ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಪಡನೂರ ನಿಲ್ದಾಣದಲ್ಲಿ ಹುಬ್ಬಳ್ಳಿ-ಸೋಲಾಪುರ- ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲು Hubli-Solapur daily passenger train ಇನ್ನೂ ಆರು ತಿಂಗಳು ನಿಲುಗಡೆ ಮುಂದುವರಿಕೆ
ಪ್ರಯಾಣಿಕರ ಅನುಕೂಲಕ್ಕಾಗಿ, ಲಚ್ಯಾಣ ಮತ್ತು ತಡವಾಳ ನಿಲ್ದಾಣಗಳ ಮಧ್ಯೆ ಇರುವ ಪಡನೂರ ಹಾಲ್ಟ್ ನಿಲ್ದಾಣದಲ್ಲಿ ರೈಲು ಸಂಖ್ಯೆ 56906/56905 ಎಸ್ಎಸ್ಎಸ್ ಹುಬ್ಬಳ್ಳಿ–ಸೋಲಾಪುರ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲುಗಳ ನಿಲುಗಡೆಯನ್ನು ದಿನಾಂಕ 01.06.2026 ರಿಂದ 30.11.2026 ರವರೆಗೆ ಅನ್ವಯವಾಗುವಂತೆ ಮತ್ತೊಂದು ಆರು ತಿಂಗಳ ಅವಧಿಗೆ ಮುಂದುವರಿಸಲಾಗಿದೆ.
ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ನಿಯಂತ್ರಣ, ಮರುವೇಳಾಪಟ್ಟಿ ಮತ್ತು ಮಾರ್ಗ ಬದಲಾವಣೆ
ಚನ್ನಸಂದ್ರ ಮತ್ತು ಯಲಹಂಕ ನಿಲ್ದಾಣಗಳ ನಡುವಿನ ರಾಜಕಾಲುವೆ ಸೇತುವೆ ಸಂಖ್ಯೆ 537/A ನಲ್ಲಿ ಎರಡು ವೆಂಟ್ಗಳ ಆರ್ಸಿಸಿ ಬಾಕ್ಸ್ಗಳನ್ನು ಅಳವಡಿಸುವ ಎಂಜಿನಿಯರಿಂಗ್ ಕಾಮಗಾರಿಗಳ ಸಲುವಾಗಿ, ರೈಲು ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗುವುದು:
- ದಿನಾಂಕ 28.05.2026 ರಂದು ನಾಂದೇಡ್ನಿಂದ ಹೊರಡುವ ರೈಲು ಸಂಖ್ಯೆ 16594 ನಾಂದೇಡ್–ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- ದಿನಾಂಕ 28.05.2026 ರಂದು ಸಿಎಸ್ಎಂಟಿ ಮುಂಬೈನಿಂದ ಹೊರಡುವ ರೈಲು ಸಂಖ್ಯೆ 11301 ಸಿಎಸ್ಎಂಟಿ ಮುಂಬೈ–ಕೆಎಸ್ಆರ್ ಬೆಂಗಳೂರು ಡೈಲಿ ಉದ್ಯಾನ್ ಎಕ್ಸ್’ಪ್ರೆಸ್ ರೈಲನ್ನು ಸಹ ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- ದಿನಾಂಕ 28.05.2026 ರಂದು ಹೊರಡುವ ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು–ನಾಂದೇಡ್ ಡೈಲಿ ಎಕ್ಸ್’ಪ್ರೆಸ್ ರೈಲು ತನ್ನ ಮೂಲ ನಿಲ್ದಾಣದಿಂದ 45 ನಿಮಿಷ ತಡವಾಗಿ ಹೊರಡಲಿದೆ ಹಾಗೂ ಈ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಗ್ರಿಡ್ ಬದಲಾವಣೆಯ ಕಾರಣದಿಂದಾಗಿ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಯಲಹಂಕ ಮಾರ್ಗವಾಗಿ ಸಂಚರಿಸಲಿದ್ದು, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
ರೈಲುಗಳ ತಾತ್ಕಾಲಿಕ ಮರುವೇಳಾಪಟ್ಟಿ ಮತ್ತು ನಿಯಂತ್ರಣ
ನಾರಾಯಣಗಢ-ಭದ್ರಕ್ 3ನೇ ರೈಲು ಮಾರ್ಗ ಕಾಮಗಾರಿಗೆ ಸಂಬಂಧಿಸಿದಂತೆ, ರೂಪ್ಸಾ ಯಾರ್ಡ್ನಲ್ಲಿ ನವಿಕರಣ ಕೆಲಸದ ಹಿನ್ನೆಲೆಯಲ್ಲಿ, ದಕ್ಷಿಣ ಪೂರ್ವ ರೈಲ್ವೆಯು ಈ ಕೆಳಗಿನ ರೈಲುಗಳ ತಾತ್ಕಾಲಿಕ ಮರುವೇಳಾಪಟ್ಟಿ ಮತ್ತು ನಿಯಂತ್ರಣವನ್ನು ಸೂಚಿಸಿದೆ:
- ದಿನಾಂಕ 06.06.2026 ರಂದು ಹೊರಡುವ ರೈಲು ಸಂಖ್ಯೆ 12245 ಹೌರಾ–ಎಸ್ಎಂವಿಟಿ ಬೆಂಗಳೂರು ಡುರಂಟೊ ಎಕ್ಸ್’ಪ್ರೆಸ್ ರೈಲು ತನ್ನ ಪ್ರಾರಂಭ ನಿಲ್ದಾಣದಿಂದ 60 ನಿಮಿಷ ತಡವಾಗಿ ಹೊರಡಲಿದೆ. ಇದಲ್ಲದೆ, ದಿನಾಂಕ 07.06.2026 ರಂದು ಹೊರಡುವ ಇದೇ ರೈಲು ಹೌರಾದಿಂದ 120 ನಿಮಿಷ ತಡವಾಗಿ ಹೊರಡಲಿದೆ.
- ದಿನಾಂಕ 05.06.2026 ರಂದು ಹೊರಡುವ ರೈಲು ಸಂಖ್ಯೆ 12246 ಎಸ್ಎಂವಿಟಿ ಬೆಂಗಳೂರು–ಹೌರಾ ಡುರಂಟೊ ಎಕ್ಸ್’ಪ್ರೆಸ್ ರೈಲು ಮಾರ್ಗಮಧ್ಯೆ 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- ದಿನಾಂಕ 06.06.2026 ರಂದು ಹೊರಡುವ ರೈಲು ಸಂಖ್ಯೆ 12551 ಎಸ್ಎಂವಿಟಿ ಬೆಂಗಳೂರು–ಕಾಮಕ್ಯ ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 180 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















