ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರ (Shikaripura) ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ (Tournament) ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಬಾಲಕರ ವಿಭಾಗದ ಚಾಂಪಿಯನ್ ಪ್ರಶಸ್ತಿ ಹಾಗೂ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ದಿನಾಂಕ 27 ಹಾಗೂ 28ರಂದು ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶಿಕಾರಿಪುರ ತಾಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಬಾಲಕರ ವಿಭಾಗದಲ್ಲಿ ಅತ್ಯುತ್ತಮ ಸಾಧನೆ
ಬಾಲಕರ ವಿಭಾಗದಲ್ಲಿ ಕುಮದ್ವತಿ ಕಾಲೇಜಿನ ವಿದ್ಯಾರ್ಥಿಗಳು ಥ್ರೋಬಾಲ್, 4×100 ಮೀಟರ್ ರಿಲೇ, 4×400 ಮೀಟರ್ ರಿಲೇ, ಗುಂಡು ಎಸೆತ, ವೇಗ ನಡಿಗೆ, 100 ಮೀಟರ್ ಹಾಗೂ 200 ಮೀಟರ್ ಓಟಗಳಲ್ಲಿ ಪ್ರಥಮ ಸ್ಥಾನ ಪಡೆದು ಮಿಂಚಿದರು.
ಇದರ ಜೊತೆಗೆ 400 ಮೀಟರ್ ಮತ್ತು 800 ಮೀಟರ್ ಓಟಗಳಲ್ಲಿ ದ್ವಿತೀಯ ಸ್ಥಾನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನಗಳನ್ನು ಪಡೆದು ಗಮನ ಸೆಳೆದರು. ಬಾಲಕರ ವಿಭಾಗದಲ್ಲಿ ಒಟ್ಟಾರೆ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಬಾಲಕರ ಚಾಂಪಿಯನ್ ಪ್ರಶಸ್ತಿ ಕುಮದ್ವತಿ ಕಾಲೇಜಿನ ಪಾಲಾಯಿತು.
ಬಾಲಕಿಯರ ವಿಭಾಗದಲ್ಲೂ ಗಮನಾರ್ಹ ಪ್ರದರ್ಶನ
ಬಾಲಕಿಯರ ವಿಭಾಗದಲ್ಲಿಯೂ ಕುಮದ್ವತಿ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. 4×100 ಮೀಟರ್ ಹಾಗೂ 4×400 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇದಲ್ಲದೆ 200 ಮೀಟರ್, 400 ಮೀಟರ್, 300 ಮೀಟರ್ ಓಟ, 400 ಮೀಟರ್ ಹರ್ಡಲ್ಸ್ ಹಾಗೂ ಹ್ಯಾಮರ್ ಥ್ರೋ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 1500 ಮೀಟರ್ ಮತ್ತು 100 ಮೀಟರ್ ಓಟಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಉದ್ದ ಜಿಗಿತ, ಎತ್ತರ ಜಿಗಿತ ಹಾಗೂ ಜಾವಲಿನ್ ಥ್ರೋ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಬಾಲಕರು ಹಾಗೂ ಬಾಲಕಿಯರು ವಿವಿಧ ಕ್ರೀಡಾ ವಿಭಾಗಗಳಲ್ಲಿ ತೋರಿದ ಸಮಗ್ರ ಸಾಧನೆಯ ಫಲವಾಗಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ತಾಲೂಕು ಮಟ್ಟದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳಿಗೆ ಅಭಿನಂದನೆ
ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಸಾಧನೆಗೆ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಕಾಲೇಜಿನ ಮುಖ್ಯಸ್ಥರು, ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಹಾಗೂ ಪರಿಶ್ರಮವನ್ನು ಶ್ಲಾಘಿಸಿದ ಆಡಳಿತ ಮಂಡಳಿ, ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದೆ.
ಕುಮದ್ವತಿ ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಮತ್ತು ತರಬೇತಿಯ ಫಲವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
Also read>> HDFC ಬ್ಯಾಂಕ್ ಷೇರು ಏರಿಕೆಗೆ ಕಾರಣವೇನು? ಶಶಿಧರ್ ಜಗದೀಶನ್ ನಿರ್ಗಮನದ ಬಳಿಕ ಭಾರೀ ಕುತೂಹಲ
Shikaripura : Kumadvathi PU College Wins Overall Championship Sports Meet
Shikaripura: Students of Kumadvathi Science and Commerce Pre-University College have brought laurels to the institution by delivering an impressive performance at the Shikaripura Taluk-Level Sports Meet for Pre-University Colleges, held on August 27 and 28.
The college won the prestigious Overall Championship, along with the Boys’ Championship and an Individual Overall Best Athlete (Veeragrani) Award.
Outstanding Performance in Boys’ Events
The students of Kumadvathi College secured first place in several events, including Throwball, 4×100m Relay, 4×400m Relay, Shot Put, Race Walking, 100m and 200m races.
They also secured second place in the 400m and 800m races, apart from winning third positions in other events.
Their consistent performance across various disciplines helped Kumadvathi College emerge as the Boys’ Champion at the taluk-level meet.
Impressive Show by Girls
The college’s girl students also put up a strong performance across track and field events.
They secured first place in the 4×100m and 4×400m relays, as well as in the 200m, 400m, 300m, 400m Hurdles and Hammer Throw events.
They won second place in the 1500m and 100m events, while securing third place in Long Jump, High Jump and Javelin Throw.
The combined performance of the boys and girls helped Kumadvathi Science and Commerce PU College clinch the Overall Championship.
Management Congratulates Winners
The college management, principal, teaching faculty and staff congratulated all the students who participated in the sports meet and those who emerged victorious in various events.
They appreciated the students for their dedication, hard work and sporting spirit and wished them success in upcoming district- and state-level competitions.
The achievement is being hailed as a reflection of the college’s continued efforts to encourage students not only in academics but also in sports and extracurricular activities.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






