No Result
View All Result
Bharatanatyam Of Sukti Performance Sampattu Grace Rhythm copy
English Articles

Grace and Rhythm Mark Sukthi’s Bharatanatyam Performance at Sampattu

by kalpa News
October 19, 2026
0

Kalpa Media House  |  Special Article By Rasikapriya  | Sukthi T.R., a promising young Bharatanatyam dancer, captivated the audience with...

Read moreDetails
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
  • Advertise With Us
  • Grievances
  • About Us
  • Contact Us
Thursday, October 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಚಿತ್ರದುರ್ಗ

ಭರಮಸಾಗರ : 125 ವರ್ಷಗಳ ಪುರಾತನ ಶಮೀವೃಕ್ಷಕ್ಕೆ ಪೂಜೆ | ಸಾಕ್ಷಿಯಾದ ಗ್ರಾಮಸ್ಥರು

ಭರಮಸಾಗರ ವಿಪ್ರ ಸಮಾಜದಿಂದ ವಿಜಯದಶಮಿ ಆಚರಣೆ

kalpa News by kalpa News
October 22, 2026
in ಚಿತ್ರದುರ್ಗ
0
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಭರಮಸಾಗರ  |  ವರದಿ : ಮುರುಳೀಧರ್ ನಾಡಿಗೇರ್

ಚಿತ್ರದುರ್ಗ (Chitradurga) ಜಿಲ್ಲೆಯ ಭರಮಸಾಗರ (Bharamasagara) ಗ್ರಾಮದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ವಿಪ್ರ ಸಮಾಜದ ಸದಸ್ಯರು ಒಟ್ಟಾಗಿ ಸೇರಿ ವಿಜಯದಶಮಿ (Vijayadashami) ಆಚರಿಸಿದರು. ಈ ಸಂದರ್ಭದಲ್ಲಿ ಸುಮಾರು 125 ವರ್ಷಗಳ ಇತಿಹಾಸ ಹೊಂದಿರುವ ಪುರಾತನ (Shami Tree) ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ, ಬನ್ನಿ ಮುಡಿಯುವ ಸಂಪ್ರದಾಯವನ್ನು ಮುಂದುವರಿಸಿದರು.

ನವರಾತ್ರಿ ಉತ್ಸವದಲ್ಲಿ ದೇವಿಯ ವಿವಿಧ ರೂಪಗಳಿಗೆ ಪೂಜೆ ಸಲ್ಲಿಸುವುದು ವಿಶೇಷ. ಇದರೊಂದಿಗೆ ವಿಜಯದಶಮಿ ಹಾಗೂ ಶಮೀವೃಕ್ಷದ ಆರಾಧನೆಗೂ ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಮಹತ್ವದ ಸ್ಥಾನವಿದೆ. ವಿಜಯದ ಸಂಕೇತವಾಗಿ ಶಮಿ (ಬನ್ನಿ) ವೃಕ್ಷವನ್ನು ಪೂಜಿಸಿ, ಬನ್ನಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪದ್ಧತಿ ಹಲವು ಪ್ರದೇಶಗಳಲ್ಲಿ ಇಂದಿಗೂ ಆಚರಣೆಯಲ್ಲಿದೆ.

ಪುರಾಣಗಳಲ್ಲಿ ಶಮೀವೃಕ್ಷದ ಮಹತ್ವ

ಪುರಾಣಗಳಲ್ಲಿ ಶಮೀವೃಕ್ಷದ ಮಹಿಮೆಯನ್ನು ಸಾರುವ ಹಲವು ಕಥೆಗಳಿವೆ. ಅವುಗಳಲ್ಲಿ ಶಮೀಕಾ ಮತ್ತು ಮಂದಾರ ದಂಪತಿಗೆ ಸಂಬಂಧಿಸಿದ ಕಥೆಯೂ ಒಂದು. ಭೃಶುಂಡಿ ಮುನಿಯ ಶಾಪದಿಂದ ಶಮೀಕಾ ಶಮೀವೃಕ್ಷವಾಗಿ ಹಾಗೂ ಮಂದಾರನು ಮಂದಾರ ವೃಕ್ಷವಾಗಿ ಪರಿವರ್ತನೆಯಾಗುತ್ತಾರೆ ಎಂಬ ಪೌರಾಣಿಕ ಕಥೆ ಪ್ರಸಿದ್ಧವಾಗಿದೆ. ಗಣಪತಿಯ ಅನುಗ್ರಹದಿಂದ ಶಾಪ ವಿಮೋಚನೆ ದೊರೆಯುತ್ತದೆ ಎಂಬ ನಂಬಿಕೆಯೂ ಈ ಕಥೆಯಲ್ಲಿದೆ.

https://kalpa.news/wp-content/uploads/2026/10/DKS_Dasara-1min-TV-Ad-.mp4

ಬನ್ನಿಯನ್ನು ಬಂಗಾರವೆಂದು ಕರೆಯುವುದೇಕೆ?

