ಕಲ್ಪ ಮೀಡಿಯಾ ಹೌಸ್ | ಸಾಗರ (ಶಿವಮೊಗ್ಗ) |
ಸಾಗರ (Sagara) ತಾಲೂಕಿನ ಹೊಸಗುಂದದ (Hosagunda) ಸಂಕಲ್ಪಸಿದ್ಧಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 6ರ ಭಾನುವಾರ ಹೊಸಗುಂದ ಉತ್ಸವ ಹಾಗೂ ವೈಭವದ ಲಕ್ಷದೀಪೋತ್ಸವವನ್ನು ಆಯೋಜಿಸಲಾಗಿದೆ.
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರಕೃತಿ, ಸಂಸ್ಕೃತಿ ಮತ್ತು ಭಕ್ತಿಯ ಸಂಗಮ
ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಅಮೃತಹಸ್ತದಿಂದ ಪ್ರತಿಷ್ಠಾಪನೆಗೊಂಡಿರುವ ಈ ದೇವಾಲಯವು ಪ್ರಕೃತಿ, ಸಂಸ್ಕೃತಿ ಹಾಗೂ ಭಕ್ತಿಯ ಸಂಗಮವಾಗಿದೆ.
ಕಲ್ಯಾಣ ಚಾಲುಕ್ಯರ ವಾಸ್ತುಶೈಲಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ದೇವಸ್ಥಾನದಲ್ಲಿ ಮಹಿಷಮರ್ದಿನಿ, ವೀರಭದ್ರ, ಗಣಪತಿ, ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಪರಿವಾರ ದೇವರುಗಳ ಸನ್ನಿಧಿಗಳಿವೆ. ದ್ರಾವಿಡ ಶೈಲಿಯ ಲಕ್ಷ್ಮೀಗಣಪತಿ ಹಾಗೂ ಕೇರಳ ಶೈಲಿಯ ಕಂಚಿಕಾಳಮ್ಮ ದೇವಿಯ ಸನ್ನಿಧಾನವೂ ದೇವಸ್ಥಾನದ ವಿಶೇಷ ಆಕರ್ಷಣೆಯಾಗಿವೆ.
Hosagunda: ಲಕ್ಷದೀಪೋತ್ಸವದ ಅಂಗವಾಗಿ ವಿವಿಧ ಸೇವೆಗಳು
ಲಕ್ಷದೀಪೋತ್ಸವದ ಅಂಗವಾಗಿ ಭಕ್ತರು ವಿವಿಧ ದೀಪ ಸೇವೆ ಹಾಗೂ ಧಾರ್ಮಿಕ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೇವೆಗಳ ವಿವರ ಹೀಗಿದೆ:
11 ದೀಪಗಳ ಸೇವೆ – ₹110
100 ದೀಪಗಳ ಸೇವೆ – ₹1,000
250 ದೀಪಗಳ ಸೇವೆ – ₹2,500
500 ದೀಪಗಳ ಸೇವೆ – ₹5,000
ಸಹಸ್ರ ದೀಪಗಳ ಸೇವೆ – ₹10,000
ರುದ್ರಪಾರಾಯಣ – ₹250
ಏಕಾದಶ ರುದ್ರ – ₹1,500
ಶತವಾರ ರುದ್ರ – ₹5,000
ಒಂದು ದಿನದ ಅನ್ನದಾನ ಸೇವೆ – ₹25,000
ಒಂದು ದಿನದ ಅಲಂಕಾರ ಸೇವೆ (ಹೂವು ಮತ್ತು ವಿದ್ಯುತ್ ದೀಪಾಲಂಕಾರ) – ₹25,000
Also Read>> ಎರಡೂವರೆ ಗಂಟೆ ಜನರ ಸಮಸ್ಯೆ ಆಲಿಸಿದ ಸಚಿವ ಮಧು ಬಂಗಾರಪ್ಪ: ಸ್ಥಳದಲ್ಲೇ ಪರಿಹಾರ ಸೂಚನೆ
ಸಂಕಲ್ಪ ಸೇವೆಗೆ ಹೆಸರು ನೋಂದಾಯಿಸಲು ಅವಕಾಶ
ದೇವರ ಸನ್ನಿಧಿಯಲ್ಲಿ ಸಂಕಲ್ಪ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತರು ತಮ್ಮ ಹೆಸರು, ರಾಶಿ, ನಕ್ಷತ್ರ, ಗೋತ್ರ ಹಾಗೂ ಪ್ರಸಾದ ಕಳುಹಿಸಬೇಕಾದ ವಿಳಾಸದ ವಿವರಗಳನ್ನು 9900039443 ಮೊಬೈಲ್ ಸಂಖ್ಯೆಗೆ ಕಳುಹಿಸಬಹುದು.
ಸೇವಾ ಶುಲ್ಕವನ್ನು ಉಮಾಮಹೇಶ್ವರ ಸೇವಾ ಟ್ರಸ್ಟ್ನ ಬ್ಯಾಂಕ್ ಖಾತೆಗೆ ಅಥವಾ ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ಪಾವತಿಸಬಹುದು.
ಬ್ಯಾಂಕ್ ಖಾತೆ ವಿವರ:
ಖಾತೆ ಸಂಖ್ಯೆ: 3151101005112
IFSC: CNRB0003151
UPI ಪಾವತಿ: 9900039443
ಭಕ್ತರಿಗೆ ಟ್ರಸ್ಟ್ನಿಂದ ಆಹ್ವಾನ
ಹೊಸಗುಂದ ಉತ್ಸವ ಹಾಗೂ ಲಕ್ಷದೀಪೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಉಮಾಮಹೇಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷರು ಹಾಗೂ ಶೃಂಗೇರಿ ಮಠದ ಆಡಳಿತಾಧಿಕಾರಿ ಪಿ.ವಿ.ಮುರಳಿ, ಆಜೀವ ಟ್ರಸ್ಟೀ ಹಾಗೂ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟೀ ಸಿ.ಎಂ.ಎನ್.ಶಾಸ್ತ್ರೀ, ಸಂಸ್ಥಾಪಕ ಟ್ರಸ್ಟೀ ಶೋಭಾ ಎನ್. ಶಾಸ್ತ್ರೀ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










