ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ವಂದಾಲ್ ಮತ್ತು ಬಸವನ ಬಾಗೇವಾಡಿ #Basavangabagevadi ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಗೇಟ್ ಸಂಖ್ಯೆ 62) ಬಳಿ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಈ ಕೆಳಗಿನ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ #IndianRailway ಮಾಹಿತಿ ಪ್ರಕಟಿಸಿದ್ದು, ವಿವರಗಳು ಇಂತಿವೆ.
ಮಾರ್ಚ್ 11 ಮತ್ತು 22 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂ. 07329 #SSSHubli ಎಸ್’ಎಸ್’ಎಸ್ ಹುಬ್ಬಳ್ಳಿ – ವಿಜಯಪುರ ಡೆಮು ಸ್ಪೆಷಲ್ ರೈಲು ಬಾಗಲಕೋಟೆ #Bagalkot ನಿಲ್ದಾಣಕ್ಕೆ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ. ಅಂದರೆ ಬಾಗಲಕೋಟೆ ಮತ್ತು ವಿಜಯಪುರ ನಡುವೆ ಈ ರೈಲಿನ ಸಂಚಾರ ರದ್ದಾಗಿರುತ್ತದೆ.

ಮಾರ್ಚ್ 12 ಮತ್ತು 23 ರಂದು ರೈಲು ಸಂ. 07330 ವಿಜಯಪುರ – ಎಸ್’ಎಸ್’ಎಸ್ ಹುಬ್ಬಳ್ಳಿ ಡೆಮು ಸ್ಪೆಷಲ್ ವಿಜಯಪುರದ ಬದಲಾಗಿ ಬಾಗಲಕೋಟೆ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ. ಈ ದಿನಗಳಂದು ವಿಜಯಪುರ ಮತ್ತು ಬಾಗಲಕೋಟೆ ನಡುವೆ ರೈಲು ಸೇವೆ ಇರುವುದಿಲ್ಲ.
ಇನ್ನು, ಧಾರವಾಡದಿಂದ ಸೊಲ್ಲಾಪುರಕ್ಕೆ ತೆರಳುವ ಪ್ಯಾಸೆಂಜರ್ ರೈಲು (56904) ಮಾರ್ಚ್ 10, 11, 21 ಮತ್ತು 22ರಂದು ಮಾರ್ಗಮಧ್ಯೆ ಸುಮಾರು 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