ಬನ್ನಿ ಪತ್ರೆಯನ್ನು ಬಂಗಾರಕ್ಕೆ ಹೋಲಿಸುವುದರ ಹಿಂದೆ ಕೌಸ್ತ ಮತ್ತು ರಘುರಾಜನಿಗೆ ಸಂಬಂಧಿಸಿದ ಪೌರಾಣಿಕ ಕಥೆಯಿದೆ. ಗುರುದಕ್ಷಿಣೆ ಸಲ್ಲಿಸಲು ಅಪಾರ ಪ್ರಮಾಣದ ಚಿನ್ನದ ನಾಣ್ಯಗಳ ಅಗತ್ಯವಿದ್ದ ಕೌಸ್ತನು ರಘುರಾಜನ ನೆರವು ಕೋರುತ್ತಾನೆ. ರಾಜನು ಕುಬೇರನನ್ನು ಪ್ರಾರ್ಥಿಸಿದಾಗ ಶಮೀವೃಕ್ಷದ ಎಲೆಗಳು ಚಿನ್ನದ ನಾಣ್ಯಗಳಾಗಿ ಪರಿವರ್ತನೆಯಾದವು ಎಂಬ ಪ್ರತೀತಿ ಇದೆ. ಆ ನಾಣ್ಯಗಳನ್ನು ಗುರುದಕ್ಷಿಣೆಗೆ ಬಳಸಿದ ಬಳಿಕ ಉಳಿದವುಗಳನ್ನು ದಾನ ಮಾಡಲಾಯಿತು ಎನ್ನಲಾಗುತ್ತದೆ. ಈ ಹಿನ್ನೆಲೆಯಿಂದ ಶಮೀವೃಕ್ಷದ ಎಲೆಗಳನ್ನು ಬಂಗಾರಕ್ಕೆ ಸಮಾನವಾಗಿ ಪರಿಗಣಿಸುವ ಸಂಪ್ರದಾಯ ಬೆಳೆದುಬಂದಿದೆ.

ಶಮೀವೃಕ್ಷವು ಧಾರ್ಮಿಕ ಮಹತ್ವದ ಜೊತೆಗೆ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿಯೂ ಬಳಕೆಯಲ್ಲಿದೆ. ಇದರ ತೊಗಟೆ ಮತ್ತು ಇತರ ಭಾಗಗಳನ್ನು ಕೆಲವು ಪಾರಂಪರಿಕ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಅಲ್ಲದೆ, ಕೃಷಿ ಹಾಗೂ ಪರಿಸರದ ದೃಷ್ಟಿಯಿಂದಲೂ ಈ ಮರಕ್ಕೆ ಮಹತ್ವವಿದೆ.

Chitradurga : ತಲೆಮಾರುಗಳಿಂದ ಮುಂದುವರಿದ ಸಂಪ್ರದಾಯ

ಭರಮಸಾಗರದ ಶ್ರೀ ಆಂಜನೇಯ ದೇವಸ್ಥಾನವು ಸುಮಾರು 110 ವರ್ಷಗಳ ಇತಿಹಾಸ ಹೊಂದಿದ್ದು, ಹಿಂದಿನಿಂದಲೂ ಗ್ರಾಮದ ವಿಪ್ರ ಸಮಾಜದ ಸದಸ್ಯರು ಹಾಗೂ ಮಹಿಳೆಯರು ಒಟ್ಟಾಗಿ ಸೇರಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ.

ಒಂದು ಕಾಲದಲ್ಲಿ ಸುಮಾರು 50ಕ್ಕೂ ಹೆಚ್ಚು ವಿಪ್ರ ಕುಟುಂಬಗಳಿದ್ದ ಈ ಗ್ರಾಮದಲ್ಲಿ ವಿವಿಧ ಹಬ್ಬಗಳನ್ನು ಸಮುದಾಯದವರೆಲ್ಲರೂ ಒಟ್ಟಾಗಿ ಆಚರಿಸುತ್ತಿದ್ದರು. ಕಾಲಕ್ರಮೇಣ ಉದ್ಯೋಗ ಹಾಗೂ ಜೀವನೋಪಾಯದ ನಿಮಿತ್ತ ಅನೇಕ ಕುಟುಂಬಗಳು ದೇಶ-ವಿದೇಶಗಳ ವಿವಿಧ ಪ್ರದೇಶಗಳಿಗೆ ತೆರಳಿವೆ. ಆದರೂ, ಶ್ರೀ ಆಂಜನೇಯ ಸ್ವಾಮಿ ಮತ್ತು ಗ್ರಾಮದೇವತೆ ಶ್ರೀ ದುರ್ಗಾಂಬಿಕೆಯ ಆಶೀರ್ವಾದದೊಂದಿಗೆ ತಮ್ಮ ಸಂಪ್ರದಾಯಗಳನ್ನು ಮರೆಯದೆ ಮುಂದುವರಿಸುವ ಪ್ರಯತ್ನವನ್ನು ಗ್ರಾಮದ ಹಿರಿಯರು ಮಾಡುತ್ತಿದ್ದಾರೆ.Christ King

