ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ #Yeshwantpur ಮತ್ತು ಕಲಬುರಗಿ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್’ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ.
ಯಾವತ್ತು ವಿಶೇಷ ರೈಲು ಸಂಚಾರ
ಫೆಬ್ರವರಿ 13ರಂದು 06209 ಸಂಖ್ಯೆಯ ಯಶವಂತಪುರ-ಕಲಬುರಗಿ #Kalaburagi ವಿಶೇಷ ಎಕ್ಸ್’ಪ್ರೆಸ್ ರೈಲು ಯಶವಂತಪುರದಿಂದ ರಾತ್ರಿ 10:40ಕ್ಕೆ ಹೊರಟು, ಮರುದಿನ ಬೆಳಿಗ್ಗೆ 9:15ಕ್ಕೆ ಕಲಬುರಗಿ ತಲುಪಲಿದೆ.
ಹಿಂದಿರುಗುವ ಪ್ರಯಾಣದಲ್ಲಿ, ಫೆಬ್ರವರಿ 14ರಂದು 06210 ಸಂಖ್ಯೆಯ ಕಲಬುರಗಿ-ಯಶವಂತಪುರ ವಿಶೇಷ ಎಕ್ಸ್’ಪ್ರೆಸ್ ರೈಲು ಕಲಬುರಗಿಯಿಂದ ಬೆಳಿಗ್ಗೆ 10:15ಕ್ಕೆ ಹೊರಟು, ಅದೇ ದಿನ ರಾತ್ರಿ 9:40ಕ್ಕೆ ಯಶವಂತಪುರ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಈ ವಿಶೇಷ ಎರಡೂ ಮಾರ್ಗಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, #MantralayamRoad ರಾಯಚೂರು, ಕೃಷ್ಣ, ಯಾದಗಿರಿ ಹಾಗೂ ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಎಷ್ಟು ಬೋಗಿಗಳು ಇರಲಿವೆ?
ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ ಒಂದು ಪ್ರಥಮ ದರ್ಜೆ ಎಸಿ ಹಾಗೂ ಎಸಿ-2 ಟೈರ್(ಸಂಯೋಜಿತ), ಎರಡು ಎಸಿ-3 ಟೈರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಎರಡು ಎಸ್’ಎಲ್’ಆರ್ ಬೋಗಿಗಳು ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















