ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ಪ್ರಸಕ್ತ ಸಾಲಿಯ ರಾಜ್ಯ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರು ಮಂಡಿಸಿದ್ದು, ಶಿವಮೊಗ್ಗದ ಮಟ್ಟಿಗೆ ನೋಡುವುದಾದರೆ ಅಂತಹ ಮಹತ್ವದ ಘೋಷಣೆಗಳೇನು ಆಗಿಲ್ಲ.
ಶಿವಮೊಗ್ಗ ಜಿಲ್ಲೆಗೆ ಹಲವು ಯೋಜನೆ ಹಾಗೂ ಅನುದಾನಗಳ ಘೋಷಣೆಯಾಗುವ ನಿರೀಕ್ಷೆಯಿತ್ತಾದರೂ, ಭಾರೀ ಎನ್ನಬಹುದಾದ ಯಾವುದೇ ಘೋಷಣೆಗಳು ಆಗಿಲ್ಲ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿಯವರ #U R Ananthamurthy ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ #Kuvempu University ಒಂದು ಅಧ್ಯಯನ ಪೀಠವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದೆ.
ಆಯವ್ಯಯದಲ್ಲಿ ಶಿವಮೊಗ್ಗಕ್ಕೆ ದೊರಕಿದ್ದೇನು?
- ಪ್ಲೈಟ್ ಟ್ರೈನಿಂಗ್ ಕೇಂದ್ರ ಸ್ಥಾಪನೆ
- ವಿಮಾನಗಳ ತಯಾರಿಕೆ/ಜೋಡಣಾ ಯೂನಿಟ್ ಪಿಪಿಪಿ ಮಾದರಿಯಲ್ಲಿ ಆರಂಭ
- ಭದ್ರಾವತಿಯಲ್ಲಿ ಇಎಸ್’ಐ ಆಸ್ಪತ್ರೆ ಉನ್ನತೀಕರಣ
- ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ ಇನ್ನಷ್ಟು ವಿದ್ಯಾರ್ಥಿನಿಲಯ ಸ್ಥಾಪನೆ
- ಕುವೆಂಪು ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆ
- ಮಲೆನಾಡು ಭಾಗದಲ್ಲಿ ಕಾಲುಸಂಕ ನಿರ್ಮಾಣ
- ತಾಳಗುಪ್ಪ ಹೊಳೆಗೆ ಬ್ಯಾರೇಜ್ ನಿರ್ಮಾಣ
- ಸೀಗೆಹಳ್ಳ ಚೆಕ್ ಡ್ಯಾಂ ನಿರ್ಮಾಣ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















