ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಿಲಕ್‍ನಗರ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸೇವಾ ಸಮಿತಿ ವತಿಯಿಂದ Shri Raghavendraswamy Mutt 66ನೇ ವರ್ಷದ ಶ್ರೀ ಮಠದ ವಾರ್ಷಿಕೋತ್ಸವ ಏ.1ರ ನಾಳೆ ಬುಧವಾರ ಶ್ರೀಮಠದಲ್ಲಿ ನಡೆಯಲಿದ್ದು, ಬೆಳಿಗ್ಗೆ 8ಗಂಟೆಗೆ ಅಷ್ಟೋತ್ತರ ಪಾರಾಯಣ ಮತ್ತು ಅಭಿಷೇಕ, ಬೆಳಿಗ್ಗೆ 11ಕ್ಕೆ ರಜತ ರಥೋತ್ಸವ ನಡೆಯಲಿದೆ.
ಸಂಜೆ 5.30ಕ್ಕೆ ತಿರುಮಲ ತಿರುಪತಿ ದೇವಸ್ಥಾನ ಹಾಗೂ ಪ್ರಾಜೆಕ್ಟ್ ಮಂತ್ರಾಲಯದ ದಾಸ ಸಾಹಿತ್ಯ ಕೋ-ಆರ್ಡಿನೇಟರ್ ಹಾಗೂ ಹರಿಕಥಾಮೃತ ಸಾರದ ಪಾಠಗಳು ಹಾಗೂ ಪ್ರವಚನಗಳಿಂದ ಅಪಾರ ಶಿಷ್ಯವೃಂದ ಹೊಂದಿದ ಮ.ಶಾ.ಸಂ. ಸುಜಯ ಶ್ರೀ ಎನ್. ಮುರಳೀಧರ ದಾಸರಿಂದ ಶ್ರೀ ರಾಘವೇಂದ್ರ ವೈಭವ ಉಪನ್ಯಾಸವಿರುತ್ತದೆ.
ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ರಾಘವೇಂದ್ರ ಸೇವಾ ಸಮಿತಿಯ ಆಡಳಿತ ಮಂಡಳಿ ವಿನಂತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















