No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Thursday, October 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಪುನೀತ್ ಜಿ. ಕೂಡ್ಲೂರು

ತವರು ಮನೆ calling… ಅಂತ ಇದ್ದ ಬೇಸಿಗೆ ರಜೆ ಮುಗಿದೇ ಹೋಯಿತೆ?

kalpa News by kalpa News
June 10, 2026
in ಪುನೀತ್ ಜಿ. ಕೂಡ್ಲೂರು
0
ತವರು ಮನೆ calling… ಅಂತ ಇದ್ದ ಬೇಸಿಗೆ ರಜೆ ಮುಗಿದೇ ಹೋಯಿತೆ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ನಾವೆಲ್ಲಾ ಶಾಲೆಯಲ್ಲಿ ಓದುತ್ತಿದ್ದಾಗ ಶಾಲೆಯ ಬೇಸಿಗೆಯ ರಜಾ ದಿನಗಳು ನಮಗೆ ಮಾತ್ರ ಸಂಭ್ರಮವಲ್ಲ ನಮ್ಮ ತಲೆಮಾರಿನ ಬಹುಷಹ ತಾಯಂದರಿಗೆ ನಮಗಿಂತ ಸಂತೋಷ, ಸಂಭ್ರಮ, ಸಡಗರ. ವರ್ಷಗಳಿಂದ ಕಾಯುತ್ತಿದ್ದ ಸುದೀರ್ಘ ರಜೆಯ ದಿನಗಳು ಬಂದವು ಎಂದು, ಏಕೆಂದರೆ ಬೇಸಿಗೆಯ ರಜೆ ಮಕ್ಕಳಿಗೆ ಶಾಲೆಯ ಕಲಿಕೆ, ಶಿಸ್ತು, ಅಭ್ಯಾಸಗಳಿಂದ ಅಲ್ಪ ವಿರಾಮದ ಸಂತೋಷದ ದಿನಗಳಾದರೆ ತಾಯಂದಿರಗೆ ಆ ಎರಡು ತಿಂಗಳು “ತವರು ಮನೆ calling…..”!

ತಮ್ಮ ದಿನ ನಿತ್ಯದ ಜಂಜಾಟಗಳ ನಡುವೆ ಒಂದೋ ಎರಡೋ ತಿಂಗಳು ಅಮ್ಮನ ಮನೆಯಲ್ಲಿ ಈ ಅಮ್ಮನೇ ಮಗಳಾಗಿ ಕಾಲ ಕಳೆಯುತ್ತಿದ್ದಳು. ತನ್ನ ಮಕ್ಕಳಿಗೆ ತಾನು ಓದಿದ ಶಾಲೆ, ತನ್ನ ತವರಿನ ಸಂಬಂಧ, ತನ್ನ ಬಾಲ್ಯ ಸ್ನೇಹಿತರು, ತನ್ನ ಊರು, ಅಲ್ಲಿಯ ದೇವಸ್ಥಾನ, ತೋಟ, ಗದ್ದೆ ಎಲ್ಲವನ್ನು ತನ್ನದು ತನ್ನದು ಎಂದು ಪರಿಚಯಿಸುತ್ತಾ ತನ್ನದನ್ನು ಹೆಮ್ಮೆಯಿಂದ ಹೇಳುತ್ತಿದ್ದಳು. ಅಮ್ಮನ ಮನೆಯಲ್ಲಿ ಬೇಸಿಗೆ ಕಳೆಯಲು ತನ್ನಂತಯೇ ಬರುತ್ತಿದ್ದ ತನ್ನ ಅಕ್ಕ ತಂಗಿಯರು, ಅತ್ತಿಗೆ ನಾದನಿಯರು, ಚಿಕ್ಕಪ್ಪ, ದೊಡ್ಡಪ್ಪ, ಮಾವನ ಮಕ್ಕಳು ಎಲ್ಲರೊಂದಿಗೆ ತನ್ನ ಮಕ್ಕಳನ್ನು ಅವರ ಮಕ್ಕಳನ್ನು ಸೇರಿಸಿ ಆಡಿಸುತ್ತಿದ್ದರು, ಆಟವಾಡುತ್ತಿದ್ದರು.

