜ. 13ರಂದು ಅದೇ ಗ್ರಾಮದ ಗಂಗಾನಾಯ್ಕ ಅವರ ತೋಟದ ಮನೆಯ ಅಂಗಳದಲ್ಲಿ ಮಲಗಿದ್ದ ಜರ್ಮನ್ ಶೆಫರ್ಡ್ ನಾಯಿಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು. ಗೊಂದಿ ಗ್ರಾಮದಲ್ಲಿ ಚಿರತೆ ದಾಳಿ ನಿರಂತರವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇರಿಸಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















