ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಭಾರತವು ವಿಶ್ವಗುರು ಸ್ಥಾನವನ್ನು ಅಲಂಕರಿಸಲು ಕಾರಣವಾದ ಮೂಲಶಕ್ತಿ ಭಗವಾನ್ ಶ್ರೀವೇದವ್ಯಾಸರು ಎಂದು ಉಡುಪಿ ಭಂಡರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ನಗರದ ಸತ್ಯನಾಥ ಕಾಲೋನಿಯಲ್ಲಿ #Udupi ಉಡುಪಿ ಶ್ರೀ ಭಂಡಾರಕೇರಿ ಮಠದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ವೇದವ್ಯಾಸ ಜಯಂತಿ, ಮಾಧ್ವರಾದ್ಯಂತ ಸಂವರ್ಧಕ ಸಭಾ ಹಾಗೂ ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
Also Read>> ನಿರಂತರ ಪ್ರಯತ್ನವೇ ಯಶಸ್ಸಿನ ಸೂತ್ರ: ಡಾ. ಪಿ. ನಾರಾಯಣ
ಭಾರತವು ವಿಶ್ವಗುರು ಸ್ಥಾನವನ್ನು ಅಲಂಕರಿಸಲು ಕಾರಣವಾದ ಮೂಲಶಕ್ತಿ ಭಗವಾನ್ ಶ್ರೀ ವೇದವ್ಯಾಸರೇ. #SriVedavyasaru ಅವರ ಸಾಹಿತ್ಯವೇ ಭಾರತೀಯ ಶಾಸ್ತ್ರಪರಂಪರೆಯ ಅಸ್ತಿತ್ವಕ್ಕೆ ಮೂಲಾಧಾರವಾಗಿದೆ ಎಂದು ಅವರು ಹೇಳಿದರು.
ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಮಾತನಾಡಿ, ವೇದವ್ಯಾಸರು ರಚಿಸಿದ ಗ್ರಂಥಗಳ ಸಾರವು ಶ್ರೀಮನ್ನಾರಾಯಣನ ಚಿಂತನೆಯೇ ಆಗಿದ್ದು, ಆ ಪರಮಾತ್ಮನ ಗುಣಪೂರ್ಣತ್ವದ ಉಪಾಸನೆಯ ಮೂಲಕ ಮಾನವನಲ್ಲಿ ಸತ್ಪ್ರವೃತ್ತಿಗಳು ಬೆಳೆಯುತ್ತವೆ ಎಂದು ಹೇಳಿದರು.
ಕಾರ್ಯಕ್ರಮವು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಹಾಗೂ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾಧ್ವರಾದ್ಯಂತ ಸಂವರ್ಧಕ ಸಭೆಯ ವತಿಯಿಂದ, ಕಾಂಚಿ ಶಂಕರಾಚಾರ್ಯ ಮಠದಿಂದ #KanchiShankaracharyaMatha ಪೋಷಿತವಾದ ಶ್ರೀ ವೇದರಕ್ಷ ಣನಿಧಿ ಟ್ರಸ್ಟ್ ಸಂಸ್ಥೆಗೆ ಒಂದು ಲಕ್ಷ ರೂಗಳನ್ನೊಳಗೊಂಡ ಶ್ರೀ ವೇದಪೀಠ ಪ್ರಶಸ್ತಿ ಪ್ರದಾನಿಸಲಾಯಿತು.
Also Read>> ಬಿಜೆಪಿಗರು ಹೊಟ್ಟೆಕಿಚ್ಚಿಗೆ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ: ಸಚಿವ ಮಧು ಬಂಗಾರಪ್ಪ ಲೇವಡಿ
ಟ್ರಸ್ಟ್ ಪರವಾಗಿ ವೇದವಿದ್ವಾಂಸರಾದ ಶ್ರೀ ಗಣಪತಿ ಭಟ್ಟ ಹಾಗೂ ಶ್ರೀ ಗಣೇಶ ಘಣಪಾಠಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು. ಕಳೆದ ಆರು ದಶಕಗಳಿಂದ ವೇದ ಅಧ್ಯಯನ ಮತ್ತು ಪರಂಪರೆಯ ಉಳಿವಿಗೆ ಈ ಸಂಸ್ಥೆ ನೀಡುತ್ತಿರುವ ಕೊಡುಗೆಯನ್ನು ಈ ವೇಳೆ ಪ್ರಶಂಸಿಸಲಾಯಿತು.
