ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕಳೆದ ವಾರಾಂತ್ಯದಲ್ಲಿ ಮುಕ್ತಾಯಗೊಂಡ ಬಿಆರ್ ಪಿ ಲೆಜೆಂಡ್ಸ್ ಆಶ್ರಯದಲ್ಲಿ ನಡೆದ ಮೂರು ದಿನಗಳ 40 ವರ್ಷ ಮೇಲ್ಪಟ್ಟವರ ಕ್ರಿಕೆಟ್ ಪಂದ್ಯಾವಳಿಯು #Cricket Tournament 80-90ರ ದಶಕದ ಹಳೆಯ ಸ್ನೇಹಿತರ ಭಾವನಾತ್ಕಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ರಾಜ್ಯದ ನಾನಾ ಭಾಗಗಳಲ್ಲಿ ನೆಲೆಸಿರುವ ಅಂದಿನ ಚಿಣ್ಣರು, ಹಳೆಯ ಹುಡುಗಾಟಿಕೆಯ ದಿನಗಳನ್ನು ಮೆಲುಕು ಹಾಕುತ್ತಾ ಸ್ಫರ್ಧಾತ್ಮಕ ಕ್ರಿಕೆಟ್ ಆಡುವ ಮೂಲಕ ತಮ್ಮಲ್ಲಿ ಇನ್ನೂ ಕ್ರೀಡಾ ಸ್ಫೂರ್ತಿ ಮತ್ತು ಚೈತನ್ಯದ ಚಿಲುಮೆ ಹಸಿರಾಗಿರುವುದನ್ನು ಸಾಬೀತುಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಡಾ. ಧರಣಿಕುಮಾರ್, ಸಿದ್ದರಾಮ, ಗಣೇಶ್, ಬಸವರಾಜು (ಬಬ್ಲೂ), ಮತ್ತು ಸ್ಥಳೀಯರಾದ ಬಿ. ಟಿ. ಮಂಜು, ಪ್ರಭಾಕರ್, ಅಜೀ಼ಜ಼್, ಗಿರೀಶ್, ಮಹೇಶ್, ಗುರು, ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಸ್ನೇಹಿತರ ಬಳಗ ನೆರೆದಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















