ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಮೋಹ ನೃತ್ಯ ಸಂಸ್ಥೆಯ (Tamoh dance institutes) ದಶಮಾನೋತ್ಸವ ಸಮಾರಂಭವನ್ನು ಅಕ್ಟೋಬರ್ 2ರಂದು ಸಂಜೆ 4.30ಕ್ಕೆ ಬೆಂಗಳೂರು (Bangaluru) ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ದಶಮಾನೋತ್ಸವದ ಅಂಗವಾಗಿ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಖ್ಯಾತ ಜಾನಪದ ಗಾಯಕ ಡಾ. ಜೋಗಿಲ ಸಿದ್ಧರಾಜು ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ ವಿದುಷಿ ಉಷಾ ಬಸಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Tamoh dance institutes: ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ
ಕಾರ್ಯಕ್ರಮದ ಆರಂಭದಲ್ಲಿ ತಮೋಹ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಕು. ಆದ್ಯ ಮಯ್ಯಾ ಕಾರ್ಯಕ್ರಮದ ಸೂತ್ರಧಾರಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಪ್ರಸಿದ್ಧ ಹರಿದಾಸರ ಕೀರ್ತನೆಗಳಿಗೆ ನೃತ್ಯ ಪ್ರದರ್ಶನ ನೀಡಲಿದ್ದಾರೆ.
‘ಮೋಹಿನಿ-ಭಸ್ಮಾಸುರ’ ನೃತ್ಯ ರೂಪಕ
ದಶಮಾನೋತ್ಸವದ ಪ್ರಮುಖ ಆಕರ್ಷಣೆಯಾಗಿ ನೃತ್ಯ ಸಹೋದರಿಯರಾದ ವಿದುಷಿ ಗಾಯತ್ರಿ ಮಯ್ಯ ಹಾಗೂ ವಿದುಷಿ ಪವಿತ್ರಾ ಪ್ರಶಾಂತ್ ಅವರಿಂದ ‘ಮೋಹಿನಿ-ಭಸ್ಮಾಸುರ’ ವಿಶೇಷ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ಭಾರತೀಯ ಪೌರಾಣಿಕ ಕಥಾನಕವನ್ನು ನೃತ್ಯ, ಅಭಿನಯ ಹಾಗೂ ಸಂಗೀತದ ಮೂಲಕ ಪ್ರೇಕ್ಷಕರ ಮುಂದಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
Also Read>> 11 ದಿನ MEMU ರೈಲು ಸಂಚಾರದಲ್ಲಿ ಬದಲಾವಣೆ, 3 ರೈಲುಗಳು 45 ನಿಮಿಷ ನಿಯಂತ್ರಣ
ತಮೋಹ ನೃತ್ಯ ಸಂಸ್ಥೆ ಹತ್ತು ವರ್ಷಗಳ ಕಲಾ ಪಯಣವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಸಂಸ್ಥೆಯ ನಿರ್ದೇಶಕಿ ವಿದುಷಿ ಗಾಯತ್ರಿ ಮಯ್ಯ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