Also Read>> ಮಾಜಿ ಡಿಸಿಎಂ ಈಶ್ವರಪ್ಪ ಜನ್ಮದಿನ | ಸ್ವಗೃಹದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

ಮೊಬೈಲ್, ಟಿವಿಗಳ ಹಾವಳಿ ಜಾಸ್ತಿ ಇಲ್ಲದ ಸುಂದರ ಕಾಲ ಘಟ್ಟವದು ಹಾವು ಏಣಿ, ಕುಂಟ ಬಿಲ್ಲೆ, ಚೌಕಾ ಬಾರ, ಕೇರಂ, ಕಣ್ಣಾಮುಚ್ಚಾಲೆ, ಮರ ಕೋತಿ ಅಬ್ಬಾ ಒಂದಾ ಎರಡಾ ಎಷ್ಟೊಂದು ಆಟಗಳನ್ನು ಆಟ ವಾಡುತ್ತಿದ್ದೆವು. ಆ ಆಟಗಳು ಇಂದಿಂಗೂ ನಮ್ಮ ಸಂಬಂಧವನ್ನು ಗಟ್ಟಿಗೊಳಿಸಿವೆ ನಮ್ಮಲ್ಲಿ ಬಾಲ್ಯದ ನೆನಪುಗಳನ್ನು ಪ್ರತಿ ಬೇಸಿಗೆಯಲ್ಲೂ ನಮ್ಮ ಮುಂದೆ ತಂದು ನಿಲ್ಲಿಸುತ್ತಿದೆ. ಆದರೆ ಅದೇ ಕ್ಷಣ ಮರುಕ ಹುಟ್ಟುತ್ತಿದೆ ನಾವು ಕಳೆದ ಸುಂದರ ಬೇಸಿಗೆ ರಜೆ ನಮ್ಮ ಮಕ್ಕಳಿಗೆ ಇಲ್ಲವಲ್ಲವೆಂದು.ತವರು ಮನೆ calling… ಅಂತ ಇದ್ದಾ ಬೇಸಿಗೆ ರಜೆಗಳು ಇಂದು ನಮ್ಮ ಕೆಲಸದ ಒತ್ತಡ, ಕೆಲಸದ ಶೈಲಿ, ಕುಟುಂಬದ ಇತರೆ ಜವಬ್ಧಾರಿಗಳು ಈ ಬೇಸಿಗೆ ರಜವನ್ನು ಮಕ್ಕಳು ಅಜ್ಜಿ ಮನೆಯಲ್ಲಿ ಕಳೆಯುವುದನ್ನು ತಪ್ಪಿಸುವ ಜೊತೆಗೆ ತಾಯಂದಿರೂ ಅಮ್ಮನ ಮನೆಗೆ ಹೋಗುವುದನ್ನೂ ತಪ್ಪಿಸುತ್ತಿದೆ ಎಂದರೆ ತಪ್ಪಿಲ್ಲ ಅನ್ನಿಸುತ್ತದೆ. ಬೇಸಿಗೆ ರಜೆ ಆರಂಭಕ್ಕೂ ಮೊದಲೆ ಅನಿವಾರ್ಯಕ್ಕೋ, ಅವಶ್ಯಕತೆಗೋ ಒಂದೊಂದು ಬೇಸಿಗೆ ಶಿಬಿರದಲ್ಲಿ ಮಕ್ಕಳನ್ನು ಸೇರಿಸಲು ಸಿದ್ದ ಮಾಡಿಕೊಳ್ಳುತ್ತೇವೆ. ಮಕ್ಕಳಿಗೆ ಹೊಸದನ್ನು ಬೇಸಿಗೆ ಶಿಬಿರದಲ್ಲಿ ಕಲಿಸುವ ಉತ್ಸಾಹ ಶೇಕಡಾ ಐವತ್ತು ಮಂದಿ ಪೋಷಕರಿಗಿದ್ದರೆ ಉಳಿದ ಶೇಕಡಾ ಐವತ್ತು ಪೋಷಕರಿಗೆ ತಾವು ಕೆಲಸದಿಂದ ಮನೆಗೆ ಬರುವ ತನಕ ಆ ಮಕ್ಕಳು ಬೇರೊಲ್ಲೋ ಸುರಕ್ಷಿತವಾಗಿ ಇರಬೇಕು, ಮನೆಯಲ್ಲಿ ಟಿವಿ ಮುಂದೆ ಕೂರುವ ಬದಲು, ಮೊಬೈಲ್ ನೋಡುವ ಬದಲು ಒಂದಷ್ಟು ಕಾಲ ಮತ್ತೆಲ್ಲೋ ಉಪಯುಕ್ತವಾಗಿ ಸಮಯ ಕಳೆಯಲಿ ಎಂದು ಬೇಸಿಗೆ ಶಿಬಿರ ಆಯ್ಕೆ ಮಾಡುತ್ತಾರೆ.

