ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಆಂಧ್ರಪ್ರದೇಶದ ಮಂತ್ರಾಲಯದಿಂದ #Mantralaya ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಪೀಪರ್ ಬಸ್’ನಲ್ಲಿ ನಾಲ್ವರು ಖದೀಮರು ದರೋಡೆ ನಡೆಸಿದ್ದು, ಬರೋಬ್ಬರಿ 90 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿರುವ ಕೃತ್ಯ ನಡೆದಿದೆ.
ಕೊಪ್ಪಳದ ಹೊರ ವಲಯದ ಹೊಟೇಲ್ ಒಂದರ ಮುಂಭಾಗದಲ್ಲಿ ಕೃತ್ಯ ನಡೆದಿದ್ದು, ವ್ಯವಸ್ಥಿತವಾಗಿ ಸಂಚು ರೂಪಿಸಿ, ಕ್ಷಣಮಾತ್ರದಲ್ಲಿ ದರೋಡೆ ನಡೆಸಲಾಗಿದೆ. ಕೃತ್ಯದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವ್ಯವಸ್ಥಿತ ಪೂರ್ವನಿಯೋಜಿತ ಕೃತ್ಯ
ನಾಲ್ವರು ದರೋಡೆಕೋರರು ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿರುವುದು ಕೃತ್ಯದಿಂದ ತಿಳಿದುಬಂದಿದೆ. ಈ ಗ್ಯಾಂಗ್ ಮಾಸ್ಟರ್ ಮೈಂಡ್ ಸಿಂಧನೂರಿನಿಂದಲೇ #Sindhanur ಅದೇ ಬಸ್ ಹತ್ತಿ ಪ್ರಯಾಣಿಕರ ಮೇಲೆ ಕಣ್ಣಿಟ್ಟಿದ್ದ. ಉಳಿದ ಮೂವರು ಖದೀಮರು ಬಸ್ಸನ್ನು ಬೇರೆ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು ಎಂದು ವರದಿಯಾಗಿದೆ.
ಮಂತ್ರಾಲಯದಿಂದ ಹೊರಟಿದ್ದ ಖಾಸಗಿ ಬಸ್ ಕೊಪ್ಪಳದ ಹೊರವಲಯದಲ್ಲಿ ರಾತ್ರಿ ಊಟಕ್ಕಾಗಿ ಹೋಟೆಲ್ ಒಂದರ ಬಳಿ ನಿಂತಿತ್ತು. ಬಸ್’ನಲ್ಲಿದ್ದ ಪ್ರಯಾಣಿಕರಿರು ಊಟಕ್ಕೆ ಕೆಳಗಿಳಿದಿದ್ದರು. ಈ ಸಮಯಕ್ಕಾಗಿ ಕಾಯುತ್ತಿದ್ದ ಖದೀಮರು, ಕ್ಷಣಾರ್ಧದಲ್ಲಿ ಬಸ್ ಹತ್ತಿ ಅವರ ಬ್ಯಾಗಿನಲ್ಲಿದ್ದ 90 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಚೀಲವನ್ನು ದೋಚಿ ಪರಾರಿಯಾಗಿದ್ದಾರೆ.
ದರೋಡೆಕೋರರು ಬಸ್ ಹತ್ತುವುದು ಮತ್ತು ಬಂಗಾರದ ಚೀಲದೊಂದಿಗೆ ಪರಾರಿಯಾಗುವ ದೃಶ್ಯಗಳು ಹೋಟೆಲ್ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.
ಈ ದೃಶ್ಯಾವಳಿಗಳನ್ನು ಆಧರಿಸಿ ಕೊಪ್ಪಳ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















