ಕಲ್ಪ ಮೀಡಿಯಾ ಹೌಸ್ | ಮೈಸೂರು |
ಇಲ್ಲಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಸಾಮೂಹಿಕ ಶಿವರಾತ್ರಿ ಆಚರಣೆ ಮಾಡಲಾಯಿತು.
ಬಡಾವಣೆಯ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ಬಡಾವಣೆಯ ಎಲ್ಲಾ ನಿವಾಸಿಗಳು ಸೇರಿ ಸಾಮೂಹಿಕವಾಗಿ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಮಾಡಿ ಧನ್ಯತಾಭಾವ ಅನುಭವಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯ ಮಹಿಳೆಯರು ಶಿವನ ಹಲವಾರು ಹಾಡುಗಳನ್ನು ಹೇಳುತ್ತಾ ಸತ್ಸಂಗ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಜಿಲ್ಲೆ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಅಧ್ಯಕ್ಷ ಪುನೀತ್ ಜಿ, ಶಿವರಾತ್ರಿ ಆಚರಣೆ ಎಂಬುದು ಅತ್ಯಂತ ಪ್ರಭಾವವಾದುದು. ಸಮಾಜದಲ್ಲಿ ಇರುವ ಸಾಮರಸ್ಯದ ಕೊರತೆಯನ್ನು ನೀಗಿಸಲು ಇಂತಹ ಸಾಮೂಹಿಕ ಶಿವರಾತ್ರಿ ಆಚರಣೆ ಪ್ರಬಲ ಪಾತ್ರ ವಹಿಸಿ ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಶಿವ ನೆಂದರೆ ಸೃಷ್ಟಿಯ ಪುರುಷ, ಮಾನವನ ಮೃತ್ಯು ನಿವಾರಕ ಎಂದರು.
ಪರಶಿವನನ್ನು ಶಿವರಾತ್ರಿಯ ದಿನ ಸಾಮೂಹಿಕ ವಾಗಿ ಪೂಜೆ ಮಾಡುವುದು ಸಮಾಜಕ್ಕೆ ಮಾದರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷ ಣಾ ಸಮಿತಿ ಅಧ್ಯಕ್ಷ ಕೆ.ಆರ್. ಗಣೇಶ್, ಉಪಾಧ್ಯಕ್ಷ ಎ.ಎನ್. ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣ ಆಚಾರ್, ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಪುನೀತ್ ಜಿ ಕೂಡ್ಲೂರು, ವೇದ ಬ್ರಹ್ಮ ಕಾರ್ತಿಕ್ ಶರ್ಮ, ಮೂಕಾಂಬಿಕಾ ಸತ್ಸಂಗ ಬಳಗದ ಸದಸ್ಯರು, ಬಡಾವಣೆಯ ನಿವಾಸಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















