ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಪಾರಂಪರಿಕ ನಾಟಿ ವೈದ್ಯ ಮಂಚಪ್ಪ ಟಿ ಇಂದು ವಯೋಸಹಜವಾಗಿ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.
ಶತಾಯುಷಿಯಾಗಿದ್ದ ಇವರು ಸೊರಬ ಹಾಗೂ ಸುತ್ತಮುತ್ತಲ ತಾಲೂಕುಗಳಲ್ಲಿ ತಮ್ಮ ಪರಿಣಾಮಕಾರಿ ನಾಟಿ ಔಷಧಿಯಿಂದ ಹೆಸರುವಾಸಿಯಾಗಿದ್ದರು.
ಹಿರಿಯ ಸಮಾಜವಾದಿ ಧುರೀಣರಾಗಿದ್ದ ದಿವಂಗತ ಕೆಎಚ್ ಮರಿಯಪ್ಪನವರ ಸಮಕಾಲೀನರಾಗಿದ್ದ ಇವರ ಸೇವೆಯನ್ನು ಗಮನಿಸಿ ಸೊರಬ ತಾಲೂಕಿನ ಸಾಕಷ್ಟು ಸಂಘ-ಸಂಸ್ಥೆಗಳವರು ಸನ್ಮಾನಿಸಿ ಗೌರವಿಸಿದ್ದರು.
ನಾಲ್ಕು ಜನ ಪುತ್ರರು ಏಳು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಇವರು ಅಗಲಿದ್ದಾರೆ.
ಇವರ ನಿಧನಕ್ಕೆ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ನಿರಂಜನ್ ಕುಪ್ಪಗಡ್ಡೆ ಸೇರಿದಂತೆ ತಾಲೂಕಿನ ಸಂಘ ಸಂಸ್ಥೆಗಳವರು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















