ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
2020ರಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ನಗರದ ಆರು ಆರೋಪಿಗಳಿಗೆ ಭದ್ರಾವತಿಯ ನ್ಯಾಯಾಲಯವು ಕಠಿಣ ಕಾರಾಗೃಹ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಅಜೇಯ ಅಜ್ಜಿ (24), ತೇಜು ತೇಜಸ್ವಿ ಟೀಕು(22), ಮನು ಗೊಣ್ಣೆ ಮಧು ಮನೋಜ್(22), ಆದರ್ಶ ಆದು(25), ಅರುಣ(20), ಪಾನಿಪುರಿ ರಂಗ ರಂಗ ಪಾನಿಪುರಿ(25) ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ.
Also Read>> ಹೊತ್ತಿ ಉರಿದ ಕೆಎಸ್’ಆರ್’ಟಿಸಿ ಬಸ್ | ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಜೀವ
ಘಟನೆ ಹಿನ್ನೆಲೆಯೇನು?
2020ರ ಮೇ ತಿಂಗಳಿನಲ್ಲಿ ತಾಲೂಕಿನ ಜಿಂಕಲೈನ್ ವೀರಾಪುರ ರಸ್ತೆಯಲ್ಲಿರುವ ಬಾಬುರವರ ಮನೆ ಹಿಂಭಾಗದ ತೆಂಗಿನ ತೋಟದಲ್ಲಿ ಕಿರಣ್(29), ಮಂಜುನಾಥ್(25) ಮತ್ತು ಅರುಣ(24) ಎನ್ನುವವರ ಮೇಲೆ ಆರೋಪಿಗಳು ಹಳೇ ದ್ವೇಷದಿಂದ ಹಲ್ಲೆ ಮಾಡಿದ್ದಾರೆ.
ಆರೋಪಿಗಳು ಮಂಜುನಾಥ್ ಮೇಲಿನ ಹಳೆಯ ದ್ವೇಷದಿಂದ ಕೈಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು, ಅವಾಚ್ಯವಾಗಿ ಬ್ಶೆದು, ದೊಣ್ಣೆಗಳಿಂದ, ಕೈಯಿಂದ, ಮೈಕೈಗೆ ಹೊಡೆದಿದ್ದು, ಮನು ಆರೋಪಿಯು ಮಂಜುನಾಥ್ ಅವರನ್ನು ಹಿಡಿದುಕೊಂಡಿದ್ದು, ಅಜೇಯ ಆರೋಪಿಯು ಸಾಯಿಸುವ ಉದ್ದೇಶದಿಂದ ಕಬ್ಬಿಣದ ಮಚ್ಚಿನಿಂದ ಮಂಜುನಾಥ್ ಬಲಗೈ, ಮೊಣಕೈ ಹಾಗೂ ಸೊಂಟದ ಎಡಭಾಗಕ್ಕೆ ಬೀಸಿ ಹೊಡೆದು ತೀವ್ರ ಸ್ವರೂಪದ ಗಾಯವಾಗಿತ್ತು.
ಈ ಬಗ್ಗೆ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 143, 144, 147, 148, 504, 323, 324, 307 ಸಹಿತ149 ಐಪಿಸಿ ರಿತ್ಯಾ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಎಎಸ್’ಐ ಕುಬೇರಪ್ಪ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ, ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು, ಆರೋಪಿಗಳಿಗೆ 1 ಆರೋಪಿತನಿಗೆ 307 ಐಪಿಸಿ ಕಾಯಿದೆಗೆ 7 ವರ್ಷ ಕಠಿಣ ಕಾರಾವಾಸ ಮತ್ತು ಎ1 ರಿಂದ ಎ6 ಆರೋಪಿತರಿಗೆ ಕಲಂ 143, 144, 147, 148, 323, 324 ಐಪಿಸಿ ಕಾಯಿದೆಗೆ 3 ವರ್ಷ ಕಠಿಣ ಕಾರಾವಾಸ ಮತ್ತು ಒಟ್ಟು 2,30,000 ರೂ ದಂಡವನ್ನು ವಿಧಿಸಿದ್ದಾರೆ.
ನೊಂದವರಾದ ಮಂಜುನಾಥ್ ಅವರಿಗೆ 1,50,000 ರೂ. ಪರಿಹಾರ ಕೊಡಲು ಆದೇಶಿಸಿರುತ್ತದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ರತ್ನಮ್ಮ ಅವರು ವಾದ ಮಂಡಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















