ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಜಿಲ್ಲೆಯ ಪ್ರತಿಷ್ಠಿತ ಕ್ರೈಸ್ಟ್ ಕಿಂಗ್ #ChristKingCollege ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ಅವರು ರಾಷ್ಟ್ರೀಯ ಸ್ಕೂಲ್ ಗೇಮ್ಸ್’ನ 18ರ ವಯೋಮಿತಿಯ ಭಾರತೀಯ ವಾಲಿಬಾಲ್ ತಂಡದ ಆಯ್ಕೆಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ಹೆಗ್ಡೆ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್‌ನವರು ನಡೆಸುವ 18ರ ವಯೋಮಿತಿಯ ಶಾಲಾ ಬಾಲಕಿಯರ ವಿಭಾಗದ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಭಾರತೀಯ ವಾಲಿಬಾಲ್ ತಂಡದ ಆಯ್ಕೆಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾಳೆ.
Also Read>> ಕಾರ್ಕಳ | ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿಗೆ ರಜತ ಸಂಭ್ರಮ | 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಘೋಷಣೆ
ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಒಟ್ಟು 24 ಕ್ರೀಡಾಪಟುಗಳು ಆಯ್ಕೆಯಾಗಿದ್ದು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಇಬ್ಬರಲ್ಲಿ ಶಗುನ್ ವರ್ಮ ಹೆಗ್ಡೆ ಕೂಡಾ ಒಬ್ಬಳಾಗಿದ್ದಾಳೆ.
ಮುಂದೆ ಚೀನಾದ ಶಾಂಗ್ಲೋದಲ್ಲಿ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟವು ನಡೆಯಲಿದ್ದು ಅದಕ್ಕೂ ಮೊದಲು ಭಾರತ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಕಳೆದ ವರ್ಷ 15ರ ವಯೋಮಿತಿಯ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಶಗುನ್ ವರ್ಮ ಹೆಗ್ಡೆ ಭಾರತ ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸಿದ್ದಲ್ಲದೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಾಲಿಬಾಲ್ ಆಟಗಾರ್ತಿಯಾಗಿದ್ದಳು.
ಈಕೆ ಕಲ್ಲೊಟ್ಟೆ ನಿವಾಸಿ ಎಂಎಂಸಿ ಡೆಕೋರೇರ‍್ಸ್’ನ ಮಾಲಕರಾದ ಸಂದೇಶ್ ವರ್ಮಾ ಹಾಗೂ ಶ್ರುತಿರಾಜ್ ದಂಪತಿಗಳ ಪುತ್ರಿಯಾಗಿದ್ದಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















