ಕಲ್ಪ ಮೀಡಿಯಾ ಹೌಸ್ | ಕೋಣಂದೂರು |
ಅಕ್ಲಾಪುರ ಗ್ರಾಮದ ಇಬ್ಬರು ಮಹಿಳೆಯರಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಸೋಂಕು #KFDVirus ಪತ್ತೆಯಾಗಿದೆ.
ಅಕ್ಲಾಪುರದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಚನ್ನಗಿರಿ #Channagiri ಮೂಲದ 50 ವರ್ಷ ವಯಸ್ಸಿನ ಒಬ್ಬ ಮಹಿಳೆ ಹಾಗೂ 40 ವರ್ಷ ವಯಸ್ಸಿನ ಸ್ಥಳೀಯ ಮಹಿಳೆಯೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ.
ಇಬ್ಬರಿಗೂ ಜ್ವರ ಕಾಣಿಸಿಕೊಂಡ ಕಾರಣ ರಕ್ತ ಪರೀಕ್ಷೆ ಮಾಡಲಾಗಿತ್ತು. ಆಗ ಕೆಎಫ್‌ಡಿ ತಗುಲಿರುವುದು ದೃಢಪಟ್ಟಿದೆ. ಇಬ್ಬರೂ ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ಅರಿವು ಮೂಡಿಸಲು 6 ಜನರಿರುವ ಆರೋಗ್ಯ ಸಿಬ್ಬಂದಿಯ ತಂಡವನ್ನು ಅಕ್ಲಾಪುರದಲ್ಲಿ ಕಾರ್ಯ ನಿರ್ವಹಿಸಲು ನಿಯೋಜಿಸಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಕೇತ್ ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















