ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
(Bhadravathi) ನಗರದ ಜೆ.ಪಿ.ಎಸ್.ಕಾಲೋನಿಯ 10/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಂದು ಶುಕ್ರವಾರ ಭದ್ರಾವತಿ ನಗರದ ಹಾಗೂ ಗ್ರಾಮೀಣ ಭಾಗದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ (Power Cut) ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ (MESCOM) ಪ್ರಕಟಣೆ ತಿಳಿಸಿದೆ.
ಸ್ಕಾಂ ಪ್ರಕಟಣೆಯ ಪ್ರಕಾರ, ಚಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿಯನ್ನು ಸುರಕ್ಷಿಡವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸುವಂಡ ಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.
Bhadravathi : ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ನಗರ ಉಪವಿಭಾಗ ವ್ಯಾಪ್ತಿಯ ನ್ಯೂಟೌನ್, ನ್ಯೂಕಾಲೋನಿ, ವಿದ್ಯಾಮಂದಿರ, ಅಂಜನೇಯ ಅಗ್ರಹಾರ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಅಸಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಕ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸ ಸಿದ್ದಾಪುರ, ಸಂಪಿಗಳಟ್ಟೆ ಬಡಾವಣೆ, ಎನ್.ಟಿ.ಬಿ. ಬಡಾವಣೆ, ಸರ್.ಎಂ.ವಿ. ಬಡಾವಣೆ ಹಾಗೂ ಹಳಸಿದ್ದಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
ಇದರೊಂದಿಗೆ ಹೊಸೂರು, ತಾಂಡ್ಯ, ಸಂಗೀಪುರ, ಹುತ್ತಾ ಕಾಲೋನಿ, ಐ.ಟಿ.ಐ., ಜಿನ್ನಾಪುರ, ಬಿ.ಹೆಚ್. ರಸ್ತೆ, ಅಪ್ಪರ್ ಹುತ್ತಾ, ಲೋಯರ್ ಮುತ್ತಾ, ಜೆಂಕ್ ಲೈಸ್, ಪರೀಕರ ರಸ್ತೆ, ಸಾದತ್ ಕಾಲೋನಿ, ನಹರು ನಗರ, ಸುಣ್ಣದಹಳ್ಳಿ, ಬಸವನಗುಡಿ ಹಾಗೂ ಶಿವನಿ ವೃತ್ತ ವ್ಯಾಪ್ತಿಯಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗ್ರಾಮೀಣ ಭಾಗದಲ್ಲೂ ವಿದ್ಯುತ್ ವ್ಯತ್ಯಯ
ಗ್ರಾಮೀಣ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಹಲವು ಪ್ರದೇಶಗಳಲ್ಲಿಯೂ ದುರಸ್ತಿ ಕಾಮಗಾರಿಯ ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
Also Read>> ನಿಫಾಡ್ ಪಂಚಾಯತ್ಗೆ ಶಾಕ್! ಕಚೇರಿ ಟೇಬಲ್ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಜನ
ಹಿರಿಯೂರು, ಹೊಸ ನಂಚಾಪುರ, ಸಿದ್ದರಹಳ್ಳಿ, ಗೊಂದಿ, ತಾರೀಕಟ್ಟೆ, ಬೆಳೆಕಿ, ಬಿಳಿಕಿ ತಾಂಡ, ಹೂಳ ಗಂಗೂರು, ಲಕ್ಷ್ಮಿಸಾಗರ (ರಬ್ಬರ್ ಕಾಡು), ಸುಲ್ತಾನಹುಟ್ಟಿ, ಕಾರೇಹಳ್ಳಿ, ಬಾಳಮಾರನಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ, ಕಾಳನಕಟ್ಟೆ, ಹೊಳನೇರಳೇಕರ, ಅಂತರಗಂಗ, ದೂಣಲಘಟ್ಟ, ತಡಸ, ಚಿಕ್ಕಗೊಳ್ಳೇನಹಳ್ಳಿ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕರ, ದೂಡ್ಕರಿ, ಮಜ್ಜೆಗೇನಹಳ್ಳಿ, ಪದ್ಮನಹಳ್ಳಿ ಹಾಗೂ ಲಕ್ಷ್ಮಿಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
ಅದೇ ರೀತಿ ಕಂಪೇಗೌಡನಗರ, ಬೊಮ್ಮನಹಳ್ಳಿ, ಕುಂಬಾರಗುಂಡಿ, ಭದ್ರಾ ಶೇಪರ್ ಮಿಲ್, ಹಳೇ ಬಾರಂದೂರು, ಕುಡಿಯುವ ನೀರು ಘಟಕ, ಹಳ್ಳಿಕರ, ಅಡ್ವಾಣಿ ಬಡಾವಣೆ, ಉಕ್ಕುಂದ, ರತ್ನಾಪುರ, ಕಂಚೇನಳ್ಳಿ, ಗಂಗೂರು, ಬಿಸಿಲುಳುನ, ದೇವನರಸೀಪುರ, ಶಿವಪುರ, ಅಡ್ಡಘಟ್ಟ ಹಾಗೂ ಅರಳಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








