ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ಕುಮದ್ವತಿ ರೆಸಿಡೆನ್ಷಿಯಲ್ ಸೆಂಟ್ರಲ್ ಶಾಲೆ #KRCS ಶಿಕಾರಿಪುರದಲ್ಲಿ “ಪರಿಣಾಮಕಾರಿ ಪಾಲನೆಯ ಮೂಲಕ ಮಕ್ಕಳ ಭವಿಷ್ಯ ರೂಪಿಸುವಿಕೆ” ಕುರಿತು ಪಾಲಕರ ದೃಢೀಕರಣ ಕಾರ್ಯಕ್ರಮ ನಡೆಯಿತು.
ಶಾಲೆಯ ಪ್ರಾಂಶುಪಾಲರಾದ ಎಚ್.ಡಿ. ಪ್ರಶಾಂತ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಪ್ರತಿನಿಧಿ, ಕೆಸಿಇ ಎಸ್ವಿವಿಎಸ್ ಹಾಗೂ ಪ್ರಾಂಶುಪಾಲರು ಆದ ಡಾ. ಜಿ.ಎಸ್. ಶಿವಕುಮಾರ್, ಎಸ್ವಿವಿಎಸ್ #SVVS ಆಡಳಿತಾತ್ಮಕ ಸಂಯೋಜಕರಾದ ಕೆ. ಕುಬೇರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
Also Read>> ಹುಬ್ಬಳ್ಳಿ | 19ನೇ ರೋಜ್‌ಗಾರ ಮೇಳ | 150 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ
ಸಂಪನ್ಮೂಲ ವ್ಯಕ್ತಿಯಾಗಿ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ. ಯದುಕುಮಾರ್ ಅವರು ಸಕಾರಾತ್ಮಕ ಪಾಲನೆ, ಎನ್‌ಇಪಿ 2020 ಮಾರ್ಗಸೂಚಿಗಳು ಹಾಗೂ ಪಾಲಕ-ಮಕ್ಕಳ ಸಂವಹನದ ಮಹತ್ವ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಎಟಿಡಿಸಿ ಪ್ರಾಂಶುಪಾಲರಾದ ವಿದ್ಯಾಶಂಕರ್, ಕೆಆರ್’ಸಿಎಸ್ ಸಂಯೋಜಕರಾದ ಆರ್. ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದರು.
ಪ್ರಾಂಶುಪಾಲರಾದ ಎಚ್.ಡಿ. ಪ್ರಶಾಂತ ಅವರು 2026-27ನೇ ಶೈಕ್ಷಣಿಕ ಸಾಲಿನ ಯೋಜನೆ, ಡಿಜಿಟಲ್ ತರಗತಿಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ವಿವರಿಸಿದರು. ಎನ್‌ಇಪಿ 2020 ಆಶಯದಂತೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪಾಲಕರ ಸಕ್ರಿಯ ಭಾಗವಹಿಸುವಿಕೆ ಅಗತ್ಯವೆಂದು ಹೇಳಿದರು.
Also Read>> ದೇಶಾದ್ಯಂತ 47 ಸ್ಥಳಗಳಲ್ಲಿ ರೋಜ್ಗಾರ್ ಮೇಳ | 51 ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಣೆ
ಕಾರ್ಯಕ್ರಮವು ಸಂವಾದ ಹಾಗೂ ಪ್ರಶ್ನೋತ್ತರದೊಂದಿಗೆ ಮುಕ್ತಾಯಗೊಂಡಿತು. ಸಂಗೀತ ಶಿಕ್ಷಕಿ ಸವಿತಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಹಶಿಕ್ಷಕಿ ಕಾವ್ಯ ವಂದಿಸಿ, ಜಿಯಾವುಲ್ಲಾ ಸ್ವಾಗತಿಸಿ, ಆರಿಫಾ ಕಾರ್ಯಕ್ರಮ ನಿರೂಪಿಸಿದರು.
ಮೇ 25ರ ಇಂದಿನಿಂದ 1ರಿಂದ 10ನೇ ತರಗತಿಗಳ ವಿದ್ಯಾಾರ್ಥಿಗಳಿಗೆ ಪುನರಾರಂಭಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















