ಕಲ್ಪ ಮೀಡಿಯಾ ಹೌಸ್ | ಕೆ ಆರ್ ಪೇಟೆ |
ಕಲಾ ನವೀನ್ ಫಿಲಂ ಅಕಾಡೆಮಿ ಅವರು ಆಯೋಜಿಸಿದ್ದ ಟಾಪ್ ಮಾಡೆಲ್ ಆಫ್ ಇಂಡಿಯಾ ಮಾಡೆಲಿಂಗ್ ಶೋ #Top Model of India Modeling Show ಸ್ಪರ್ಧೆಯಲ್ಲಿ ಎಂಟು ವರ್ಷದ ಚಿರಾಗ್ ಬೆಸ್ಟ್ ಟ್ಯಾಲೆಂಟ್ ಮತ್ತು ಬೆಸ್ಟ್ ಪಾಪ್ಯುಲರ್ ಫೇಸ್ ಅವಾರ್ಡ್ ಪಡೆದು ಕೊಂಡಿದ್ದಾರೆ.
ಬೆಂಗಳೂರಿನ ಮಿಲ್ಲರ್ಸ್ ರೋಡ್ ಡಾ. ಬಿ. ಆರ್. ಅಂಬೇಡ್ಕರ್ ಅಂಬೇರ್ಡ್ಕ ಭವನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಎರಡನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಚಿರಾಗ್, ಪಾಂಡವಪುರ ತಾಲ್ಲೂಕಿನ ಚಾಗಶೆಟ್ಟಹಳ್ಳಿ ಗ್ರಾಮದ ಸುಮಂತ್, ಶೋಭ ಸುಮಂತ್ ದಂಪತಿಗಳ ಪುತ್ರ. ಎಂಡರ್ವ ಅಕಾಡೆಮಿ ಜಿಗಣಿ ಬೆಂಗಳೂರು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ದೊಡ್ಡ ಶೋ ನಲ್ಲಿ ಬಾಗವಹಿಸಿ ವಿಜೇತರಾಗಿ ಮೊದಲನೆ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೂ ಇದೆ ರೀತಿ ಚಿರಾಗ್ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿ ಭಗವಂತನ ಆಶೀರ್ವಾದ ಸದಾ ಚಿರಾಗ್ ಮೇಲಿರಲಿ. ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆದು ಮಂಡ್ಯ ಜಿಲ್ಲೆಗೆ ಕೀರ್ತಿ ತರಲಿ ಎಂಬುದು ಎಲ್ಲರ ಆಶಯವಾಗಿದೆ.
ಕಾರ್ಯಕ್ರಮಕ್ಕೆ ನಟ ಮನೋರಂಜನ್ ರವಿಚಂದ್ರನ್, ಶ್ರೀ ನಗರ ಕಿಟ್ಟಿ, ಬಿಗ್ ಬಾಸ್ ಖ್ಯಾತಿಯ ಸತೀಶ್, ಅಮೃತಂಜನ ಚಿತ್ರದ ನಟ ನಟಿ , ಸೀಟ್ ಎಡ್ಜ್ ಚಿತ್ರದ ನಾಯಕ ಸಿದ್ದು ಸೇರಿದಂತೆ ಹಲವಾರು ಗಣ್ಯರೂ ಹಾಜರಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















