ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಅಪರೂಪದ ಜೆನೆಟಿಕ್ ಕಾಯಿಲೆಯಿಂದ genetic disease ಭವಿಷ್ಯದಲ್ಲಿ ದೊಡ್ಡ ಆಂತ್ರ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ತಪ್ಪಿಸಲು ಎಮ್.ಐ.ಓ ತೀರ್ಥಹಳ್ಳಿ ಗ್ರಾಮೀಣ ಕ್ಯಾನ್ಸರ್ ಆಸ್ಪತ್ರೆಯಲ್ಲಿ Cancer Hospital ಪ್ರಮುಖ ಮುನ್ನೆಚ್ಚರಿಕಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಸುಮಾರು 27 ವರ್ಷದ ಯುವತಿ, ಕಳೆದ ಎರಡು ತಿಂಗಳಿಂದ ಮಲದಲ್ಲಿ ರಕ್ತ ಹಾಗೂ ಹೊಟ್ಟೆ ನೋವು ಇರುವ ಕಾರಣ ವೈದ್ಯರನ್ನು ಸಂಪರ್ಕಿಸಿದ್ದರು. ಅವರ ಕುಟುಂಬದ ವೈದ್ಯಕೀಯ ಇತಿಹಾಸ ಪರಿಶೀಲಿಸಿದಾಗ ತಾಯಿ ರೆಕ್ಟಮ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದು, ಒಬ್ಬ ಮಾವ ಎಮ್.ಐ.ಓ ನಲ್ಲಿ ರೆಕ್ಟಮ್ ಕ್ಯಾನ್ಸರ್ ಚಿಕಿತ್ಸೆ ಪಡೆದಿದ್ದು, ಮತ್ತೊಬ್ಬ ಮಾವ ಕೂಡ ಕ್ಯಾನ್ಸರ್ ನಿಂದ ಮೃತಪಟ್ಟಿರುವುದು ತಿಳಿದುಬಂತು.
ಕೋಲೊನೊಸ್ಕೋಪಿ ಪರೀಕ್ಷೆಯಲ್ಲಿ ದೊಡ್ಡ ಆಂತ್ರದಲ್ಲಿ 100 ಕ್ಕಿಂತ ಹೆಚ್ಚು ಪೆÇಲಿಪ್‍ಗಳಿಂದ ಕಂಡುಬಂದವು. ಕೆಲವು ದೊಡ್ಡ ಪೋಲಿಪ್‍ಗಳಿಂದ ತೆಗೆದ ಬಯೋಪ್ಸಿಯಲ್ಲಿ ಟ್ಯೂಬ್ಯುಲರ್ ಅಡಿನೋಮಾ ಎಂಬ ಕ್ಯಾನ್ಸರ್ ಪೂರ್ವ ಸ್ಥಿತಿ ಕಂಡುಬಂತು.
ಈ ಕಾಯಿಲೆಯಲ್ಲಿ ದೊಡ್ಡ ಆಂತ್ರ ಮತ್ತು ರೆಕ್ಟಮ್ನಲ್ಲಿ ನೂರಾರು ಪೆÇಲಿಪ್ ಗಳು ಉಂಟಾಗುತ್ತವೆ ಮತ್ತು ಚಿಕಿತ್ಸೆ ಮಾಡದಿದ್ದರೆ ನಂತರ ಬಹುತೇಕ ಎಲ್ಲರಲ್ಲೂ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುತ್ತದೆ. ರೋಗಿ ಮತ್ತು ಕುಟುಂಬದವರಿಗೆ ಸಮಗ್ರ ಸಲಹೆ ನೀಡಿದ ನಂತರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈ ಶಸ್ತ್ರ ಚಿಕಿತ್ಸೆಯನ್ನು ಎಮ್.ಐ.ಓ ತೀರ್ಥಹಳ್ಳಿ ಗ್ರಾಮೀಣ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ತಂಡ ಯಶಸ್ವಿಯಾಗಿ ನೆರವೇರಿಸಿದೆ.
ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ನಿರ್ದೇಶಕರಾದ ಹಿರಿಯ ಆಂಕಾಲಜಿಸ್ಟ್ ಡಾ. ಸುರೇಶ್ ರಾವ್ ಅವರು ತೀರ್ಥಹಳ್ಳಿಯ ಗ್ರಾಮೀಣ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಈ ದೊಡ್ಡ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶಸ್ತ್ರಚಿಕಿತ್ಸಾ ತಂಡ ಹಾಗೂ ವೈದ್ಯರಾದ ಡಾ. ದಿವ್ಯ ಜ್ಯೋತಿ ಮತ್ತು ಡಾ. ಸುಹಾಸ್ ನವಡ ಅವರ ಪ್ರಯತ್ನಗಳನ್ನು ಪ್ರಶಂಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















