ಶಿವಮೊಗ್ಗ: ಶಿಕ್ಷಣ ಕ್ಷೇತ್ರದಲ್ಲಿ ಬಾಲಕರಿಗಿಂತಲೂ ಬಾಲಕಿಯರದ್ದೇ ಎಂದಿಗೂ ಮೇಲುಗೈ.. ಅದೇ ಸಾಧನೆಯ ಸಾಲಿಗೆ ಈಗ ಶಿವಮೊಗ್ಗ ಅವಳಿ ಸಹೋದರಿಯರು ಸೇರಿದ್ದಾರೆ.
2018ನೆಯ ಸಾಲಿನ 10ನೆಯ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಹಾಗೂ ತೃತೀಯ ಮತ್ತು ಮಂದಾರ ಶಾಲೆಗೆ ಪ್ರಥಮ ಹಾಗೂ ದ್ವಿತೀಯ ಟಾಪರ್‌ಗಳಾಗಿ ಎಸ್. ಶ್ರೇಯ (500ಕ್ಕೆ 486: ಶೇ.97.2) ಹಾಗೂ ಎಸ್. ಶ್ರಾವ್ಯ (500ಕ್ಕೆ 481: ಶೇ.96.2) ತೇರ್ಗಡೆ ಹೊಂದಿದ್ದಾರೆ.
ಈ ಇಬ್ಬರು ಅವಳಿ ಸಹೋದರಿಯರು ನಗರದ ಮಂದಾರ ಜ್ಞಾನದಾಯಿನಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಪ್ರಾದ್ಯಾಪಕರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಸಿ.ಎಂ. ಸಿದ್ದಲಿಂಗಪ್ಪ ಮತ್ತು ಡಾ.ಟಿ.ಕೆ. ವಸುಧಾ ದಂಪತಿಗಳ ಪುತ್ರಿಯರು.
ಈ ಕುರಿತಂತೆ ಮಾತನಾಡಿದ ಅವಳಿ ಸಹೋದರಿಯರು, ಯಾವುದೇ ಟ್ಯೂಶನ್ ಇಲ್ಲದೆ ಈ ಸಾಧನೆಗೆ ತಮ್ಮ ಕಠಿಣ ಶ್ರಮ, ಗುರುಗಳ ಹಾಗೂ ಪೋಷಕರ ಮಾರ್ಗದರ್ಶನ ಕಾರಣ ಎಂದಿದ್ದಾರೆ.
Discussion about this post