ಕಲ್ಪ ಮೀಡಿಯಾ ಹೌಸ್ | ಬಾಗೇವಾಡಿ |
ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು (SWR) ಕ್ಯಾಸಲ್ ರಾಕ್–ಮೀರಜ್–ಕ್ಯಾಸಲ್ ರಾಕ್ ಕಾಯ್ದಿರಿಸದ ಎಕ್ಸ್ಪ್ರೆಸ್ ಜೋಡಿ ರೈಲುಗಳಿಗೆ ಬಾಗೇವಾಡಿ (BGWD) ರೈಲು ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ತಾತ್ಕಾಲಿಕ ನಿಲುಗಡೆಗೆ ಅವಕಾಶ ಕಲ್ಪಿಸಿದೆ.
ನಿತ್ಯ ಸಂಚರಿಸುವ ರೈಲು ಸಂಖ್ಯೆ 17334/17333ಗಳಿಗೆ ಈ ನಿಲುಗಡೆ ಸೌಲಭ್ಯವನ್ನು ಒದಗಿಸಲಾಗಿದ್ದು, ಬಾಗೇವಾಡಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ರೈಲು ಸಂಖ್ಯೆ 17334: ಕ್ಯಾಸಲ್ ರಾಕ್–ಮೀರಜ್ ಎಕ್ಸ್ಪ್ರೆಸ್
ರೈಲು ಸಂಖ್ಯೆ 17334 ಕ್ಯಾಸಲ್ ರಾಕ್–ಮೀರಜ್ ಎಕ್ಸ್ಪ್ರೆಸ್ ಬಾಗೇವಾಡಿ ರೈಲು ನಿಲ್ದಾಣಕ್ಕೆ ರಾತ್ರಿ 10:04 ಗಂಟೆಗೆ ಆಗಮಿಸಿ, 10:05 ಗಂಟೆಗೆ ನಿರ್ಗಮಿಸಲಿದೆ.
Also read>> ಚಲಿಸುತ್ತಿದ್ದ ಸ್ಲೀಪರ್ ಬಸ್ನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ | ಇಬ್ಬರು ಅರೆಸ್ಟ್
ರೈಲು ಸಂಖ್ಯೆ 17333: ಮೀರಜ್–ಕ್ಯಾಸಲ್ ರಾಕ್ ಎಕ್ಸ್ಪ್ರೆಸ್
ಇದೇ ರೀತಿ, ರೈಲು ಸಂಖ್ಯೆ 17333 ಮೀರಜ್–ಕ್ಯಾಸಲ್ ರಾಕ್ ಎಕ್ಸ್ಪ್ರೆಸ್ ಬಾಗೇವಾಡಿ ನಿಲ್ದಾಣಕ್ಕೆ ಮಧ್ಯಾಹ್ನ 1:18 ಗಂಟೆಗೆ ಆಗಮಿಸಿ, 1:19 ಗಂಟೆಗೆ ನಿರ್ಗಮಿಸಲಿದೆ.
SWR : ಆರು ತಿಂಗಳ ಕಾಲ ಪ್ರಾಯೋಗಿಕ ನಿಲುಗಡೆ
ಈ ತಾತ್ಕಾಲಿಕ ನಿಲುಗಡೆ ಸೆಪ್ಟೆಂಬರ್ 1, 2026ರಿಂದ ಫೆಬ್ರವರಿ 28, 2027ರವರೆಗೆ ಒಟ್ಟು ಆರು ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ.
ಪ್ರಯಾಣಿಕರ ಬೇಡಿಕೆ ಹಾಗೂ ನಿಲುಗಡೆಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಾಯೋಗಿಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಾಗೇವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಮೀರಜ್, ಕ್ಯಾಸಲ್ ರಾಕ್ ಸೇರಿದಂತೆ ಮಾರ್ಗಮಧ್ಯದ ವಿವಿಧ ಸ್ಥಳಗಳಿಗೆ ಸಂಚರಿಸಲು ಈ ನಿಲುಗಡೆ ಅನುಕೂಲವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








