ಕಲ್ಪ ಮೀಡಿಯಾ ಹೌಸ್ | ನಗರ(ಶಿವಮೊಗ್ಗ) |
ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣವೊಂದನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿ, #inter-district thieves arrested ಅವರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಭರಣವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಭಟ್ಕಳ ಮೂಲದ ಮಹಮ್ಮದ್ ಇಮ್ರಾನ್ ಇಕ್ಕೇರಿ (25), ಮಹಮ್ಮದ್ ಅಖೀಲ್ (24), ಅಮೀರ್ ಹಸನ್ ಬ್ಯಾರಿ (29) ಮತ್ತು ಬೇಬಿ ಹಾಜಿರ (55) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ:
2025ರ ಡಿ.27ರಂದು ಹೊಸನಗರ ತಾಲೂಕಿನ ನಿಟ್ಟೂರು ನಾಗೋಡಿ ಗ್ರಾಮದ ನಿವಾಸಿ ರಾಜೇಂದ್ರ ಶೆಟ್ಟಿ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಮನೆಯವರು ಇಲ್ಲದ ಸಮಯ ನೋಡಿ ಮುಂಬಾಗಿಲು ಬೀಗ ಮುರಿದು ಕಳ್ಳರು ಒಳಗೆ ನುಗ್ಗಿದ್ದರು. ಲಾಕರ್’ನಲ್ಲಿದ್ದ ಬೆಲೆಬಾಳುವ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಪ್ರಕರಣ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪಿಎಸ್’ಐ ಶಿವಾನಂದ ಕೋಳಿ ನೇತೃತ್ವದ ವಿಶೇಷ ತಂಡವು, ತಾಂತ್ರಿಕ ವಿಶ್ಲೇಷಣೆ ಹಾಗೂ ಬೆರಳಚ್ಚು ತಜ್ಞರ ನೆರವಿನಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಬಂಧಿತ ನಾಲ್ವರಿಂದ ಒಟ್ಟು 3.87 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನದ ನೆಕ್ಲಸ್, 93 ಸಾವಿರ ರೂ. ಮೌಲ್ಯದ 6 ಗ್ರಾಂ ಬ್ರೇಸ್ಲೆಟ್, 50 ಗ್ರಾಂ ಬೆಳ್ಳಿ ಪದಾರ್ಥಗಳು, ಮೊಬೈಲ್ ಫೋನ್ ಹಾಗೂ ಕಳ್ಳತನಕ್ಕೆ ಬಳಸಿದ್ದ ಇಟಿಯೋಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ, ರಮೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್’ಪಿ ಅರವಿಂದ ಎನ್. ಕಲಗುಜ್ಜಿ, ಹೊಸನಗರ ಪೊಲೀಸ್ ವೃತ್ತ ನಿರೀಕ್ಷಕ ಎಂ.ಐ. ಗೌಡಪ್ಪಗೌಡ್ರ ಮೇಲ್ವಿಚಾರಣೆಯಲ್ಲಿ ನಗರ ಪಿಎಸ್’ಐ ಶಿವಾನಂದ ಕೋಳಿ ನೇತೃತ್ವದಲ್ಲಿ ಎಎಸ್`ಐಗಳಾದ ಟಿ. ಕುಮಾರ್, ಶೇಖ್ ಅಮೀರ್ ಜಾನ್, ಡಿವೈಸಿಎಚ್’ಸಿ ಕಿರಣ್ ಕುಮಾರ್, ಸಿಎಚ್’ಸಿ ಗಿರಿಪ್ರಸಾದ್, ವಿಶ್ವನಾಥ್, ಎಚ್’ಸಿ ಪ್ರವೀಣ್ ಕುಮಾರ್, ಸಿಎಚ್’ಸಿ ಶಿವಕುಮಾರ್ ನಾಯ್ಕ(ಹೊಸನಗರ ಠಾಣೆ), ಸಿಪಿಸಿಗಳಾದ ರವಿಚಂದ್ರ, ಸಚಿನ್, ಮಂಜುನಾಥ್, ಜಿ.ಎಚ್. ಲಕ್ಷö್ಮಣ್, ಕೆ.ಆರ್. ಅಕ್ಷಯ್, ಸಿಬ್ಬಂದಿಗಳಾದ ಎನ್. ಶಿಲ್ಪಾ, ಎಸ್. ಅನುಷಾ, ಚಾಲಕರಾದ ಮಧುಸೂಧನ, ಶಶಿಧರ, ಜಿಲ್ಲಾ ಎಎನ್’ಸಿ ಸಿಬ್ಬಂದಿಯವರಾದ ಗುರುರಾಜ್ ,ಇಂದ್ರೇಶ್ ಹಾಗೂ ಜಿಲ್ಲಾ ಬೆರಳಚ್ಚು ವಿಭಾಗ ಶಿವಮೊಗ್ಗರವರ ತಾಂತ್ರಿಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















