ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು (SWR-Bengaluru) ವಿಭಾಗದ ಪೆನುಕೊಂಡ–ನಾಗಸಮುದ್ರಂ–ಧರ್ಮಾವರಂ ವಿಭಾಗದಲ್ಲಿ ನಡೆಯುತ್ತಿರುವ ಹಳಿ ದ್ವಿಗುಣೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ 2026ರ ಅಕ್ಟೋಬರ್ 16ರಿಂದ 10 ರೈಲುಗಳ ಮಾರ್ಗವನ್ನು (Trains Route Diversion) ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.
ಈ ರೈಲುಗಳು ಈ ಹಿಂದೆ ಪೆನುಕೊಂಡ–ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ–ಧರ್ಮಾವರಂ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಇದೀಗ ಬದಲಾದ ವೇಳಾಪಟ್ಟಿಯಂತೆ ಪೆನುಕೊಂಡ–ನಾಗಸಮುದ್ರಂ–ಧರ್ಮಾವರಂ ಮಾರ್ಗವಾಗಿ ಸಂಚರಿಸಲಿವೆ.

SWR-Bengaluru: ಮಾರ್ಗ ಬದಲಾದ ರೈಲುಗಳ ಪಟ್ಟಿ
– 22884 – ಯಶವಂತಪುರ–ಪುರಿ ಸಾಪ್ತಾಹಿಕ ಗರೀಬ್ ರಥ್ ಎಕ್ಸ್ಪ್ರೆಸ್
– 22683 – ಯಶವಂತಪುರ–ಲಖನೌ ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್
– 12251 – ಯಶವಂತಪುರ–ಕೋರ್ಬಾ ದ್ವಿಸಾಪ್ತಾಹಿಕ ವೈಗೈ ಸೂಪರ್ಫಾಸ್ಟ್ ಎಕ್ಸ್ಪ್ರೆಸ್
– 15024 – ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್ಪ್ರೆಸ್
– 12647 – ಕೊಯಮತ್ತೂರು–ಹಜರತ್ ನಿಜಾಮುದ್ದೀನ್ ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್
– 16577 – ಯಶವಂತಪುರ–ಬೀದರ್ ಸಾಪ್ತಾಹಿಕ ಎಕ್ಸ್ಪ್ರೆಸ್
– 16578 – ಬೀದರ್–ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್
– 11086 – ಗ್ವಾಲಿಯರ್–ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್
– 16531 – ಅಜ್ಮೇರ್–ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್
– 16533 – ಜೋಧಪುರ–ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್

ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ
ಮಾರ್ಗ ಬದಲಾವಣೆಯಿಂದ ಮೇಲಿನ ರೈಲುಗಳ ಯಾವುದೇ ನಿಲುಗಡೆಯನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ. ಮಾರ್ಗ ಬದಲಾವಣೆಯಿದ್ದರೂ ರೈಲುಗಳಿಗೆ ಈಗಾಗಲೇ ನಿಗದಿಯಾಗಿರುವ ನಿಲುಗಡೆಗಳು ಮುಂದುವರಿಯಲಿವೆ.
Also Read>> ಶಿವಮೊಗ್ಗ| ಜೆ.ಎನ್.ಎನ್.ಸಿ.ಇಯಲ್ಲಿ ಸಂಪ್ರದಾಯದ ಸೊಬಗಿನಲ್ಲಿ ‘ಎಂಸಿಎ ದಸರಾ’ ಸಂಭ್ರಮ
ಪ್ರಯಾಣಿಕರಿಗೆ ಸೂಚನೆ
ದಸರಾ ಹಾಗೂ ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲುಗಳಲ್ಲಿ ಸಂಚರಿಸುವ ಸಾಧ್ಯತೆಯಿದೆ. ಹೀಗಾಗಿ ಪ್ರಯಾಣಿಕರು ತಮ್ಮ ರೈಲಿನ ಸಂಚಾರ ದಿನಾಂಕ, ವೇಳಾಪಟ್ಟಿ ಹಾಗೂ ಇತ್ತೀಚಿನ ಪ್ರಯಾಣ ಮಾಹಿತಿಯನ್ನು ಪರಿಶೀಲಿಸಿಕೊಂಡು ಪ್ರಯಾಣಿಸುವಂತೆ ಸೂಚಿಸಲಾಗಿದೆ.
ಹಳಿ ದ್ವಿಗುಣೀಕರಣ ಕಾಮಗಾರಿಯಿಂದ ರೈಲುಗಳ ಸಂಚಾರದಲ್ಲಿ ಉಂಟಾಗಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು ಸೂಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