ನಮ್ಮ ಕಾರ್ಪೋರೇಟ್ ಜೀವನ , ಟಾರ್ಗೆಟ್ ಆದರಿತ ಕೆಲಸಗಳು ದಿನ ನಿತ್ಯ ಮಕ್ಕಳಿಗಾಗಿ ನಾವು ಸಮಯ ನೀಡುವುದನ್ನು ಕಡಿಮೆ ಮಾಡಿದೆ ಆದರೆ ಬೇಸಿಗೆ ರಜಾ ದಂತ ಸುದೀರ್ಘ ಎರಡು ತಿಂಗಳೂ ಸಹ ಅದೆಷ್ಟೋ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಒಂದು ದಿನದ ಪ್ರವಾಸ, ಅಜ್ಜಿ ತಾತ ನ ಮನೆ ಬೇಟಿ, ಅವರೊಂದಿಗೆ ಆಟ ಆಡಲು ಸಮಯ ಸಿಗಲಿಲ್ಲ ಎಂದರೆ ನಮ್ಮ ಕೆಲಸಗಳೂ ಸಹಾ ನಮ್ಮ ಮಕ್ಕಳ ಭಾವನೆಗಳ ಮೇಲೆ ಎಂತಹ ದೌರ್ಜನ್ಯ ಮಾಡುತ್ತಿವೆ ಎಂದು ನಾವು ಯೋಚಿಸುವುದೂ ಇಲ್ಲ.ಇಷ್ಟೆಲ್ಲಾ ಒತ್ತಡದ ನಡುವೆಯೂ ಮಕ್ಕಳ ಜೊತೆ ಚಲನ ಚಿತ್ರ ವೀಕ್ಷಣೆ, ಕ್ರಿಕೇಟ್, ಬ್ಯಾಡ್ ಮಿಟನ್, ವಾಲಿ ಬಾಲ್, ಚೌಕಾ ಬಾರ, ಹಾವು ಏಣಿ, ಅಳಿಗುಳಿ ಮನೆ ಆಟ, ಬೇರೆ ರೀತಿಯ ಆಟಗಳು, ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ, ಒಂದಷ್ಟು ದಿನದ ಪ್ರವಾಸ ಕೈಗೊಂಡ ಪೋಷಕರು ಇದ್ದಾರೆ. ನಮ್ಮ ಮಕ್ಕಳೊಂದಿಗೆ ಅವರಿಗೆ ಯಾವುದೇ ಒತ್ತಡ ವಿಲ್ಲದ ಸಮಯದಲ್ಲಿ ನಮ್ಮ ಎಲ್ಲಾ ಕೆಲಸದ ಒತ್ತಡಗಳನ್ನು ಬದಿಗೊತ್ತಿ ಅವರೊಂದಿಗೆ ಕಳೆಯುವ ಅದ್ಭುತ ಸಮಯವೇ ನಮ್ಮ ಜೆನೆರೇಶನ್ ನ ಗೋಲ್ಡನ್ ಟೈಮ್.. ಅವರೊಂದಿಗೆ ಸುಂದರವಾದ ಸಮಯವನ್ನು ಕಳೆಯದೇ ಬೇರೇನೇ ನಾವು ನಮ್ಮ ಮಕ್ಕಳಿಗೆ ಮಾಡಿದರು ಅದೊಂದು ವ್ಯವಸ್ಥಿತ ವ್ಯವಹಾರವಷ್ಟೆ ಎಂಬುದು ನನ್ನ ಭಾವನೆ.ಈ ಬೇಸಿಗೆಯ ರಜೆಯಲ್ಲಿ ನನ್ನ ಪತ್ನಿ, ನನ್ನ ಸ್ನೇಹಿತೆಯರು, ನನ್ನ ಮಹಿಳಾ ಸಹೋದ್ಯೋಗಿ ಮಾತೆಯರು, ಬೇಸಿಗೆಯ ಶಿಬಿರದಲ್ಲಿ ಮಗುವನ್ನು ಬಿಟ್ಟು ಹೋಗುತ್ತಿದ್ದ ತಾಯಂದಿರನ್ನು ನೋಡಿದಾಗ, ಆಫಿಸ್ ನ ಮೀಟಿಂಗ್ ಲಿ ಮಹಿಳಾ ಸಹೋದ್ಯೋಗಿಗಳು “Its holiday for my kid, Sorry for background noise, I will ask them to keep silent.” ಎಂದು ಕೇಳಿದಾಗ ನನ್ನ ಮನಸಿನಲ್ಲಿ ಮೂಡುತ್ತಿದ್ದ ಪ್ರಶ್ನೆ ಈ ಜೆನೆರೆಶನ್ ನ ಅಮ್ಮಂದಿರು ತಮ್ಮ ಮಕ್ಕಳೊಡನೆ ತಮ್ಮ ತವರು ಮನೆಗೆ ಹೋಗುವುದನ್ನು ಕಳೆದು ಕೊಂಡರಲ್ಲ ಎಂದು. ನಮ್ಮ ಬದುಕಿನ ಒತ್ತಡಗಳು ನಮಗೆ ತಿಳಿಯದಂತೆ ನಮ್ಮಿಂದ ಎಷ್ಟನ್ನು ಕಸಿಯುತ್ತಿದೆ ಎಂದು ತಿಳಿಯುತ್ತಿಲ್ಲ ನಾವು. ಇಲ್ಲಿ ತಾಯಿ ಮಾತ್ರ ತನ್ನ ತವರು ಮನೆಯನ್ನು ಮಿಸ್ ಮಾಡಿಕೊಳ್ಳುವುದಲ್ಲ ಅತ್ತಾ ತನ್ನ ಮಗಳು, ಮೊಮಕ್ಕಳೊಂದಿಗೆ ಬೇಸಿಗೆ ರಜೆಯಲ್ಲಿ ಒಂದಷ್ಟು ಕಾಲ ಕಳೆಯ ಬಹುದೆಂದು ಹಂಬಲಿಸುವ ಆ ವೃದ್ಧ ಮನಸ್ಸುಗಳನ್ನೂ ಸಹ ಅರಿಯಲು ನಾವು ವಿಫಲರಾದೆವು. ಅರ್ಥ ಆದರೂ ಏನೂ ಮಾಡಾಲಾಗದೆ ವಾರಾಂತ್ಯ ಬೇಟಿ ನೀಡಿ ಸೋಮವಾರ ಬೆಳಗ್ಗೆ ದುಡಿಮೆಗೆ ದುಡೂವ ಮನಸನ್ನು ಕೇಳುತ್ತಾ ಆಲ್ ರೈಟ್ ಮುಂದೆ ಹೋಗೋಣ ಎಂದು ನೆಡೆಯುತ್ತೇವೆ. ಆದರೆ ಒಂದಂತೂ ಸತ್ಯ ಇನ್ನೂ ಮುಂದೆ ತವರು ಮನೆ calling…… ಎಂಬುವ ಸುಂದರ ಬೇಸಿಗೆಯ ರಜೆ ದಿನಗಳ ಕಾಲ ಮುಗಿದೇ ಹೋಗುತ್ತದೆ ಅನ್ನಿಸುತ್ತದೆ.ಬೇಸಿಗೆಯ ರಜೆ ಕಳೆದಿದೆ ಜೂನ್ ಬಂದಿದೆ ಮೊದಲ ದಿನ ಮಕ್ಕಳಿಗೆ ತಿಂಡಿ, ಊಟದ ಡಬ್ಬಿ, ಸಮವಸ್ತ್ರ, ಶೂ ಸಿದ್ದ ಮಾಡಿ ಬಸ್ ಹತ್ತಿಸುವಾಗ ಮನಸ್ಸು ಅತ್ಯಂತ ದುಃಖದಿಂದ ಹೇಳುತ್ತದೆ ಛೇ….. ಬೇಸಿಗೆ ರಜೆ ಮುಗಿದೇ ಹೋಯಿತು.. ಮತ್ತಷ್ಟು ದಿನ ನಮ್ಮ ಮಕ್ಕಳೊಂದಿಗೆ ಸಮಯ ಕಳೆಯ ಬೇಕಿತ್ತು ಎಂದು…. ಮಗನ ಡಬ್ಬಿಯೊಂದಿಗೆ ತನ್ನ ವ್ಯಾನಿಟಿ ಬ್ಯಾಗಿಗೆ ಮತ್ತೊಂದು ಡಬ್ಬಿಯನ್ನು ಹಾಕಿಕೊಂಡು ಹೊರಡುವ ತಾಯಂದರಿಗೆ ಈ ಲೇಖನ ಸಮರ್ಪಣೆ.

