ಕಲ್ಪ ಮೀಡಿಯಾ ಹೌಸ್ | ಅಪರಾಧ ಸುದ್ಧಿ |
ಪ್ರೀತಿಯ ನಾಟಕವಾಡಿ 11 ವರ್ಷದ ಬಾಲಕಿ ಮೇಲೆ ಕಾರಿನಲ್ಲಿ ಇಬ್ಬರು ಸಾಮೂಹಿಕ ಅತ್ಯಾಚಾರ #GangRape ನಡೆಸಿದ್ದು, ಘಟನೆಯನ್ನು ವೀಡಿಯೋ ಮಾಡಿಕೊಂಡು ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ #MadhyaPradesh ಭೋಪಾಲ್’ನಲ್ಲಿ ನಡೆದಿದೆ.
11ನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ನಾಲ್ಕು ಕಾರು ಬಳಸಿ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದ್ದು, ದೇಶವ್ಯಾಪಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಾಲಕಿಯನ್ನು ಪ್ರೀತಿಸುವ ನಾಟಕವಾಡಿದ ಆಸೌಫ್ ಆಲಿ ಖಾನ್ ಆಕೆಯನ್ನು ಕಾರಿನಲ್ಲಿ ಪ್ರವಾಸಕ್ಕೆಂದು ಕರೆತಂದು ಅತ್ಯಾಚಾರ ಎಸಗಿದ್ದಾನೆ. ಅಸೌಫ್ ಅಲಿ ಖಾನ್’ಗೆ ಕಾವಲಾಗಿ ನಿಂತಿದ್ದ ಗೆಳೆಯ ಮಜ್ ಖಾನ್ ಅಪ್ರಾಪ್ತ ಬಾಲಕಿಯ ವಿಡಿಯೋ ರೆಕಾರ್ಡ್ #VideoRecord ಮಾಡಿದ್ದಾನೆ ಎಂದು ವರದಿಯಾಗಿದೆ.
ಬಳಿಕ ರೆಕಾರ್ಡ್ ಮಾಡಿದ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ಇಷ್ಟೇ ಅಲ್ಲ 40 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
11ನೇ ತರಗತಿ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಅಸೌಫ್ ಅಲಿ ಖಾನ್ ಪ್ರೀತಿಯ ನಾಟಕವಾಡಿದ್ದು, ಅಪ್ರಾಪ್ತ ಬಾಲಕಿ ಕಿರಾತಕನ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಬಳಿಕ ಪ್ರವಾಸಕ್ಕೆಂದು ಕಾರಿನಲ್ಲಿ ಕರೆತಂದು ಅತ್ಯಾಚಾರ ಎಸಗಿದ್ದು, ಈ ಘಟನೆಯಿಂದ ಬಾಲಕಿ ತೀವ್ರ ಆಘಾತಕ್ಕೊಳಗಾಗಿದ್ದಾಳೆ.
ಅಸೌಫ್ ಅಲಿ ಖಾನ್ ಅತ್ಯಾಚಾರ ಎಸಗುತ್ತಿದ್ದ ವೇಳೆ ಕಾರಿನ ಹೊರಗಡೆ ಕಾವಲಾಗಿ ನಿಂತಿದ್ದ ಮಜ್ ಖಾನ್ ಆಕೆಯ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಬಳಿಕ ಬಾಲಕಿ ಭೇಟಿಯಾಗಿ ವಿಡಿಯೋ ತೋರಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ಮೂಲಕ ಹರಿಬಿಡುವುದಾಗಿ ಬೆದರಿಸಿದ್ದಾನೆ.
ಈತನ ಬೆದರಿಕೆಗೆ ಅಂಜಿದ ಬಾಲಿಕಿಯನ್ನು ಮಜ್ ಖಾನ್ ಹಾಗೂ ಆತನ ಸ್ನೇಹಿತರು ಮೂರು ಕಾರಿನಲ್ಲಿ ಕರೆದುಕೊಂಡು ಹೋಗಿ ನಿರಂತರವಾಗಿ ಬಳಸಿಕೊಂಡಿದ್ದಾರೆ. ಒಂದೊಂದು ಕಾರಿನಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಬಳಸಿಕೊಂಡಿದ್ದಾರೆ.
ಅತ್ಯಾಚಾರ ಎಸಗಿ, ವೀಡಿಯೋ ಮಾಡಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಾಹನಗಳನ್ನೂ ಸಹ ಸೀಜ್ ಮಾಡಿದ್ದಾರೆ.
ಇನ್ನು, 1992 ರ ಅಜ್ಮೀರ್ ಪ್ರಕರಣದಂತೆ ಇತರರನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲು ಮೋಹನ್ ಯಾದವ್ ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್’ಐಟಿಯನ್ನು ರಚಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















