ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಾಗೂ ಛತ್ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ (SWR) ನೈಋತ್ಯ ರೈಲ್ವೆಯು (Hubballi) ಹುಬ್ಬಳ್ಳಿ–ಚಿಕ್ಕಮಗಳೂರು (Chikkamagaluru) ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಅನುಮೋದನೆ ನೀಡಿದೆ.
ರೈಲು ಸಂಖ್ಯೆ 07341/07342 ಎಸ್ಎಸ್ಎಸ್ ಹುಬ್ಬಳ್ಳಿ–ಚಿಕ್ಕಮಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಳು ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31, 2026ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿವೆ.
SWR : ಹುಬ್ಬಳ್ಳಿಯಿಂದ ಚಿಕ್ಕಮಗಳೂರಿಗೆ
ರೈಲು ಸಂಖ್ಯೆ 07341 ಎಸ್ಎಸ್ಎಸ್ ಹುಬ್ಬಳ್ಳಿ–ಚಿಕ್ಕಮಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 5 ಗಂಟೆಗೆ ಹೊರಟು, ಅದೇ ದಿನ 11.15 ಗಂಟೆಗೆ ಚಿಕ್ಕಮಗಳೂರು ತಲುಪಲಿದೆ.
ಮಾರ್ಗಮಧ್ಯೆ ರೈಲು ಕುಂದಗೋಳ, ಸಂಶಿ, ಯಲವಿಗಿ, ಎಸ್ಎಂಎಂ ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ರಾಮಗಿರಿ, ಅಜ್ಜಂಪುರ, ಬೀರೂರು, ಕಡೂರು, ಬಿಸ್ಲೆಹಳ್ಳಿ, ಸಖರಾಯಪಟ್ಟಣ ಹಾಗೂ ಕಣಿವೆಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ಪ್ರಮುಖ ನಿಲ್ದಾಣಗಳ ಆಗಮನ–ನಿರ್ಗಮನ ಸಮಯ ಹೀಗಿದೆ:
- ಕುಂದಗೋಳ: 05:13/05:14
- ಸಂಶಿ: 05:23/05:24
- ಯಲವಿಗಿ: 05:52/05:53
- ಎಸ್ಎಂಎಂ ಹಾವೇರಿ: 06:40/06:42
- ಬ್ಯಾಡಗಿ: 06:51/06:52
- ರಾಣಿಬೆನ್ನೂರು: 07:18/07:20
- ಹರಿಹರ: 07:45/07:55
- ದಾವಣಗೆರೆ: 08:10/08:12
- ಚಿಕ್ಕಜಾಜೂರು: 08:50/08:52
- ರಾಮಗಿರಿ: 09:08/09:10
- ಅಜ್ಜಂಪುರ: 09:35/09:37
- ಬೀರೂರು: 09:53/09:55
- ಕಡೂರು: 10:05/10:07
- ಬಿಸ್ಲೆಹಳ್ಳಿ: 10:16/10:17
- ಸಖರಾಯಪಟ್ಟಣ: 10:27/10:28
- ಕಣಿವೆಹಳ್ಳಿ: 10:42/10:43
- ಚಿಕ್ಕಮಗಳೂರು: 11:15
- ಚಿಕ್ಕಮಗಳೂರಿನಿಂದ ಹುಬ್ಬಳ್ಳಿಗೆ

ಹಿಂತಿರುಗುವ ಮಾರ್ಗದಲ್ಲಿ ರೈಲು ಸಂಖ್ಯೆ 07342 ಚಿಕ್ಕಮಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು ಕೂಡ ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿದೆ.
ಈ ರೈಲು ಚಿಕ್ಕಮಗಳೂರಿನಿಂದ ಸಂಜೆ 5.30ಕ್ಕೆ ಹೊರಟು, ಅದೇ ದಿನ ರಾತ್ರಿ 11.20ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ತಲುಪಲಿದೆ.
Also read>> ನೀರಿನ ಶುದ್ಧತೆ ಕಾಪಾಡುವುದು ಧರ್ಮದ ಕರ್ತವ್ಯ: ರಾಘವೇಶ್ವರ ಸ್ವಾಮೀಜಿ
ಹಿಂತಿರುಗುವಾಗ ರೈಲು ಕಣಿವೆಹಳ್ಳಿ, ಸಖರಾಯಪಟ್ಟಣ, ಬಿಸ್ಲೆಹಳ್ಳಿ, ಕಡೂರು, ಬೀರೂರು, ಅಜ್ಜಂಪುರ, ರಾಮಗಿರಿ, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಎಸ್ಎಂಎಂ ಹಾವೇರಿ, ಯಲವಿಗಿ, ಸಂಶಿ ಹಾಗೂ ಕುಂದಗೋಳ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ಪ್ರಮುಖ ನಿಲ್ದಾಣಗಳ ಸಮಯ:
- ಕಣಿವೆಹಳ್ಳಿ: 17:43/17:45
- ಸಖರಾಯಪಟ್ಟಣ: 18:04/18:05
- ಬಿಸ್ಲೆಹಳ್ಳಿ: 18:16/18:18
- ಕಡೂರು: 18:28/18:30
- ಬೀರೂರು: 18:40/18:42
- ಅಜ್ಜಂಪುರ: 18:56/18:57
- ರಾಮಗಿರಿ: 19:21/19:23
- ಚಿಕ್ಕಜಾಜೂರು: 19:45/19:47
- ದಾವಣಗೆರೆ: 20:23/20:25
- ಹರಿಹರ: 20:35/20:45
- ರಾಣಿಬೆನ್ನೂರು: 21:06/21:08
- ಬ್ಯಾಡಗಿ: 21:21/21:22
- ಎಸ್ಎಂಎಂ ಹಾವೇರಿ: 21:36/21:38
- ಯಲವಿಗಿ: 22:10/22:12
- ಸಂಶಿ: 22:34/22:35
- ಕುಂದಗೋಳ: 22:44/22:45
- ಎಸ್ಎಸ್ಎಸ್ ಹುಬ್ಬಳ್ಳಿ: 23:20
10 ಬೋಗಿಗಳ ವಿಶೇಷ ರೈಲು
ಈ ವಿಶೇಷ ರೈಲು ಒಟ್ಟು 10 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 1 ಸ್ಲೀಪರ್ ಕ್ಲಾಸ್ ಬೋಗಿ, 7 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಲಗೇಜ್-ಕಮ್-ಬ್ರೇಕ್ ವ್ಯಾನ್/ದಿವ್ಯಾಂಗಜನ ಬೋಗಿಗಳು ಇರಲಿವೆ.
ಹಬ್ಬದ ಸಂದರ್ಭದಲ್ಲಿ ಹೆಚ್ಚಾಗುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲು ಸೇವೆ ಕಲ್ಪಿಸಲಾಗಿದ್ದು, ಹುಬ್ಬಳ್ಳಿ–ಚಿಕ್ಕಮಗಳೂರು ಮಾರ್ಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