ಹಾಗೆಯೇ, ವೇದವ್ಯಾಸ ವಿದ್ಯಾಪೀಠವನ್ನು #VedavyasaVidyapeetha ನಡೆಸುತ್ತಾ, ವಿದ್ಯಾರ್ಥಿಗಳಿಗೆ ಶಾಸ್ತ್ರೋಪದೇಶ ಹಾಗೂ ಭಕ್ತರಿಗೆ ಮಹಾಭಾರತ, ರಾಮಾಯಣ ಮೊದಲಾದ ವಿಷಯಗಳಲ್ಲಿ ಪ್ರವಚನ ನೀಡುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿರುವ ಹೈದರಾಬಾದ್’ನ ಹಿರಿಯ ವೇದಾಂತ ಪಂಡಿತರಾದ, ಶ್ರೀ ಚಿಟಗುಪ್ಪ ಪದ್ಮನಾಭಾಚಾರ್ಯರಿಗೆ ಒಂದು ಲಕ್ಷ ರೂ.ಗಳನ್ನೊಳಗೊಂಡ ಶ್ರೀ ಸತ್ಯತೀರ್ಥಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ಬಾಗಲಕೋಟೆಯಲ್ಲಿ ಕಳೆದ ಮೂರು ದಶಕಗಳಿಂದ ಪಾಠ-ಪ್ರವಚನಗಳಲ್ಲಿ ತೊಡಗಿಸಿಕೊಂಡಿರುವ ಹಿರಿಯ ಪಂಡಿತರಾದ ರಘೂತ್ತಮಚಾರ್ಯ ನಾಗಸಂಪಿಗೆಯವರಿಗೆ, ಐವತ್ತು ಸಹಸ್ರ ರೂಗಳನ್ನೊಳಗೊಂಡ ಭಂಡಾರಕೇರಿ ರಾಜಹಂಸ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅಲ್ಲದೇ, ಮೈಸೂರಿನ ಪ್ರಸಿದ್ಧ ಪ್ರವಚನಕರಾರೂ, ಸಂಶೋಧಕರೂ ಆದ ಶ್ರೀ ಬೆಮ್ಮತ್ತಿ ವಿಜಯೀಂದ್ರಾಚಾರ್ಯರಿಗೆ ಐವತ್ತು ಸಹಸ್ರ ರೂಗಳನ್ನೊಳಗೊಂಡ ಶ್ರೀ ರಾಜವಿದ್ಯಾಮಾನ್ಯ ಪ್ರಶಸ್ತಿ ಪ್ರದಾನಿಸಲಾಯಿತು. ಕನ್ಯೆಯರಿಗಾಗಿ ಗುರುಕುಲವನ್ನು ನಡೆಸುತ್ತಿರುವ ಅವರ ಕಾರ್ಯವನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ನಾಗಸಂಪಿಗೆ ಆನಂದತೀರ್ಥಾಚಾರ್ಯರು ವೇದವ್ಯಾಸರ ಕುರಿತ ವಿಶೇಷ ಉಪನ್ಯಾಸವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಇಬ್ಬರು ಶ್ರೀಪಾದರ ನೇತೃತ್ವದಲ್ಲಿ ಸೇರಿದ ನೂರಾರು ಭಕ್ತರು ವೇದವ್ಯಾಸರ ಹಾಗೂ ವಿದ್ಯಾಮಾನ್ಯರ ಭಾವಚಿತ್ರದ ಮೆರವಣಿಗೆ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಧನ್ಯತೆಯನ್ನು ಅನುಭವಿಸಿದರು. ಶ್ರೀ ವೇದವ್ಯಾಸರ ತುಲಾಭಾರವನ್ನು ನಡೆಸಿ, ಭಾಗವಹಿಸಿದ ಭಕ್ತರೆಲ್ಲರಿಗೂ ಶ್ರೀಪಾದರು ಪ್ರಸಾದವನ್ನು ಅನುಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