Also Read>> MEIL Scripts Himalayan History with Final Breakthrough of Zojila Tunnel

ಬೇಸಿಗೆ ರಜೆಯಲ್ಲಿ ಅಮ್ಮನ ಮನೆಯಲ್ಲಿ ಮಗಳಾಗಿ ಕಾಲ ಕಳೆಯುವ ಸಮಯ ಅತ್ಯಂತ ಸುಂದರವಾದುದು. ಒಬ್ಬ ಮದ್ಯ ವಯಸ್ಕ ಅಮ್ಮನಿಗೆ ಅದೊಂದು ಎನರ್ಜಿ ರಿಫ್ರೆಶ್ ಮೆಂಟ್!! ಅಮ್ಮನೇ ಮೊಬೈಲ್’ಗೆ ಫೋನ್ ಮಾಡಿದರು ಅಮ್ಮ ಆಫಿಸ್ ಲಿ ಇದಿನಿ, ಅಮ್ಮ ಮೀಟಿಂಗ್ ಲಿ ಇದಿನಿ, ಅಮ್ಮ ಮಗುಗೇ ಓದಿಸ್ತಾ ಇದಿನಿ, ಅಮ್ಮ ಅಡುಗೆ ಮಾಡ್ತಾ ಇದಿನಿ ಆಮೇಲೆ ಫೋನ್ ಮಾಡ್ತೀನಿ ಅಂತಾ ಹೇಳುತ್ತಾ ನನ್ನ ಸಮ ವಯಸ್ಸಿನ ಮಾತೆಯರು ಇದ್ದಾರೆ. ಅವರೆಲ್ಲರಿಗೂ ಮುಂದಿನ ಬೇಸಿಗೆ ರಜೆ ನಿಜವಾಗಲೂ ತವರು ಮನೆ calling ಆಗಲಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: HometownKannada News WebsiteLatest News KannadaSpecial ArticleSummer Holidaysಚೌಕಾ ಬಾರತವರು ಮನೆಬೇಸಿಗೆ ರಜೆವಿಶೇಷ ಲೇಖನ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಮಾಜಿ ಡಿಸಿಎಂ ಈಶ್ವರಪ್ಪ ಜನ್ಮದಿನ | ಸ್ವಗೃಹದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

Next Post

ಶಿವಮೊಗ್ಗ: ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಹಲ್ಲೆ – ಇಬ್ಬರು ಗಾಯ

kalpa News

kalpa News

Next Post
ಶಿವಮೊಗ್ಗ: ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಹಲ್ಲೆ – ಇಬ್ಬರು ಗಾಯ

ಶಿವಮೊಗ್ಗ: ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಹಲ್ಲೆ – ಇಬ್ಬರು ಗಾಯ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL