ಕಲ್ಪ ಮೀಡಿಯಾ ಹೌಸ್ | ಯಾದಗಿರಿ |
ಸಾರಾಯಿ ಕುಡಿಯುವುದನ್ನು ಬಿಡು ಎಂದು ಕೇಳಿದ್ದಕ್ಕೆ ತಾನೇ ಹೆತ್ತ ಮಗಳನ್ನೇ ಕತ್ತು ಹಿಸುಕಿ ತಾಯಿ ಪಾಪಿಯೊಬ್ಬಳು ಕೊಂದಿರುವ ದಾರುಣ ಘಟನೆ ನಗರದ ರಾಜೀವ್ ಗಾಂಧಿ ನಗರದಲ್ಲಿ ನಡೆದಿದೆ.
ತಾಯಿಯಿಂದಲೇ ಕೊಲೆಯಾದ ಬಾಲಕಿಯನ್ನು ಪ್ರತಿಭಾ(11) ಹಾಗೂ ಪಾಪಿ ತಾಯಿಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ.
ತಾಯಿ ನಿರ್ಮಲಾಗೆ ಕುಡಿಯುವ ಚಟವಿತ್ತು. ಹೀಗಾಗಿ, ಮದ್ಯ ಸೇವನೆ ಮಾಡಲು ಹಣ ಖರ್ಚು ಮಾಡಿದರೆ ನಮಗೆ ಊಟಕ್ಕೆ ತೊಂದರೆಯಾಗುತ್ತದೆ. ನೀನು ಕುಡಿದು ಸತ್ತರೇ ನಮ್ಮನ್ನು ನೋಡಿಕೊಳ್ಳುವರು ಯಾರು? ಅಮ್ಮ ಕುಡಿಯುವುದನ್ನು ಬಿಡು ಎಂದು ಪ್ರತಿಭಾ ಹೇಳಿದ್ದಳು. ಇದರಿಂದ ನಿರ್ಮಲಾ ಕೋಪಗೊಂಡು ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಳು.
ಆದರೆ, ಮಗಳೂ ಜ್ಯೂಸ್ ಕುಡಿಯಲು 15 ರೂ. ಹಣ ಕೇಳಿದ್ದಳು. ಹಣ ಕೊಡಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇಂದು ಕತೆ ಕಟ್ಟಿದ್ದಳು. ಅಲ್ಲದೇ, ಹತ್ಯೆ ಬಳಿಕ ಕುತ್ತಿಗೆಗೆ ಸೀರೆ ಕಟ್ಟಿದ್ದಳು ಎಂದು ತಿಳಿದು ಬಂದಿದೆ.
ಅನುಮಾನದ ಮೇಲೆ ದಾಖಲಾದ ದೂರಿನ ಆಧಾರದಲ್ಲಿ ಅನುಮಾನಗೊಂಡು ಪೊಲೀಸರು ತನಿಖೆ ಆರಂಭಿಸಿದರು. ಆಗ ದೊರೆತ ಸಾಕ್ಷಿಗಳ ಆಧಾರದಲ್ಲಿ ಆರೋಪಿ ಪಾಯಿ ತಾಯಿಯನ್ನು ಬಂಧಿಸಿದ್ದಾರೆ.
ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