ಪ್ರಸ್ತುತ 5–6 ವಿಪ್ರ ಕುಟುಂಬಗಳ ಹಿರಿಯರು ಹಿಂದಿನಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಗಳನ್ನು ಇಂದಿಗೂ ಬಿಡದೆ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂಬುದು ವಿಶೇಷ.

ಹಬ್ಬದ ಮರುದಿನ ದನಿಷ್ಠಾ ನಕ್ಷತ್ರದ ಹಿನ್ನೆಲೆಯಲ್ಲಿ ಹಿರಿಯರ ಮಾರ್ಗದರ್ಶನದಂತೆ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ, ಮೊಸರನ್ನವನ್ನು ನೈವೇದ್ಯವಾಗಿ ಅರ್ಪಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸುವ ಸಂಪ್ರದಾಯವೂ ಇದೆ. ಈ ವರ್ಷ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಕೆಲವು ಅಡಚಣೆಗಳು ಎದುರಾದರೂ, ಶಮೀವೃಕ್ಷದ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ.

ಸಂಪ್ರದಾಯ ಉಳಿಸುವಲ್ಲಿ ಹಿರಿಯರ ಪಾತ್ರ

ಈ ವರ್ಷದ ವಿಜಯದಶಮಿ ಆಚರಣೆಯಲ್ಲಿ ಗ್ರಾಮದ ಕುಟುಂಬಗಳ ಮುಖ್ಯಸ್ಥರಾದ ಮಲ್ಲಾರಿರಾವ್, ನಾಗಭೂಷಣರಾವ್, ಅನಂತಪದ್ಮನಾಭರಾವ್,  ಶೇಷಗಿರಿರಾವ್, ಶ್ರೀಪಾದ ಭಟ್ಟ ಸೇರಿದಂತೆ ಆನಂದ, ವಿಜಯಕುಮಾರ್, ಚಂದ್ರಶೇಖರ್, ಮುರುಳೀಧರ್, ವಿನಾಯಕ, ವಿಕ್ರಂ ಹಾಗೂ ಅವರ ಕುಟುಂಬದವರು ಭಾಗವಹಿಸಿ ಪೂಜೆ ಸಲ್ಲಿಸಿದರು.

ಆಧುನಿಕ ಜೀವನದ ಒತ್ತಡಗಳ ನಡುವೆಯೂ ಹಳ್ಳಿಗಳಲ್ಲಿ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಇಂತಹ ಆಚರಣೆಗಳು ಧಾರ್ಮಿಕ ನಂಬಿಕೆ, ಕುಟುಂಬದ ಒಗ್ಗಟ್ಟು ಹಾಗೂ ಸಾಮಾಜಿಕ ಸಾಮರಸ್ಯವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭರಮಸಾಗರದ ವಿಪ್ರ ಸಮಾಜವು ಪುರಾತನ ಶಮೀವೃಕ್ಷದ ಆರಾಧನೆಯ ಮೂಲಕ ತನ್ನ ಸಾಂಪ್ರದಾಯಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುತ್ತಿರುವುದು ಗಮನಾರ್ಹವಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

PES Shivamogga

Kalpa News Advertising Disclaimer

Tags: BharamasagaraChitradurgaಚಿತ್ರದುರ್ಗನವರಾತ್ರಿಭರಮಸಾಗರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿ | ಮಧ್ವ ಜಯಂತಿ ಆಚರಣೆ: ಭಕ್ತಿಭಾವದಿಂದ ನಡೆದ ಪಲ್ಲಕ್ಕಿ ಮೆರವಣಿಗೆ

kalpa News

kalpa News

No Result
View All Result
Bharatanatyam Of Sukti Performance Sampattu Grace Rhythm copy
English Articles

Grace and Rhythm Mark Sukthi’s Bharatanatyam Performance at Sampattu

by kalpa News
October 19, 2026
0

Kalpa Media House  |  Special Article By Rasikapriya  | Sukthi T.R., a promising young Bharatanatyam dancer, captivated the audience with...

Read moreDetails
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL